ಹುಟ್ಟು ಹಬ್ಬದಂದು ವಿಡಿಯೋ ಮೂಲಕ ಗಿಫ್ಟ್ ಹಾಗೂ ಮನದಾಳದ ಮಾತು ಬಿಚ್ಚಿಟ್ಟ ದ್ರಾವಿಡ್!

Published : Jan 11, 2017, 10:49 AM ISTUpdated : Apr 11, 2018, 01:10 PM IST
ಹುಟ್ಟು ಹಬ್ಬದಂದು ವಿಡಿಯೋ ಮೂಲಕ ಗಿಫ್ಟ್ ಹಾಗೂ ಮನದಾಳದ ಮಾತು ಬಿಚ್ಚಿಟ್ಟ ದ್ರಾವಿಡ್!

ಸಾರಾಂಶ

ರಿಕೆಟ್ ಜಗತ್ತು ಕಂಡ ಅತ್ಯಂತ ಸಭ್ಯ ಆಟಗಾರರಲ್ಲಿ ಒಬ್ಬರು ಎಂದೇ ಕರೆಸಿಕೊಳ್ಳುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಪ್ರಸ್ತುತ ಕಿರಿಯರ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ವಾಲ್ ಖ್ಯಾತಿಯ ದ್ರಾವಿಡ್'ಗೆ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಶುಭಾಷಯ ಕೋರುತ್ತಿದ್ದಾರೆ.

ಬೆಂಗಳೂರು(ಜ.11): ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಸಭ್ಯ ಆಟಗಾರರಲ್ಲಿ ಒಬ್ಬರು ಎಂದೇ ಕರೆಸಿಕೊಳ್ಳುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಪ್ರಸ್ತುತ ಕಿರಿಯರ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ವಾಲ್ ಖ್ಯಾತಿಯ ದ್ರಾವಿಡ್'ಗೆ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಶುಭಾಷಯ ಕೋರುತ್ತಿದ್ದಾರೆ.

ಆದರೆ ಈ ಬಾರಿ ರಾಹುಲ್ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ಪೇಜ್'ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇದರೊಂದಿಗೆ 'ನನಗೆ ನನ್ನ ಹುಟ್ಟು ಹಬ್ಬ ಕ್ರಿಕೆಟ್ ನನ್ನ ಜೀವನಕ್ಕೆ ಕೊಟ್ಟ ಕೊಡುಗೆಯನ್ನು ನೆನಪಿಸಿಕೊಳ್ಳುವ ದಿನ. ಪ್ರತಿ ವರ್ಷ ಹುಟ್ಟುಹಬ್ಬದಂದು ಇದು ನನಗೆ ತಪ್ಪದೇ ಸಿಗುವ ಗಿಫ್ಟ್- ಗೆಳೆತನ, ಅನುಭವ, ಪ್ರೀತಿ ಹಾಗೂ ಇದಕ್ಕಿಂತಲೂ ಹೆಚ್ಚು ಸಿಗುತ್ತದೆ. ಇದೆಲ್ಲವೂ ನನಗೆ ಅತ್ಯಧಿಕ ಖುಷಿ ನೀಡುತ್ತದೆ. ಅದೃಷ್ಟವಶಾತ್ ಈ ಕೆಳಗೆ ನೀಡಿರುವ ವಿಡಿಯೋ ಕೂಡಾ ಇತರರೊಂದಿಗೆ ಹಂಚಿಕೊಳ್ಳಬಹುದಾದ ಅತ್ಯಂತ ಸುಂದರ ಗಿಫ್ಟ್ ಆಗಿದೆ' ಎಂಬ ಸಂದೇಶವನ್ನು ಬರೆದಿದ್ದಾರೆ.

ಈ ಮೂಲಕ ಕನ್ನಡಿಗ ರಾಹುಲ್ ದ್ರಾವಿಡ್ ತನ್ನ ಮನದ ಮಾತುಗಳನ್ನು ಬಿಚ್ಚಿಟ್ಟಿದಲ್ಲದೆ, ಕ್ರಿಕೆಟ್ ತನ್ನ ಜೀವನದಲ್ಲಿ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುವುದನ್ನೂ ಸಾಬೀತುಪಡಿಸಿದ್ದಾರೆ. ಇಷ್ಟೇ ಅಲ್ಲದೆ ಕನ್ನಡ ನೆಲ ಹಾಗೂ ಇಲ್ಲಿನ ಕ್ರಿಕೆಟಿಗರ ಮೇಲೆ ತನಗಿರುವ ಪ್ರೀತಿಯನ್ನೂ ವ್ಯಕ್ತಪಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?