ರಷೀದ್ ಬೌಲಿಂಗ್'ಗೆ ಕೆರಿಬಿಯನ್ನರು ಮೊಟ್ಯಾಶ್..! ವೆಸ್ಟ್ ಇಂಡೀಸ್'ಗೆ ಶಾಕ್ ಕೊಟ್ಟ ಆಫ್ಘಾನಿಸ್ತಾನ

By Suvarna Web DeskFirst Published Jun 10, 2017, 7:30 PM IST
Highlights

ಏಕದಿನ ಕ್ರಿಕೆಟ್'ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಫ್ಘಾನಿಸ್ತಾನಕ್ಕೆ ಇದು ಮೊದಲ ಗೆಲುವಾಗಿದೆ. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಆಫ್ಘನ್ನರು 1-0 ಮುನ್ನಡೆ ಹೊಂದಿದ್ದಾರೆ. ಇದಕ್ಕೆ ಮುಂಚೆ ನಡೆದ ಟಿ20 ಕ್ರಿಕೆಟ್ ಸರಣಿಯನ್ನು ವೆಸ್ಟ್ ಇಂಡೀಸ್ 3-0ಯಿಂದ ವೈಟ್'ವಾಶ್ ಮಾಡಿತ್ತು. ಇನ್ನು, 2ನೇ ಏಕದಿನ ಕ್ರಿಕೆಟ್ ಪಂದ್ಯವು ನಾಳೆ, ಅಂದರೆ ಜೂನ್ 11ರಂದು ಇದೇ ಮೈದಾನದಲ್ಲಿ ನಡೆಯಲಿದೆ. ಐಪಿಎಲ್'ನಲ್ಲಿ ಸನ್'ರೈಸರ್ಸ್'ನ ಬೌಲರ್ ಆಗಿ ಮಿಂಚಿದ್ದ ರಷೀದ್ ಖಾನ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಸೇಂಟ್ ಲೂಸಿಯಾ, ವಿಂಡೀಸ್: ಆಫ್ಘಾನಿಸ್ತಾನ ಕ್ರಿಕೆಟ್ ತಂಡ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ದೈತ್ಯ ತಂಡವೊಂದಕ್ಕೆ ಶಾಕ್ ಕೊಟ್ಟಿದೆ. ವೆಸ್ಟ್ ಇಂಡೀಸ್ ವಿರುದ್ಧ ಆಫ್ಘಾನಿಸ್ತಾನ ಅಬ್ಬರಿಸಿ ಬೊಬ್ಬಿರಿದಿದೆ. ನಿನ್ನೆ ಆರಂಭಗೊಂಡ ವೆಸ್ಟ್ ಇಂಡೀಸ್-ಆಫ್ಘಾನಿಸ್ತಾನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆಫ್ಘನ್ನರು 63 ರನ್'ಗಳಿಂದ ಜಯಭೇರಿ ಭಾರಿಸಿದ್ದಾರೆ. ಆಫ್ಘನ್ನರು ಇದೂವರೆಗೆ ಸಾಧಿಸಿದ ಗೆಲುವುಗಳಲ್ಲಿ ಇದು ಅತೀ ದೊಡ್ಡದು.

ನಿನ್ನೆಯ ಪಂದ್ಯದಲ್ಲಿ ಆಫ್ಘನ್ ಗೆಲುವಿನ ಸೂತ್ರದಾರ ರಷೀದ್ ಖಾನ್. 18 ವರ್ಷದ ಪ್ರತಿಭಾನ್ವಿತ ಲೆಗ್'ಸ್ಪಿನ್ನರ್ ಆಗಿರುವ ರಷೀದ್ ಖಾನ್ 18 ರನ್ನಿತ್ತು 7 ವಿಕೆಟ್ ಕಬಳಿಸಿದರು. ಗೆಲ್ಲಲು 213 ರನ್'ಗಳ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ರಷೀದ್ ಖಾನ್ ಸ್ಪಿನ್ ಗಾಳಕ್ಕೆ ಸಿಕ್ಕು ಕೇವಲ 149 ರನ್'ಗೆ ಆಲೌಟ್ ಆಯಿತು. ಪ್ರಮುಖ ಆಟಗಾರರಿಲ್ಲದೇ ಕಣಕ್ಕಿಳಿದ ವೆಸ್ಟ್ ಇಂಡೀಸ್ ಸ್ವಲ್ಪವೂ ಪ್ರತಿರೋಧ ತೋರದೇ ಶರಣಾಯಿತು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನದ ಇನ್ನಿಂಗ್ಸಲ್ಲಿ ಹೈಲೈಟ್ ಆಗಿದ್ದು ಆರಂಭಿಕ ಬ್ಯಾಟ್ಸ್'ಮ್ಯಾನ್ ಜೇವೇದ್ ಅಹ್ಮದಿ ಅವರ 81 ರನ್'ಗಳ ಇನ್ನಿಂಗ್ಸ್. 2 ಸಿಕ್ಸರ್'ಗಳ ಸಹಿತ 102 ಬಾಲ್'ನಲ್ಲಿ ಅವರು 81 ರನ್ ಸಿಡಿಸಿದರು. 8ನೇ ಕ್ರಮಾಂಕದಲ್ಲಿ ಬಂದ ಗುಲ್'ಬದಿನ್ ನಯಿಬ್ ಕೇವಲ 28 ಬಾಲ್'ನಲ್ಲಿ ಅಜೇಯ 41 ರನ್'ಗಳಿಸಿದರು. ಮೊಹಮ್ಮದ್ ನಬಿ ಕೂಡ ಮಿಂಚಿನ ಗತಿಯಲ್ಲಿ 27 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂವರು ಬ್ಯಾಟುಗಾರರಿಂದಾಗಿ ಆಫ್ಘಾನಿಸ್ತಾನದ ಸ್ಕೋರು 200 ರನ್ ಗಡಿ ದಾಟಲು ಸಾಧ್ಯವಾಯಿತು.

ಏಕದಿನ ಕ್ರಿಕೆಟ್'ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಫ್ಘಾನಿಸ್ತಾನಕ್ಕೆ ಇದು ಮೊದಲ ಗೆಲುವಾಗಿದೆ. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಆಫ್ಘನ್ನರು 1-0 ಮುನ್ನಡೆ ಹೊಂದಿದ್ದಾರೆ. ಇದಕ್ಕೆ ಮುಂಚೆ ನಡೆದ ಟಿ20 ಕ್ರಿಕೆಟ್ ಸರಣಿಯನ್ನು ವೆಸ್ಟ್ ಇಂಡೀಸ್ 3-0ಯಿಂದ ವೈಟ್'ವಾಶ್ ಮಾಡಿತ್ತು. ಇನ್ನು, 2ನೇ ಏಕದಿನ ಕ್ರಿಕೆಟ್ ಪಂದ್ಯವು ನಾಳೆ, ಅಂದರೆ ಜೂನ್ 11ರಂದು ಇದೇ ಮೈದಾನದಲ್ಲಿ ನಡೆಯಲಿದೆ. ಐಪಿಎಲ್'ನಲ್ಲಿ ಸನ್'ರೈಸರ್ಸ್'ನ ಬೌಲರ್ ಆಗಿ ಮಿಂಚಿದ್ದ ರಷೀದ್ ಖಾನ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಸ್ಕೋರು ವಿವರ.

ಆಫ್ಘಾನಿಸ್ತಾನ 50 ಓವರ್ 212/6
(ಜಾವೇದ್ ಅಹ್ಮದಿ 81, ಗುಲ್ಬಾದಿನ್ ನಯಿಬ್ ಅಜೇಯ 41, ಮೊಹಮ್ಮದ್ ನಬಿ ಅಜೇಯ 27 ರನ್ - ಆ್ಯಷ್ಲೆ ನರ್ಸ್ 34/2)

ವೆಸ್ಟ್ ಇಂಡೀಸ್ 44.4 ಓವರ್ 149 ರನ್ ಆಲೌಟ್
(ಶಾಯ್ ಹೋಪ್ 35, ಆಲ್ಝರಿ ಜೋಸೆಫ್ 27 ರನ್ - ರಷೀದ್ ಖಾನ್ 18/7, ದಾವ್ಲತ್ ಝಡ್ರನ್ 25/2)

click me!