ಇಂಡೋ-ವಿಂಡೀಸ್ ಟೆಸ್ಟ್: ಭಾರತದ ಅಬ್ಬರಕ್ಕೆ ಕಂಗಾಲಾದ ವೆಸ್ಟ್ಇಂಡೀಸ್

By Web DeskFirst Published Oct 5, 2018, 4:53 PM IST
Highlights

ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ದ್ವಿತೀಯ ದಿನವೂ ಆರ್ಭಟ ಮುಂದುವರಿಸಿದೆ. 2ನೇ ದಿನ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವಿಂಡೀಸ್ ತಂಡವನ್ನ ಕಾಡಿತು. ಇಲ್ಲಿದೆ ದ್ವಿತೀಯ ದಿನದ ಹೈಲೈಟ್ಸ್.

ರಾಜ್‌ಕೋಟ್(ಅ.05): ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನವೂ ಭಾರತ ಮೇಲುಗೈ ಸಾಧಿಸಿದೆ. ಆರಂಭದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ, ಬಳಿಕ ಬೌಲಿಂಗ್‌ನಲ್ಲೂ ವೆಸ್ಟ್ಇಂಡೀಸ್ ತಂಡಕ್ಕೆ ಆಘಾತ ನೀಡಿತು. 

ದ್ವಿತೀಯ ದಿನದಾಟದಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್‌ಗಳೊಂದಿಗೆ ಇನ್ನಿಂಗ್ಸ್ ಮುುಂದುವರಿಸಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಆಸರೆಯಾದರು.  ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 24ನೇ ಶತಕ ಸಿಡಿಸಿದರು. ಕೊಹ್ಲಿ 139ರನ್ ಸಿಡಿಸಿದರು.

ರಿಷಬ್ ಪಂತ್ 92 ರನ್ ಕಾಣಿಕೆ ನೀಡಿದರು.  ರವೀಂದ್ರ ಜಡೇಜಾ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಜಡೇಜಾ ಸೆಂಚುರಿ ಪೂರೈಸುತ್ತಿದ್ದಂತೆ, ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು ಭಾರತ 9 ವಿಕೆಟ್ ನಷ್ಟಕ್ಕೆ 649 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು.  

ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ಇಂಡೀಸ್ ಬ್ಯಾಟಿಂಗ್‌ನಲ್ಲೂ ಕಳಪೆ ಪ್ರದರ್ಶನ ನೀಡಿತು. ವೆಸ್ಟ್ಇಂಡೀಸ್ 2 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಕ್ರೈಗ್ ಬ್ರಾಥ್ವೈಟ್ 2 ರನ್ ಸಿಡಿಸಿ ಔಟಾದರು.

ಕೀರನ್ ಪೊವೆಲ್ 1, ಶೈ ಹೋಪ್ 10, ಶಿಮ್ರೋನ್ ಹೆಟ್ಮೆಯರ್ 10 ಹಾಗೂ ಸುನಿಲ್ ಅಂಬ್ರಿಸ್ 12 ರನ್ ಸಿಡಿಸಿ ನಿರ್ಗಮಸಿದರು. ಶೇನ್ ಡೌರಿಚ್ 10 ರನ್‌ಗಳಿಸಿ ಪೆವಿಲಿಯನ್ ಸೇರಿದರು.

ದಿನದಾಟದ ಅಂತ್ಯಕ್ಕೆ ವೆಸ್ಟ್ಇಂಡೀಸ್ 6 ವಿಕೆಟ್ ನಷ್ಟಕ್ಕೆ 94 ರನ್ ಸಿಡಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 555 ರನ್ ಹಿನ್ನಡೆಯಲ್ಲಿದೆ. ಭಾರತದ ಪರ ಮೊಹಮ್ಮದ್ ಶಮಿ 2, ರವೀಂಚಂದ್ರನ್ ಆಶ್ವಿನ್, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದು ಮಿಂಚಿದರು.

click me!