ರಾಷ್ಟ್ರೀಯ ಗೇಮ್ಸ್‌: ಈಜಿನಲ್ಲಿ ಪದಕ ಬೇಟೆಗಿಲ್ಲ ಬ್ರೇಕ್‌!

Published : Nov 04, 2023, 11:41 AM IST
ರಾಷ್ಟ್ರೀಯ ಗೇಮ್ಸ್‌: ಈಜಿನಲ್ಲಿ ಪದಕ ಬೇಟೆಗಿಲ್ಲ ಬ್ರೇಕ್‌!

ಸಾರಾಂಶ

ಈಜಿನ ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ಮಾನವಿ ವರ್ಮಾ ಹಾಗೂ 4*100 ಮಿಶ್ರ ತಂಡ ವಿಭಾಗದಲ್ಲಿ ಅನೀಶ್‌, ಧಿನಿಧಿ, ನೀನಾ, ಶ್ರೀಹರಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪುರುಷರ 50 ಮೀ. ಬ್ಯಾಕ್‌ಸ್ಟೋಕ್‌ನಲ್ಲಿ ಶ್ರೀಹರಿ ನಟರಾಜ್‌, ಮಹಿಳೆಯರ ವಿಭಾಗದಲ್ಲಿ ರಿಧಿಮಾ ಬಂಗಾರದ ಸಾಧನೆ ಮಾಡಿದರು.

ಪಣಜಿ(ನ.04): 37ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ನಿರೀಕ್ಷೆಯಂತೆಯೇ ಕರ್ನಾಟಕದ ಈಜುಪಟುಗಳು ಅಧಿಪತ್ಯ ಮುಂದುವರಿಸಿದ್ದಾರೆ. ಶುಕ್ರವಾರ ಮತ್ತೆ 4 ಚಿನ್ನ ಸೇರಿದಂತೆ 9 ಪದಕಗಳನ್ನು ರಾಜ್ಯಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಇದರೊಂದಿಗೆ ಈಜು ಸ್ಪರ್ಧೆಯಲ್ಲೇ ರಾಜ್ಯದ ಗಳಿಕೆ 16 ಚಿನ್ನ ಸೇರಿ 35ಕ್ಕೆ ಹೆಚ್ಚಳವಾಗಿದ್ದು, ಒಟ್ಟಾರೆ ಗಳಿಕೆಯಲ್ಲಿ ಕರ್ನಾಟಕ 63 ಪದಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

ಈಜಿನ ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ಮಾನವಿ ವರ್ಮಾ ಹಾಗೂ 4*100 ಮಿಶ್ರ ತಂಡ ವಿಭಾಗದಲ್ಲಿ ಅನೀಶ್‌, ಧಿನಿಧಿ, ನೀನಾ, ಶ್ರೀಹರಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪುರುಷರ 50 ಮೀ. ಬ್ಯಾಕ್‌ಸ್ಟೋಕ್‌ನಲ್ಲಿ ಶ್ರೀಹರಿ ನಟರಾಜ್‌, ಮಹಿಳೆಯರ ವಿಭಾಗದಲ್ಲಿ ರಿಧಿಮಾ ಬಂಗಾರದ ಸಾಧನೆ ಮಾಡಿದರು. 400 ಮೀ. ಫ್ರೀಸ್ಟೈಲ್‌ನ ಮಹಿಳೆಯರ ವಿಭಾಗದಲ್ಲಿ ಶಿರಿನ್‌, ಪುರುಷರ ವಿಭಾಗದಲ್ಲಿ ಅನೀಶ್‌, ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ಹಾಶಿಕಾ ಕಂಚಿಗೆ ತೃಪ್ತಿಪಟ್ಟುಕೊಂಡರು. ಪುರುಷರ 200 ಮೀ. ಮೆಡ್ಲೆಯಲ್ಲಿ ಶೋನ್ ಗಂಗೂಲಿ ಬೆಳ್ಳಿ, ಶಿವ ಕಂಚು ಪಡೆದರು. ಇನ್ನು, ಪುರುಷರ ಜಾವೆಲಿನ್‌ ಎಸೆತದಲ್ಲಿ ಸರ್ವಿಸಸ್‌ ಪ್ರತಿನಿಧಿಸುತ್ತಿರುವ ಕರ್ನಾಟಕದ ಡಿ.ಪಿ.ಮನು 80.48 ಮೀ. ದೂರಕ್ಕೆಸೆದು ಬೆಳ್ಳಿ ಗೆದ್ದರು.

Breaking: ಟೀಂ ಇಂಡಿಯಾಗೆ ಅತಿದೊಡ್ಡ ಶಾಕ್: ಸ್ಟಾರ್ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..!

ಟೆನಿಸ್‌ನಲ್ಲಿ ಫೈನಲ್‌ಗೆ

ಕೂಟದ ಪುರುಷರ ಡಬಲ್ಸ್‌ನಲ್ಲಿ ಕರ್ನಾಟಕದ ಆದಿಲ್‌ ಕಲ್ಯಾಣ್‌ಪುರ-ಪ್ರಜ್ವಲ್‌ ದೇವ್‌ ಫೈನಲ್‌ ಪ್ರವೇಶಿಸಿದರು. ಈ ಜೋಡಿ ಉ.ಪ್ರದೇಶದ ಸಿದ್ಧಾರ್ಥ್‌-ವಿಶ್ವಕರ್ಮ ಜೋಡಿ ವಿರುದ್ಧ 6-0, 6-1 ಜಯಗಳಿಸಿತು. ಆದರೆ ಮಹಿಳಾ ಡಬಲ್ಸ್‌ನಲ್ಲಿ ಶರ್ಮದಾ-ಸೋಹಾ ಸಾದಿಕ್‌, ಮಿಶ್ರ ಡಬಲ್ಸ್‌ನಲ್ಲಿ ಪ್ರಜ್ವಲ್‌-ಶರ್ಮದಾ ಸೆಮೀಸ್‌ನಲ್ಲಿ ಸೋಲುಂಡರು.

3 ಸಾವಿರ ಕೋಟಿ ರೂಪಾಯಿ ಮೌಲ್ಯದ ಐಪಿಎಲ್‌ನಲ್ಲಿ ಪಾಲು ಖರೀದಿಸಲು ಮುಂದಾದ ಸೌದಿ ಅರೇಬಿಯಾ!

ಜೂನಿಯರ್ ಹಾಕಿ: ಸೆಮೀಸ್‌ನಲ್ಲಿ ಭಾರತಕ್ಕೆ 3-6 ಸೋಲು!

ಜೋಹರ್ ಬಹ್ರು(ಮಲೇಷ್ಯಾ): ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದೆ. ಶುಕ್ರವಾರ ಅಂತಿಮ 4ರ ಘಟ್ಟದ ಪಂದ್ಯದಲ್ಲಿ ಭಾರತ, ಜರ್ಮನಿ ವಿರುದ್ಧ 3-6 ಗೋಲುಗಳಿಂದ ಶರಣಾಯಿತು. ಗುಂಪು ಹಂತದಲ್ಲಿ 3 ಪಂದ್ಯಗಳಲ್ಲಿ 2 ಗೆಲುವು, 1 ಡ್ರಾದೊಂಡಿಗೆ ಅಜೇಯವಾಗಿ ಉಳಿದಿದ್ದ ಭಾರತ ನಿರ್ಣಾಯಕ ಘಟ್ಟದಲ್ಲಿ ಕಳಪೆ ಪ್ರದರ್ಶನ ತೋರಿತು. ಇದರೊಂದಿಗೆ 8ನೇ ಬಾರಿ ಫೈನಲ್‌ಗೇರುವ ಕನಸು ಭಗ್ನಗೊಂಡಿತು. ತಂಡ 3-4ನೇ ಸ್ಥಾನಕ್ಕಾಗಿ ಶನಿವಾರ ಆಸ್ಟ್ರೇಲಿಯಾ/ಪಾಕಿಸ್ತಾನ ವಿರುದ್ಧ ಆಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!