
ಮ್ಯಾಡ್ರಿಡ್(ನ.28): ಭಾರತದ ತಾರಾ ಗಾಲ್ಫ್ ಪಟು, ಕರ್ನಾಟಕದ ಅದಿತಿ ಅಶೋಕ್ ಸ್ಪಾನಿಷ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅವರು 17 ಅಂಕಗಳ ಅಂತರದಲ್ಲಿ ಗೆದ್ದು ಚಾಂಪಿಯನ್ ಎನಿಸಿಕೊಂಡರು. ಇದು ಅವರಿಗೆ ಈ ವರ್ಷದ 2ನೇ ಎಲ್‌ಇಟಿ(ಲೇಡಿಸ್ ಯುರೋಪಿಯನ್ ಟೂರ್) ಪ್ರಶಸ್ತಿಯಾಗಿದ್ದು, ಈಗಾಗಲೇ ಕೀನ್ಯಾ ಓಪನ್‌ನಲ್ಲೂ ಚಾಂಪಿಯನ್ ಆಗಿದ್ದರು.
1976 ಬಳಿಕ ಮೊದಲ ಸಲ ಡೇವಿಸ್ ಕಪ್ ಗೆದ್ದ ಇಟಲಿ
ಮಲಾಗ(ಸ್ಪೇನ್): ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಇಟಲಿ 1976ರ ಬಳಿಕ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೋಮವಾರ ನಡೆದ ಫೈನಲ್‌ನಲ್ಲಿ ಇಟಲಿ, ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತು. ಮ್ಯಾಥ್ಯೂ ಅರ್ನಾಲ್ಡಿ ಮೊದಲ ಸಿಂಗಲ್ಸ್‌ನಲ್ಲಿ ಗೆದ್ದರೆ, ವಿಶ್ವ ನಂ.4 ಜಾನಿಕ್ ಸಿನ್ನರ್ 2ನೇ ಸಿಂಗಲ್ಸ್‌ನಲ್ಲಿ ಜಯಭೇರಿ ಬಾರಿಸುವ ಮೂಲಕ ಇಟಲಿ ಪ್ರಶಸ್ತಿಗೆ ಮುತ್ತಿಟ್ಟಿತು. ಕಳೆದ ವಾರ ಸಿನ್ನರ್, ಸರ್ಬಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ನೋವಾಕ್ ಜೋಕೋವಿಚ್‌ರನ್ನು ಸೋಲಿಸಿದ್ದರು.
ಏಷ್ಯಾಕಪ್ ಬಳಿಕ ಪಾಕ್‌ಗೆ ಮತ್ತೊಂದು ಶಾಕ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ದುಬೈಗೆ ಶಿಫ್ಟ್ ಸಾಧ್ಯತೆ!
ವನಿತಾ ಫುಟ್ಬಾಲ್: ಡ್ರಾಗೆ ತೃಪ್ತಿಪಟ್ಟ ಕರ್ನಾಟಕ ತಂಡ
ಬೆಂಗಳೂರು: 203-24ರ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸೋಮವಾರ ಚಂಡೀಗಢ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಇದರ ಹೊರತಾಗಿಯೂ ರಾಜ್ಯ ತಂಡ ‘ಸಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 7 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ತನ್ನ ಪಂದ್ಯಗಳನ್ನು ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆಡುತ್ತಿರುವ ರಾಜ್ಯ ತಂಡ, ಮೊದಲೆರಡು ಪಂದ್ಯಗಳಲ್ಲಿ ತ್ರಿಪುರಾ ಹಾಗೂ ಅಸ್ಸಾಂ ವಿರುದ್ಧ ಜಯ ಸಾಧಿಸಿದೆ. ಅತ್ತ ಚಂಡೀಗಢ 3 ಪಂದ್ಯಗಳಲ್ಲಿ 5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಕರ್ನಾಟಕ ತನ್ನ ಮುಂದಿನ ಪಂದ್ಯದಲ್ಲಿ ಗುರುವಾರ ಕೇರಳ ವಿರುದ್ಧ ಸೆಣಸಾಡಲಿದೆ.
ಬರೋಬ್ಬರಿ 9 ವರ್ಷಗಳ ನಂತರ ಮತ್ತೆ WWE ರೆಸ್ಲಿಂಗ್‌ಗೆ ಆಶ್ಚರ್ಯವಾಗಿ ಎಂಟ್ರಿ ಕೊಟ್ಟ ಸಿಎಂ ಪಂಕ್
ಕಲಬುರಗಿ ಐಟಿಎಫ್ ಟೆನಿಸ್: ಇಂದಿನಿಂದ ಪ್ರಧಾನ ಸುತ್ತು
ಕಲಬುರಗಿ: ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯಲ್ಲಿ ಕರ್ನಾಟಕದ ಪ್ರಜ್ವಲ್ ದೇವ್ ಭಾರತೀಯರ ಪೈಕಿ ಅಗ್ರ ಶ್ರೇಯಾಂಕಿತ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಮಂಗಳವಾರ ಪ್ರಧಾನ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿವೆ. ಸೋಮವಾರ ಡ್ರಾ ಪ್ರಕಟಿಸಲಾಯಿತು. ಉಕ್ರೇನ್‌ನ ವ್ಲಾಡಿಸ್ಲಾವ್ ಓರ್ಲೋವ್ 1ನೇ, ಜಪಾನ್‌ನ ರ್‍ಯೂಕಿ ಮತ್ಸುಡಾ 2ನೇ ಶ್ರೇಯಾಂಕ ಪಡೆದರು. ಪ್ರಜ್ವಲ್ ದೇವ್, ಸಿದ್ಧಾರ್ಥ್ ರಾವತ್, ರಾಮ್‌ಕುಮಾರ್ ಕ್ರಮವಾಗಿ 3, 4, 5ನೇ ಶ್ರೇಯಾಂಕ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.