AFC ಏಷ್ಯನ್ ಕಪ್: ಭಾರತದ ನಾಕೌಟ್‌ ಕನಸು ಭಗ್ನ

Published : Jan 15, 2019, 09:24 AM IST
AFC ಏಷ್ಯನ್ ಕಪ್:  ಭಾರತದ ನಾಕೌಟ್‌ ಕನಸು ಭಗ್ನ

ಸಾರಾಂಶ

AFC ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ನಾಕೌಟ್ ಹಂತಕ್ಕೇರಲು ಹೋರಾಟ ನಡೆಸಿದ ಭಾರತ 0-1 ಅಂತರದಲ್ಲಿ ಸೋಲು ಅನುಭವಿಸಿದೆ. ಭಾರತದ ಸಣ್ಣ ಎಡವಟ್ಟು ಎದುರಾಳಿಗೆ ಗೆಲುವು ತಂದುಕೊಟ್ಟಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್.

ಶಾರ್ಜಾ(ಜ.15): ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ನಾಕೌಟ್‌ ಹಂತಕ್ಕೇರುವ ಭಾರತದ ಕನಸು ಭಗ್ನಗೊಂಡಿದೆ. ಸೋಮವಾರ ಇಲ್ಲಿ ನಡೆದ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ, ಬಹರೇನ್‌ ವಿರುದ್ಧ 0-1 ಗೋಲಿನ ಅಂತರದಲ್ಲಿ ಸೋಲು ಅನುಭವಿಸಿತು. 90+1ನೇ ನಿಮಿಷದಲ್ಲಿ ಪಂದ್ಯಕ್ಕೆ ನಾಯಕತ್ವ ವಹಿಸಿದ್ದ ಪ್ರಣಯ್‌ ಹಲ್ದರ್‌ ಮಾಡಿದ ತಪ್ಪಿನಿಂದಾಗಿ ಬಹರೇನ್‌ಗೆ ಪೆನಾಲ್ಟಿಅವಕಾಶ ಸಿಕ್ಕಿತು. ಜಮಾಲ್‌ ರಶೀದ್‌ ಪೆನಾಲ್ಟಿಅವಕಾಶದಲ್ಲಿ ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರೂ ಭಾರತ ನಾಕೌಟ್‌ಗೆ ಪ್ರವೇಶ ಪಡೆಯುತಿತ್ತು.

ಇದನ್ನೂ ಓದಿ: ಬೆಂಗಳೂರು ರ‍್ಯಾಪ್ಟರ್ಸ್ PBL ಚಾಂಪಿಯನ್

ಈ ಪಂದ್ಯದಲ್ಲಿ ಸೋತ ಹೊರತಾಗಿಯೂ ಭಾರತ ನಾಕೌಟ್‌ಗೇರುವ ಸಾಧ್ಯತೆ ಇತ್ತು. ಥಾಯ್ಲೆಂಡ್‌ ವಿರುದ್ಧ ಪಂದ್ಯದಲ್ಲಿ ಯುಎಇ ಗೆಲ್ಲಬೇಕಿತ್ತು. ಆದರೆ ಪಂದ್ಯ 1-1ರಲ್ಲಿ ಡ್ರಾಗೊಂಡ ಕಾರಣ, ‘ಎ’ ಗುಂಪಿನಲ್ಲಿ ಭಾರತ ಕೊನೆ ಸ್ಥಾನ ಪಡೆದು ಹೊರಬಿತ್ತು. ಮೊದಲ 3 ಸ್ಥಾನಗಳನ್ನು ಪಡೆದ ತಂಡಗಳು ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಪ್ರವೇಶ ಪಡೆದವು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂತು. ಭಾರತಕ್ಕೆ ಕೆಲ ಗೋಲು ಬಾರಿಸುವ ಅವಕಾಶಗಳಿದ್ದರೂ ಅದರ ಲಾಭವೆತ್ತುವಲ್ಲಿ ತಂಡ ವಿಫಲವಾಯಿತು. ದ್ವಿತೀಯಾರ್ಧದ ಆರಂಭದಿಂದಲೂ ಬಹರೇನ್‌ ಆಕ್ರಮಣಕಾರಿ ಆಟವಾಡಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಭಾರತೀಯರು ಸಂಪೂರ್ಣವಾಗಿ ವಿಫಲರಾದರು. ಕನಿಷ್ಠ 30 ಸೆಕೆಂಡ್‌ ಸಹ ಚೆಂಡು ಭಾರತೀಯರ ಬಳಿ ಉಳಿಯುತ್ತಿರಲಿಲ್ಲ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲೂ KGF ಹವಾ-ಯಶ್ ಭೇಟಿಯಾದ ಬ್ಯಾಟ್ಸ್‌ಮನ್!

ಗೋಲ್‌ ಕೀಪರ್‌ ಗುರ್‌ಪ್ರೀತ್‌ ಹಾಗೂ ಡಿಫೆಂಡರ್‌ಗಳ ಹೋರಾಟದ ಫಲವಾಗಿ ಬಹರೇನ್‌ ಗೋಲು ಗಳಿಸಲು ಎಷ್ಟೇ ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಆದರೆ ಪಂದ್ಯದ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿ ಇದ್ದಾಗ ಪ್ರಣಯ್‌ ಮಾಡಿದ ಎಡವಟ್ಟು ಭಾರತದ ಸೋಲಿಗೆ ಕಾರಣವಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ಕೋಲ್ಕತಾ ಸ್ಟೇಡಿಯಂನಿಂದ ಲಿಯೋನೆಲ್ ಮೆಸ್ಸಿ ಬೇಗ ನಿರ್ಗಮನ; ಮಿತಿಮೀರಿದ ಅಭಿಮಾನಿಗಳ ದಾಂಧಲೆ!