ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈದ್ ಮುಬಾರಕ್

First Published Jun 15, 2018, 2:50 PM IST
Highlights

ಐತಿಹಾಸಿಕ ಭಾರತ -ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದ ದ್ವಿತೀಯ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಂಜಾನ್ ಹಬ್ಬದ ವಾತಾವರಣ ಕಳೆಗಟ್ಟಿತು. ಅಫ್ಘಾನಿಸ್ತಾನ ಆಟಗಾರರ ರಂಜಾನ್ ಹಬ್ಬದ ಆಚರಣೆ ಹೇಗಿತ್ತು? ಇಲ್ಲಿದೆ ವಿವರ.

ಬೆಂಗಳೂರು(ಜೂ.15): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಕೆಲ ವಿಶೇಷತೆಗಳಿಗೆ ಸಾಕ್ಷಿಯಾಯಿತು. ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಆರಂಭಕ್ಕೂ ಮೊದಲು ಅಫ್ಘಾನಿಸ್ತಾನ ತಂಡದ ಆಟಗಾರರು ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿದರು. 

 

Bringing in the festive fever on the ground are players before start of play pic.twitter.com/YisA2IQFJc

— BCCI (@BCCI)

 

ಪಂದ್ಯ ಆರಂಭಕ್ಕೂ ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಆಟಗಾರರು ಪರಸ್ವರ ಈದ್ ಮುಬಾರಕ್ ಹೇಳಿ ರಂಜಾನ್ ಹಬ್ಬಕ್ಕೆ ಶುಭ ಕೋರಿದರು. ಇದಕ್ಕು ಮುನ್ನ ಅಫ್ಘಾನಿಸ್ತಾನ ಆಟಗಾರರು ತಂಗಿದ್ದ ಹೊಟೆಲ್‌ನಲ್ಲಿ ರಂಜಾನ್ ಹಬ್ಬ ಆಚರಿಸಿದರು.

 

Team Afghanistan players and ACB officials celebrated Eid-ul Fitr this morning before departing for the stadium. pic.twitter.com/ckiZVnKnEf

— Afghan Cricket Board (@ACBofficials)

 

ರಂಜಾನ್ ಹಬ್ಬ ಆಫ್ಘಾನಿಸ್ತಾನ ಆಟಗಾರರಿಗೆ ಹೆಚ್ಚು ಸಂತಸ ತರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ ಕೇವಲ 109 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 365 ರನ್‌ಗಳ ಹಿನ್ನಡೆ ಅನುಭವಿಸಿದೆ.

click me!