ಮೊದಲ ಇನ್ನಿಂಗ್ಸ್’ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದ ಪಂತ್, ತಾವಾಡುತ್ತಿರುವ 6ನೇ ಪಂದ್ಯದಲ್ಲಿ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಅಡಿಲೇಡ್[ಡಿ.10]: ಟೀಂ ಇಂಡಿಯಾ ಯುವ ಪ್ರತಿಭೆ ರಿಷಭ್ ಪಂತ್ ಅಡಿಲೇಡ್ ಟೆಸ್ಟ್’ನಲ್ಲಿ 11 ಕ್ಯಾಚ್ ಹಿಡಿಯುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ಕ್ಯಾಚ್ ಹಿಡಿದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನುವ ವಿಶ್ವದಾಖಲೆ ಬರೆದಿದ್ದಾರೆ.
ದಿಗ್ಗಜ ವಿಕೆಟ್’ಕೀಪರ್’ಗಳಾದ ಮಾರ್ಕ್’ಬೌಷರ್, ಆ್ಯಡಂ ಗಿಲ್’ಕ್ರಿಸ್ಟ್, ಕುಮಾರ ಸಂಗಕ್ಕರ, ಎಂ.ಎಸ್. ಧೋನಿಯಿಂದಲೂ ಸಾಧ್ಯವಾಗದಂತಹ ಸಾಧನೆಯನ್ನು ಕೇವಲ 6ನೇ ಟೆಸ್ಟ್ ಪಂದ್ಯದಲ್ಲಿಯೇ ಪಂತ್ ಮಾಡಿ ತೋರಿಸಿದ್ದಾರೆ
21 ವರ್ಷದ ಡೆಲ್ಲಿ ಕ್ರಿಕೆಟಿಗ ಪಂತ್, 11 ಕ್ಯಾಚ್ ಪಡೆಯುವ ಮೂಲಕ ಇಂಗ್ಲೆಂಡ್ ಕ್ರಿಕೆಟಿಗ ಜ್ಯಾಕ್ ರಸೆಲ್[ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್’ಬರ್ಗ್ ಟೆಸ್ಟ್-1995], ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್[ಪಾಕಿಸ್ತಾನ ವಿರುದ್ಧ ಜೊಹಾನ್ಸ್’ಬರ್ಗ್ ಟೆಸ್ಟ್-2013] ಅವರ ವಿಶ್ವದಾಖಲೆ[11 ಕ್ಯಾಚ್]ಯನ್ನು ಸರಿಗಟ್ಟುವ ಮೂಲಕ ಈ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಮೊಹಮ್ಮದ್ ಶಮಿ ಬೌಲಿಂಗ್’ನಲ್ಲಿ ಮಿಚೆಲ್ ಸ್ಟಾರ್ಕ್ ಕ್ಯಾಚ್ ಪಡೆಯುತ್ತಿದ್ದಂತೆ ಪಂತ್ ವಿಶ್ವದಾಖಲೆ ಸರಿಗಟ್ಟಿದರು. ಪಂತ್ ಮೊದಲ ಇನ್ನಿಂಗ್ಸ್’ನಲ್ಲಿ 6 ಹಾಗೂ ಎರಡನೇ ಇನ್ನಿಂಗ್ಸ್’ನಲ್ಲಿ 5 ಕ್ಯಾಚ್ ಹಿಡಿದಿದ್ದಾರೆ.
ಮೊದಲ ಇನ್ನಿಂಗ್ಸ್’ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದ ಪಂತ್, ತಾವಾಡುತ್ತಿರುವ 6ನೇ ಪಂದ್ಯದಲ್ಲಿ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.