ಭಾರತ ಮಹಿಳಾ ಫುಟ್ಬಾಲ್ ತಂಡದ ಕೋಚ್ ಹಾಗೂ ಸಹಾಯಕ ಕೋಚ್ ವಿರುದ್ಧ ಮಣಿಪುರದ ಆಟಗಾರ್ತಿರು ತಿರುಗಿ ಬಿದ್ದಿದ್ದಾರೆ. ಏನಿದು ಸ್ಟೋರಿ ನೀವೇ ನೋಡಿ...
ನವದೆಹಲಿ: ತರಬೇತುದಾರ ಮೆಮೋಲ್ ರಾಕೀ ಮತ್ತು ಸಹಾಯಕ ಕೋಚ್ ಛೋಬಾ ದೇವಿ ಅವರ ಒಡೆದು ಆಳುವ ನೀತಿಗೆ ಬೇಸತ್ತು ಮಣಿಪುರದ ಏಳು ಮಂದಿ ಮಹಿಳಾ ಆಟಗಾರ್ತಿಯರು ರಾಷ್ಟ್ರೀಯ ತಂಡದಲ್ಲಿ ಆಡಲು ನಿರಾಕರಿಸಿದ್ದಾರೆ.
ಈ ಸಂಬಂಧ ಆಟಗಾರರು ಇದೀಗ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್'ಗೆ ಪತ್ರ ಮುಖೇನ ತಮ್ಮ ಅಹವಾಲು ತಲುಪಿಸಿದ್ದಾರೆ. ಆದರೆ ಈ ಬಗ್ಗೆ ಫುಟ್ಬಾಲ್ ಸಂಸ್ಥೆ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಐದಾರು ತಿಂಗಳಿಂದ ಕೋಚ್ ಮತ್ತು ಆಟಗಾರರ ನಡುವೆ ಶೀತಲ ಸಮರವೇ ನಡೆದಿದ್ದು, ಇದರಿಂದ ರಾಷ್ಟ್ರೀಯ ತರಬೇತಿ ಶಿಬಿರದ ಮೇಲೆ ಪರಿಣಾಮ ಬೀರುವಂತಾಗಿದೆ. ಬಹಿಷ್ಕಾರ ಹಾಕುವುದಕ್ಕೂ ಮೊದಲೇ ಸಂಸ್ಥೆಯ ಗಮನಕ್ಕೆ ತರಬಹುದಿತ್ತು, ಈಗ ಕೈಮೀರುವ ಹಂತಕ್ಕೆ ತಲುಪಿದೆ ಎಂಬ ಕಾರಣಕ್ಕಾಗಿ ಸಂಸ್ಥೆ ಸ್ವಲ್ಪಮಟ್ಟಿಗೆ ಪ್ರಕರಣದಿಂದ ದೂರವೇ ಉಳಿದಿದೆ.