ಹಾಕಿ ದಂತಕತೆ ಧ್ಯಾನ್ ಚಂದ್ ಬಗ್ಗೆ ನಿಮಗೆ ಗೊತ್ತಿರದ 5 ಸಂಗತಿಗಳಿವು

By Web DeskFirst Published Aug 29, 2018, 4:54 PM IST
Highlights

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರು ಹುಟ್ಟಿದ ದಿನವಾದ ಇಂದು[ಆ.29] ದೇಶದಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೂರು ಒಲಿಂಪಿಕ್ಸ್’ಗಳಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಧ್ಯಾನ್ ಚಂದ್ ಹಾಕಿ ಟೂರ್ನಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದಾರೆ.

ಬೆಂಗಳೂರು[ಆ.29]: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರು ಹುಟ್ಟಿದ ದಿನವಾದ ಇಂದು ದೇಶದಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೂರು ಒಲಿಂಪಿಕ್ಸ್’ಗಳಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಧ್ಯಾನ್ ಚಂದ್ ಹಾಕಿ ಟೂರ್ನಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದಾರೆ.

ಇದನ್ನು ಓದಿ: ಕ್ರೀಡಾ ದಿನ: ಆಡಳಿತಗಾರರ ’ಆಟ’ದಲ್ಲಿ ಮರೆಯಾದ ಆಟಗಾರ!

ಧ್ಯಾನ್ ಚಂದ್ ಬಗ್ಗೆ ನಿಮಗೆ ಗೊತ್ತಿರದ 5 ಸಂಗತಿಗಳು ನಿಮಗಾಗಿ

1. ಧ್ಯಾನ್ ಚಂದ್ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವ ಮುನ್ನ, ತಮ್ಮ 16ನೇ ವಯಸ್ಸಿನಲ್ಲಿ ಸಿಪಾಯಿಯಾಗಿ ಬ್ರಿಟೀಷ್ ಸೈನ್ಯ ಸೇರಿಕೊಂಡಿದ್ದರು.

2.ಧ್ಯಾನ್ ಚಂದ್ ಅವರ ಮೊದಲ ಹೆಸರು ಧ್ಯಾನ್ ಸಿಂಗ್. ಆತ ರಾತ್ರಿ ಬೆಳದಿಂಗಳಿನಲ್ಲಿ[ಚಂದ್ರನ ಬೆಳಕಿನಲ್ಲಿ] ಅಭ್ಯಾಸ ಮಾಡುತ್ತಿದ್ದುದ್ದರಿಂದ ಅವರ ಹೆಸರು ಧ್ಯಾನ್ ಸಿಂಗ್ ಇಂದ ಧ್ಯಾನ್ ಚಂದ್ ಆಗಿ ಬದಲಾಯಿತು.

3. ಬರ್ಲಿನ್’ನಲ್ಲಿ ನಡೆದ 1936ರ ಒಲಿಂಪಿಕ್ಸ್’ನಲ್ಲಿ ಧ್ಯಾನ್’ಚಂದ್ ಆಟ ನೋಡಿದ ಸರ್ವಾಧಿಕಾರಿ ಹಿಟ್ಲರ್, ಜರ್ಮನಿಯ ಪೌರತ್ವ ಹಾಗೂ ಅವರ ಸೇನೆಯಲ್ಲಿ ಉನ್ನತ ಹುದ್ದೆ ನೀಡಲು ಮುಂದಾಗಿದ್ದರಂತೆ. ಆದರೆ ಧ್ಯಾನ್ ಚಂದ್ ಅದನ್ನು ನಯವಾಗಿ ತಿರಸ್ಕರಿಸಿದ್ದರಂತೆ.

4.ಧ್ಯಾನ್ ಚಂದ್ ಅವರ ಅದ್ಭುತ ಆಟ ಕಂಡು ದಂಗಾದ ನೆದರ್’ಲ್ಯಾಂಡ್’ನ ಅಧಿಕಾರಿಗಳು, ಅವರ ಹಾಕಿ ಸ್ಟಿಕ್’ನಲ್ಲಿ ಆಯಸ್ಕಾಂತವಿದೆಯಾ ಎಂದು ಅನುಮಾನಪಟ್ಟು ಹಾಕಿ ಸ್ಟಿಕ್ ಮುರಿದು ಪರೀಕ್ಷೆ ಮಾಡಿದ್ದರು.

5. ಹಾಕಿ ಲೆಜೆಂಡ್ ಧ್ಯಾನ್ ಚಂದ್ ಅವರನ್ನು ಭೇಟಿಯಾಗಿದ್ದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್’ಮನ್ ನಾನು ರನ್ ಬಾರಿಸಿದಂತೆ ನೀವು ಗೋಲು ಬಾರಿಸುತ್ತೀರಿ ಎಂದು ಬೆನ್ನು ತಟ್ಟಿದ್ದರಂತೆ. 

ಇದನ್ನು ಓದಿ: 'ಖೇಲ್ ರತ್ನ: ರಾಜೀವ್ ಧ್ಯಾನ ಬಿಡಿ, ಧ್ಯಾನ್ ಚಂದ್ ಹೆಸರು ಕೊಡಿ'

click me!