ಪವರ್ ಬೋಟ್ ಇಂಡಿಯಾ ಜಿಪಿ ಗೆದ್ದ ಶಾನ್ ಟಾರಂಟೆ!

Published : Nov 19, 2018, 10:29 AM IST
ಪವರ್ ಬೋಟ್ ಇಂಡಿಯಾ ಜಿಪಿ ಗೆದ್ದ ಶಾನ್ ಟಾರಂಟೆ!

ಸಾರಾಂಶ

ವಿಜಯವಾಡದಲ್ಲಿ ಆಯೋಜಿಸಲಾದ ಎಫ್‌1ಎಚ್‌2ಓ ಪವರ್‌ಬೋಟ್ ವಿಶ್ವ ಚಾಂಪಿಯನ್ ಶಿಪ್‌ನ ಇಂಡಿಯಾ ಗ್ರ್ಯಾನ್ ಪ್ರೀ ರೇಸ್‌ ಅಂತ್ಯಗೊಂಡಿದೆ. ರೋಚಕ ರೇಸ್‌ನಲ್ಲಿ ಅಬುಧಾಬಿ ತಂಡದ ಅಮೆರಿಕ ಚಾಲಕ ಶಾನ್ ಟಾರೆಂಟೆ ಚಾಂಪಿಯನ್ ಆಗಿದ್ದಾರೆ.  ರೇಸ್‌ನ ಹೈಲೈಟ್ಸ್ ಇಲ್ಲಿದೆ.

ವಿಜಯವಾಡ(ನ.19): ಎಫ್‌1ಎಚ್‌2ಓ ಪವರ್‌ಬೋಟ್ ವಿಶ್ವ ಚಾಂಪಿಯನ್ ಶಿಪ್‌ನ ಇಂಡಿಯಾ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಅಬುಧಾಬಿ ತಂಡದ ಅಮೆರಿಕ ಚಾಲಕ ಶಾನ್ ಟಾರೆಂಟೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ಇಲ್ಲಿನ ಕೃಷ್ಣಾ ನದಿ ದಂಡೆಯಲ್ಲಿರುವ ಪುನ್ನಮಿ ಘಾಟ್‌ನಲ್ಲಿ ನಡೆದ ಫೈನಲ್‌ನಲ್ಲಿ ಶಾನ್ ಆಕರ್ಷಕ ಪ್ರದರ್ಶನ ತೋರಿದರು. 

2.125 ಕಿ.ಮೀ ಟ್ರ್ಯಾಕ್‌ನಲ್ಲಿ ನಡೆದ 44 ಲ್ಯಾಪ್‌ಗಳನ್ನು (93.5 ಕಿ.ಮೀ) ಅಮೆರಿಕದ ಚಾಲಕ 47 ನಿಮಿಷ 37 ಸೆಕೆಂಡ್‌ಗಳಲ್ಲಿ ಮುಕ್ತಾಯಗೊಳಿಸಿದರು. ಶಾನ್‌ಗಿಂತ 2.17 ಸೆಕೆಂಡ್ ಹೆಚ್ಚು ಸಮಯ ತೆಗೆದುಕೊಂಡ ಟೀಂ ಎಮಿರೇಟ್ಸ್‌ನ, ನಾರ್ವೆ ದೇಶದ ಮಹಿಳಾ ಚಾಲಕಿ ಮರಿಟ್ ಸ್ಟ್ರೊಮೊಯ್ 2ನೇ ಸ್ಥಾನ ಗಳಿಸಿದರೆ, ಟೀಂ ಅಬುಧಾಬಿಯ ಸ್ವೀಡನ್ ಚಾಲಕ ಎರಿಕ್ ಸ್ಟಾರ್ಕ್, ಟಾರೆಂಟೆಗಿಂತ 3.53 ಸೆಕೆಂಡ್ ನಿಧಾನವಾಗಿ ರೇಸ್ ಮುಕ್ತಾಯಗೊಳಿಸಿ 3ನೇ ಸ್ಥಾನ ಪಡೆದರು.

ವಿಜೇತರಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಶಸ್ತಿ ವಿತರಿಸಿದರು. ಆಂಧ್ರದ ಪ್ರವಾಸೋದ್ಯಮ ಸಚಿವೆ ಭೂಮ ಅಖಿಲ ಪ್ರಿಯ ಸಹ ಉಪಸ್ಥಿತರಿದ್ದರು. ಈ ಗೆಲುವಿನೊಂದಿಗೆ ಟಾರೆಂಟೆ ಚಾಲಕರ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಈ ವರ್ಷ ಇನ್ನೆರಡು ರೇಸ್‌ಗಳು ಬಾಕಿ ಇದ್ದು, ಟಾರೆಂಟೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವ ಗುರಿ ಹೊಂದಿದ್ದಾರೆ.

ಅಮರಾವತಿ ತಂಡಕ್ಕೆ ನಿರಾಸೆ: ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದ ಟೀಂ ಅಮರಾವತಿಯ ಸ್ವೀಡನ್ ಚಾಲಕ ಜೊನಾಸ್ ಆ್ಯಂಡರ್‌ಸನ್, 37ನೇ ಲ್ಯಾಪ್ ವರೆಗೂ 4ನೇ ಸ್ಥಾನದಲ್ಲಿದ್ದರು. ಆದರೆ 33ನೇ ಲ್ಯಾಪ್ ಮುಕ್ತಾಯಗೊಳಿಸಿದ ಬಳಿಕ ತಾಂತ್ರಿಕ ಸಮಸ್ಯೆಯಿಂದಾಗಿ ರೇಸ್‌ನಿಂದ ಹೊರಬೀಳ ಬೇಕಾಯಿತು. ಅರ್ಹತಾ ಸುತ್ತಿನಲ್ಲಿ ಕೊನೆ (19ನೇ) ಸ್ಥಾನ ಪಡೆದಿದ್ದ ಅಮರಾವತಿಯ ಮತ್ತೊಬ್ಬ ಚಾಲಕ, ಸ್ವೀಡನ್‌ನ ಎರಿಕ್ ಎಡಿನ್ 6ನೇ ಸ್ಥಾನ ಪಡೆದು ಸ್ಥಳೀಯ ಅಭಿಮಾನಿಗಳನ್ನು ಸಂತಸ ಪಡಿಸಿದರು.

ಮರಿಟ್ ವೇಗದ ಲ್ಯಾಪ್: ಮಹಿಳಾ ಚಾಲಕಿ ಮರಿಟ್ ಸ್ಟ್ರೊಮೊಯ್ ರೇಸ್‌ನ ವೇಗದ ಲ್ಯಾಪ್ ಹಿರಿಮೆ ಪಡೆದರು. 2.125 ಕಿ.ಮೀ ದೂರವನ್ನು 47 ಸೆಕೆಂಡ್‌ಗಳಲ್ಲಿ ಕ್ರಮಿಸಿ ವೇಗವಾಗಿ ಲ್ಯಾಪ್ ಒಂದನ್ನು ಮುಗಿಸಿದ ದಾಖಲೆಗೆ ಪಾತ್ರರಾದರು. 

 ಸ್ಪಂದನ್ ಕಣಿಯಾರ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?