ಒತ್ತಡದಿಂದ ಹೊರಬಂದ ದಿಗ್ಗಜ ಕ್ರಿಕೆಟರ್ಸ್: ಇನ್ಮೇಲೆ ಶುರುವಾಗಲಿದೆ ಇಬ್ಬರ ಹವಾ

Published : Jan 11, 2017, 11:07 AM ISTUpdated : Apr 11, 2018, 01:04 PM IST
ಒತ್ತಡದಿಂದ ಹೊರಬಂದ ದಿಗ್ಗಜ ಕ್ರಿಕೆಟರ್ಸ್: ಇನ್ಮೇಲೆ ಶುರುವಾಗಲಿದೆ ಇಬ್ಬರ ಹವಾ

ಸಾರಾಂಶ

ಇಲ್ಲಿಬ್ಬರು ಕ್ರಿಕೆಟರ್ಸ್ ಇದ್ದಾರೆ. ಅವರ ಸ್ನೇಹದ ಬಗ್ಗೆಯೇ ಅಪಸ್ವರಗಳು ಎದ್ದಿದ್ದವು. ಅವರ ಸಂಬಂಧದ ಬಗ್ಗೆಯೂ ಕೆಲವ್ರು ಮಾತನಾಡಿಕೊಂಡಿದ್ರು. ಆದ್ರೆ ಒಂದೇ ಒಂದು ವಿಡಿಯೋ ಎಲ್ಲಾ ಅನುಮಾನಗಳನ್ನ ಅಳಿಸಿಹಾಕಿದೆ. ಅಷ್ಟು ಮಾತ್ರವಲ್ಲ. ಇನ್ಮುಂದೆ ಇವರಿಬ್ಬರ ಹವಾ ಸ್ಟಾರ್ಟ್​ ಆಗಲಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ ಆ ವಿಡಿಯೋ.

ಇಲ್ಲಿಬ್ಬರು ಕ್ರಿಕೆಟರ್ಸ್ ಇದ್ದಾರೆ. ಅವರ ಸ್ನೇಹದ ಬಗ್ಗೆಯೇ ಅಪಸ್ವರಗಳು ಎದ್ದಿದ್ದವು. ಅವರ ಸಂಬಂಧದ ಬಗ್ಗೆಯೂ ಕೆಲವ್ರು ಮಾತನಾಡಿಕೊಂಡಿದ್ರು. ಆದ್ರೆ ಒಂದೇ ಒಂದು ವಿಡಿಯೋ ಎಲ್ಲಾ ಅನುಮಾನಗಳನ್ನ ಅಳಿಸಿಹಾಕಿದೆ. ಅಷ್ಟು ಮಾತ್ರವಲ್ಲ. ಇನ್ಮುಂದೆ ಇವರಿಬ್ಬರ ಹವಾ ಸ್ಟಾರ್ಟ್​ ಆಗಲಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ ಆ ವಿಡಿಯೋ.

ಯುವಿಗೆ ನೋ ಟೆಕ್ಷನ್​

ಯುವರಾಜ್ ಸಿಂಗ್ ಟೀಂ  ಇಂಡಿಯಾಗೆ  ಬ್ಯಾಕ್ ಮಾಡುವ ಕನಸನ್ನೇ ಬಿಟ್ಟಿದ್ದರು. ಆದರೆ ಈಗ ಗ್ರೇಟ್ ಕಮ್​ ಬ್ಯಾಕ್ ಮಾಡಿದ್ದಾರೆ. ಪಂಜಾಬ್ ಪುತ್ತರ್ ಈಗ ನಿರಾಳ. ಯಾವುದೇ ಟೆಕ್ಷನ್ ಇಲ್ಲದೇ ಬ್ಯಾಟಿಂಗ್ ಮಾಡಲಿದ್ದಾರೆ. ಅದನ್ನ ಫಸ್ಟ್ ಪ್ರಾಕ್ಟೀಸ್ ಮ್ಯಾಚ್'​ನಲ್ಲೇ ತೋರಿಸಿಕೊಟ್ಟಿದ್ದಾರೆ. ನೋ ಟೆಕ್ಷನ್ ಬೀ ಹ್ಯಾಪಿ ಅಂತ ಬ್ಯಾಟ್ ಬೀಸಿ ಹಾಫ್ ಸೆಂಚುರಿ ಬಾರಿಸಿದ್ದಾರೆ.

ಕ್ಯಾಪ್ಟನ್ಸಿ ಬಿಟ್ಟ ಮೇಲೆ ಧೋನಿ ಕೂಲ್​

ಇನ್ನು ದಶಕಗಳ ಕಾಲ ಟೀಂ ಇಂಡಿಯಾವನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದ ಧೋನಿ, ಅದನ್ನ ಕೆಳಗಿಸಿ ಈಗ ನಿರಾಳರಾಗಿದ್ದಾರೆ. ಕ್ಯಾಪ್ಟನ್ಸಿಗೆ ಟಾಟಾ ಹೇಳಿರುವ ಮಹಿ, ಇನ್ಮುಂದೆ ಕೇವಲ ಬ್ಯಾಟಿಂಗ್ ಮತ್ತು ಕೀಪಿಂಗ್​ನತ್ತ ಗಮನ ಹರಿಸಲಿದ್ದಾರೆ. ಕ್ಯಾಪ್ಟನ್ ಆಗಿದ್ದಾಗಲೇ ಕೂಲ್ ಎನಿಸಿಕೊಂಡಿದ್ದ ಅವರು, ಅದನ್ನ ತ್ಯಜಿಸಿದ್ಮೇಲೆ ಕೂಲಾಗಿ ಇದ್ದೇ ಇರ್ತಾರೆ. ಇದು ಅಭ್ಯಾಸ ಪಂದ್ಯದಲ್ಲೇ ಸಾಬೀತಾಯಿತು. ಕೂಲ್ ಆಗಿಯೇ ಬ್ಯಾಟ್ ಬೀಸಿದ ಧೋನಿ, ಅರ್ಧಶತಕ ಸಿಡಿಸಿದ್ರು. ಲಾಸ್ಟ್ ಓವರ್​ನಲ್ಲಿ 23 ರನ್ ಚಚ್ಚಿ ಬಿಸಾಕಿದ್ರು.

ಇಂಗ್ಲೆಂಡ್ ವಿರುದ್ಧ ಇವರಿಬ್ಬರೇ ಟ್ರಂಪ್​ಕಾರ್ಡ್​

ದಶಕಗಳ ಕಾಲ ಜೊತೆಯಲ್ಲಿ ಆಡಿದ ಆಟಗಾರರು, ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಟ್ರಂಪ್​ಕಾರ್ಡ್​. ಯಾಕೆ ಗೊತ್ತಾ..? ಇಬ್ಬರಿಗೂ ನೋ ಟೆಕ್ಷನ್. ಒಬ್ಬನಿಗೆ ನಾಯಕತ್ವದ ಒತ್ತಡವಿಲ್ಲ. ಇನ್ನೊಬ್ಬನಿಗೆ ಇನ್ನಷ್ಟು ಉತ್ತಂಗಕ್ಕೇರುವ ಆಸೆಯೂ ಇಲ್ಲ. ಹೀಗಾಗಿ ಎಲ್ಲಾ ಟೆಕ್ಷನ್ ಬಿಟ್ಟು ಬ್ಯಾಟಿಂಗ್ ಮಾಡಲಿದ್ದಾರೆ.

ಯುವಿ ಮೊನ್ನೆಯೇ ಹೇಳಿಕೊಂಡಿದ್ರು. ನಾವಿಬ್ರು ಜೊತೆಯಾದ್ರೆ ಮುಗೀತು. ಎದುರಾಳಿ ಭಯ ನಮಗಿರಲ್ಲ. ಬರೀ ಬೌಂಡ್ರಿ-ಸಿಕ್ಸರ್​ಗಳೇ ಅಂತ. ಈಗ ಮತ್ತೊಮ್ಮೆ ಅದೇ ದಾಟಿಯಲ್ಲಿ ಮಾತನಾಡಿದ್ದಾರೆ. ಧೋನಿ-ಯುವಿ ಸ್ನೇಹ ಹೇಗಿತ್ತು. ಮುಂದೆ ಇವರಿಬ್ಬರು ಏನ್ ಮಾಡ್ತಾರೆ ಅನ್ನೋದನ್ನ ನೀವೇ ನೋಡಿ.

ಕ್ಯಾಪ್ಟನ್ಸಿ ಬಿಟ್ಮೇಲೆ ಧೋನಿ ಕೂಲ್: ಇನ್ಮುಂದೆ ಬೌಂಡರಿ-ಸಿಕ್ಸರ್ ಸುರಿಮಳೆ

ನೀವು ಇದುವರೆಗೂ ನೋಡಿದ್ದು ಓನ್ಲಿ ಟ್ರೈಲರ್. ಪಿಚ್ಚರ್​ ಅಭಿ ಬಾಕಿ ಹೈ ದೋಸ್ತ್ ಅನ್ನೋ ಹಾಗೆ ಇವರಿಬ್ಬರು ಮಾತನಾಡಿದ್ದಾರೆ. ಅಂದ್ರೆ ಇದುವರೆಗೂ ಒತ್ತಡವಿತ್ತು. ಇನ್ನು ಒತ್ತಡವಿಲ್ಲ. ಇನ್ನೈನಿದ್ದರೂ ಬೌಂಡ್ರಿ-ಸಿಕ್ಸರ್​ಗಳ ಸುರಿಮಳೆಗೈಯ್ಯೋದೇ ನಮ್ಮ ಕೆಲ್ಸ ಅನ್ನೋ ಹಾಗೆ ಹೇಳಿಕೊಂಡಿದ್ದಾರೆ. ಅಲ್ಲಿಗೆ ಇನ್ಮುಂದೆ ಧೋನಿ-ಯುವಿ ಹವಾ ಮತ್ತೆ ಸ್ಟಾರ್ಟ್​ ಆಗಲಿದೆ.

ಇಬ್ಬರು ಸೀನಿಯರ್ ಪ್ಲೇಯರ್ಸ್ ಟೀಂ ಇಂಡಿಯಾಗೆ ಇನ್ನಷ್ಟು ಗೆಲುವು ತಂದುಕೊಡಲಿ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿ. ಇವರಾಟದಿಂದ ಭಾರತೀಯ ಕ್ರಿಕೆಟ್ ಇನ್ನಷ್ಟು ಉತ್ತಂಗಕ್ಕೇರಲಿ ಅನ್ನೋದೇ ಅವರ ಅಭಿಮಾನಿಗಲ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಎಸ್‌ಸಿಎಗೆ ರಾಜ್ಯ ಸರ್ಕಾರ ಶಾಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ 'ರೆಡ್ ಸಿಗ್ನಲ್'
2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾದ ಟೀಂ ಇಂಡಿಯಾ!