ಇಂಡೋ-ಆಫ್ಘಾನ್ ಟೆಸ್ಟ್: ಪೆವಿಲಿಯನ್ ಪರೇಡ್ ನಡೆಸಿದ ಆಫ್ಘಾನ್ 109 ರನ್’ಗಳಿಗೆ ಆಲೌಟ್

First Published Jun 15, 2018, 2:27 PM IST
Highlights

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್’ನಲ್ಲಿ 474 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಫ್ಘಾನ್, ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಹೋಗಿದೆ.

ಬೆಂಗಳೂರು[ಜೂ.15]: ಟೀಂ ಇಂಡಿಯಾ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿದ ಆಫ್ಘಾನ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಕೇವಲ 109 ರನ್’ಗಳಿಗೆ ಆಲೌಟ್ ಆಗುವ ಮೂಲಕ 365 ರನ್’ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ. ಭಾರೀ ಹಿನ್ನಡೆ ಅನುಭವಿಸಿರುವ ಆಫ್ಘಾನಿಸ್ತಾನ ಫಾಲೋ ಆನ್ ಬಲೆಗೆ ಸಿಲುಕಿದೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್’ನಲ್ಲಿ 474 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಫ್ಘಾನ್, ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಹೋಗಿದೆ. ಪಂದ್ಯದ 4ನೇ ಓವರ್’ನಲ್ಲಿ ಆರಂಭಿಕ ಮೊಹಮ್ಮದ್ ಶೆಹಜಾದ್ ಇಲ್ಲದ ರನ್ ಕದಿಯಲು ಹೋಗಿ ರನೌಟ್’ಗೆ ಬಲಿಯಾದರು. ಇದಾದ ಕೆಲಹೊತ್ತಿನಲ್ಲೇ ಜಾವೇದ್’ರನ್ನು ಇಶಾಂತ್ ಶರ್ಮಾ ಕ್ಲೀನ್ ಬೌಲ್ಡ್ ಮಾಡಿದರು. ರಹಮತ್ ಶಾ[14] ತಂಡಕ್ಕೆ ಅಲ್ಪ ಚೇತರಿಕೆ ನೀಡಲು ಪ್ರಯತ್ನಿಸಿದರಾದರೂ ಅವರನ್ನು ಉಮೇಶ್ ಯಾದವ್ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ನೆಲೆಯೂರಲು ಬಿಡಲಿಲ್ಲ. ನಾಯಕ ಅಸ್ಗರ್ ಹಾಗೂ ಹಸ್ಮತುಲ್ಲಾ ಶಾಹಿದಿ ತಲಾ 11 ರನ್ ಬಾರಿಸಿ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೆಳಕ್ರಮಾಂಕದಲ್ಲಿ ಆಲ್ರೌಂಡರ್ ಮೊಹಮ್ಮದ್ ನಬೀ ತಂಡಕ್ಕೆ ಅಲ್ಪ ಆಸರೆಯಾಗಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್’ಮನ್’ಗಳು ಪ್ರತಿರೋದ ತೋರಲಿಲ್ಲ. ನಬೀ 24 ರನ್ ಬಾರಿಸಿದ್ದೇ ಆಫ್ಘಾನ್ ಪರ ಗರಿಷ್ಠ ವಯುಕ್ತಿಕ ಮೊತ್ತವೆನಿಸಿತು. 

ಭಾರತ ಪರ ಆಶ್ವಿನ್ 4 ವಿಕೆಟ್ ಪಡೆದರೆ, ಜಡೇಜಾ ಹಾಗೂ ಇಶಾಂತ್ ಶರ್ಮಾ ತಲಾ 2 ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಆಫ್ಘಾನಿಸ್ತಾನ: 109/10
ಮೊಹಮ್ಮದ್ ನಬೀ: 24
ಅಶ್ವಿನ್: 27/4
ಭಾರತ: 474/10
ಧವನ್: 107
ಯಾಮಿನ್: 51/3

click me!