
ಇತ್ತೀಚೆಗೆ ಭಾರತದ ಉದಯೋನ್ಮುಖ ಬ್ಯಾಟರ್ ಅಭಿಷೇಕ್ ಶರ್ಮಾ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಪರಮಶಿವನಿಗೆ (ಮಹಾದೇವನಿಗೆ) ನಮಸ್ಕರಿಸಿ ಧನ್ಯವಾದ ಅರ್ಪಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ವಿಷಯದಲ್ಲಿ ಎಡಪಂಥೀಯರ ದ್ವಂದ್ವ ನೀತಿಯನ್ನು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕಟುವಾಗಿ ವಿಮರ್ಶಿಸಿದ್ದು, ಸೂಕ್ತ ತಿರುಗೇಟು ನೀಡಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ಆಟಗಾರರು ತಮ್ಮ ನಂಬಿಕೆ ಮತ್ತು ಶ್ರದ್ಧೆಯನ್ನು ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ, ಕೆಲವು ನಿರ್ದಿಷ್ಟ ವ್ಯಕ್ತಿಗಳು ಹಾಗೂ ಎಡಪಂಥೀಯರು ಈ ವಿಚಾರದಲ್ಲಿ ತೋರಿಸುವ ತಾರತಮ್ಯ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಪಂದ್ಯದ ಮಧ್ಯದಲ್ಲೇ ಮೈದಾನದಲ್ಲಿ ನಮಾಜ್ ಮಾಡಿದಾಗ ಇದೇ ಎಡಪಂಥೀಯ ವರ್ಗಕ್ಕೆ ಯಾವುದೇ ಅಭ್ಯಂತರವಿರಲಿಲ್ಲ. ಅದನ್ನು ಕ್ರೀಡಾ ಸ್ಪೂರ್ತಿ, ವೈಯಕ್ತಿಕ ನಂಬಿಕೆ ಅಥವಾ ಧಾರ್ಮಿಕ ಸ್ವಾತಂತ್ರ್ಯ ಎಂದು ಬಣ್ಣಿಸಿ ಸಮರ್ಥಿಸಿಕೊಂಡಿದ್ದರು.
ಆದರೆ, ಈಗ ಭಾರತದ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಸಾಧನೆಯ ನಂತರ ಮೈದಾನದಲ್ಲಿ ನಿಂತು ಮಹಾದೇವನಿಗೆ ಶ್ರದ್ಧೆಯಿಂದ ಧನ್ಯವಾದ ಸಲ್ಲಿಸಿದ್ದನ್ನು ನೋಡಿದ ತಕ್ಷಣ, ಅದೇ ವರ್ಗದ ಜನರಿಗೆ ಇದ್ದಕ್ಕಿದ್ದಂತೆ 'ಕ್ರೀಡೆಯಲ್ಲಿ ಧರ್ಮ' ನೆನಪಾಗತೊಡಗಿದೆ! ಅಭಿಷೇಕ್ ಅವರ ಈ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಲು ಮತ್ತು ಅವರ ವಿರುದ್ಧ ದ್ವೇಷ ಕಾರಲು ಶುರು ಮಾಡಿದ್ದಾರೆ.
ಈ ದ್ವಂದ್ವ ನಿಲುವನ್ನು ಕಂಡು ಸುಮ್ಮನಿರದ ಸುರೇಶ್ ರೈನಾ, ಎಡಪಂಥೀಯರ ಸೋಗಲಾಡಿತನವನ್ನು ಬಟ್ಟಲ ಬಯಲು ಮಾಡಿದ್ದಾರೆ. ಪಾಕಿಸ್ತಾನಿ ಆಟಗಾರ ಮೈದಾನದಲ್ಲಿ ನಮಾಜ್ ಮಾಡಿದಾಗ ಮೌನವಾಗಿದ್ದ ಅಥವಾ ಅದನ್ನು ಸಂಭ್ರಮಿಸಿದ ಇವರು, ಭಾರತೀಯ ಆಟಗಾರ ತನ್ನ ಆರಾಧ್ಯ ದೈವ ಮಹಾದೇವನನ್ನು ಸ್ಮರಿಸಿದಾಗ ಮಾತ್ರ ಏಕೆ ಇಷ್ಟೊಂದು ಅಸಹಿಷ್ಣುತೆ ತೋರಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇಂದು ಕೆಲವರು ನಮಗೆ 'ಕ್ರೀಡೆಯಿಂದ ಧರ್ಮವನ್ನು ದೂರವಿಡಿ' ಎಂದು ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯಲು ಬಂದರೂ ಆಶ್ಚರ್ಯಪಡಬೇಕಿಲ್ಲ!" ಎಂದು ರೈನಾ ಖಾರವಾಗಿ ವ್ಯಂಗ್ಯವಾಡಿದ್ದಾರೆ. ತಮ್ಮ ಸ್ವಂತ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸುವ ಭಾರತೀಯ ಆಟಗಾರರನ್ನು ಗುರಿಯಾಗಿಸುವುದು ಮತ್ತು ಇತರೆ ದೇಶಗಳ ಆಟಗಾರರ ವಿಚಾರದಲ್ಲಿ ಮೌನ ವಹಿಸುವುದು ಈ ವರ್ಗದ ನಿಜವಾದ ಬಣ್ಣವನ್ನು ತೋರಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ರೈನಾ ಅವರ ಈ ಹೇಳಿಕೆಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬ ಆಟಗಾರನಿಗೂ ಮೈದಾನದಲ್ಲಿ ತನ್ನದೇ ಆದ ರೀತಿಯಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸುವ ಹಕ್ಕಿದೆ. ಒಬ್ಬ ಆಟಗಾರ ನಮಾಜ್ ಮಾಡಿದಾಗ ಅದು ವೈಯಕ್ತಿಕ ಹಕ್ಕು ಎಂದಾದರೆ, ಇನ್ನೊಬ್ಬ ಆಟಗಾರ ಶಿವನನ್ನು ಸ್ಮರಿಸಿದಾಗ ಅದು 'ಕ್ರೀಡೆಯಲ್ಲಿ ಧರ್ಮ ಬೆರೆಸುವುದು' ಹೇಗೆ ಆಗುತ್ತದೆ ಎಂದು ಕ್ರೀಡಾಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸುರೇಶ್ ರೈನಾ ನೀಡಿದ ಈ ಹೇಳಿಕೆಯು ಕ್ರೀಡಾ ವಲಯದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಎಡಪಂಥೀಯರ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಅನಾವರಣಗೊಳಿಸಿದೆ. ಆಟಗಾರರ ವೈಯಕ್ತಿಕ ನಂಬಿಕೆಗಳ ವಿಷಯದಲ್ಲಿ ಈ ರೀತಿಯ ತಾರತಮ್ಯ ಸಲ್ಲದು ಎಂಬ ಸಂದೇಶವನ್ನು ಇದು ಸ್ಪಷ್ಟವಾಗಿ ತಲುಪಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.