ಭಾನುವಾರ ಮಹಿಳೆಯರ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ನೀನಾ ವೆಂಕಟೇಶ್ 1 ನಿಮಿಷ 02.22 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಕೂಟ ದಾಖಲೆಯೊಂದಿಗೆ ಚಿನ್ನ ಸಂಪಾದಿಸಿದರು. ಪುರುಷರ 200 ಮೀ. ಫ್ರಿಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್(1 ನಿಮಿಷ 49.09 ಸೆಕೆಂಡ್) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಅನೀಶ್ ಗೌಡ(1:52.18 ನಿ.) ಕಂಚು ಪಡೆದರು.
ಪಣಜಿ(ಅ.30): 37ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಪ್ರಾಬಲ್ಯ ಆರಂಭಿಸಿದ್ದು, ಸ್ಪರ್ಧೆಯ ಮೊದಲ ದಿನವೇ 5 ಚಿನ್ನ ಸೇರಿ 6 ಪದಕ ಬಾಚಿದೆ. ಜೊತೆಗೆ ಅಥ್ಲೆಟಿಕ್ಸ್‌ನಲ್ಲೂ ರಾಜ್ಯಕ್ಕೆ ಚಿನ್ನದ ಪದಕ ಒಲಿದಿದೆ.
ಭಾನುವಾರ ಮಹಿಳೆಯರ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ನೀನಾ ವೆಂಕಟೇಶ್ 1 ನಿಮಿಷ 02.22 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಕೂಟ ದಾಖಲೆಯೊಂದಿಗೆ ಚಿನ್ನ ಸಂಪಾದಿಸಿದರು. ಪುರುಷರ 200 ಮೀ. ಫ್ರಿಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್(1 ನಿಮಿಷ 49.09 ಸೆಕೆಂಡ್) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಅನೀಶ್ ಗೌಡ(1:52.18 ನಿ.) ಕಂಚು ಪಡೆದರು.
undefined
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಶೂಟರ್ ಮನು ಭಾಕರ್
ಮಹಿಳೆಯರ 200 ಮೀ. ಫ್ರಿಸ್ಟೈಲ್‌ನಲ್ಲಿ ಧಿನಿಧಿ ದೇಸಿಂಘು(2 ನಿ. 07.32 ಸೆ.)ಗೆ ಬಂಗಾರ ಲಭಿಸಿತು. ಇದೇ ವೇಳೆ ಶ್ರೀಹರಿ, ಅನೀಶ್, ಪೃಥ್ವಿ, ಸಂಭವ್ ಅವರನ್ನೊಳಗೊಂಡ ತಂಡ 4*100 ಮೀ. ಫ್ರೀಸ್ಟೈಲ್‌ನಲ್ಲಿ ಬಂಗಾರ ಸಾಧನೆ ಮಾಡಿದರೆ, ಹಾಶಿಕಾ, ಶಾಲಿನಿ, ಧಿನಿಧಿ, ನೀನಾ ಅವರಿದ್ದ 4*100 ಮೀ. ಫ್ರೀಸ್ಟೈಲ್ ಮಹಿಳಾ ತಂಡ ಕೂಡಾ ಸ್ವರ್ಣ ಹೆಕ್ಕಿತು. ಸದ್ಯ ಕರ್ನಾಟಕ 9 ಚಿನ್ನ ಸೇರಿ 20 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ಚಿನ್ನ ಗೆದ್ದ ಸ್ನೇಹಾ
ಭಾನುವಾರ ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಸ್ನೇಹಾ ಎಸ್.ಎಸ್. ಚಿನ್ನ ಗೆದ್ದರು. ಅವರು 11.45 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರೆ, ಧಾನೇಶ್ವರಿ(11.65 ಸೆ.) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದೇ ವೇಳೆ ಕೂಟದಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಮಣಿಕಂಠ 100 ಮೀ. ಓಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ರಾಜ್ಯದ ಶಶಿಕಾಂತ್ ಅಂಗಡಿ 5ನೇ ಸ್ಥಾನ ಪಡೆದರು.
INDvENG ಗಿರಗಿರ ತಿರುಗಿದ ಇಂಗ್ಲೆಂಡ್ 129 ರನ್‌ಗೆ ಆಲೌಟ್, ಭಾರತದ ವಿಶ್ವಕಪ್ ಸೆಮೀಸ್ ಹಾದಿ ಸುಲಭ!
ದಾವಣೆಗೆರೆ ಓಪನ್‌ನಲ್ಲಿ ಬೊಗ್ಡನ್ ಚಾಂಪಿಯನ್
ದಾವಣಗೆರೆ: ದಾವಣಗೆರೆ ಐಟಿಎಫ್ ಓಪನ್ ಪುರುಷರ ಟೆನಿಸ್ ಟೂರ್ನಿಯಲ್ಲಿ ರಷ್ಯಾದ ಬೊಗ್ಡನ್ ಬೊಬ್ರೊವ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ಇಲ್ಲಿ ನಡೆದ ಸಿಂಗಲ್ಸ್ ಫೈನಲ್‌ನಲ್ಲಿ 2ನೇ ಶ್ರೇಯಾಂಕಿತ ಬೊಗ್ಡನ್, ಅಮೆರಿಕದ ಅಗ್ರ ಶ್ರೇಯಾಂಕಿತ ನಿಕ್ ಚಾಪೆಲ್ ವಿರುದ್ಧ 6-3, 7-6(4) ಅಂತರದಲ್ಲಿ ರೋಚಕ ಗೆಲುವು ಸಾಧಿಸಿ, ವೃತ್ತಿ ಬದುಕಿನ 6ನೇ ಐಟಿಎಫ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಕಳೆದ ವಾರ ಧಾರವಾಡ ಓಪನ್‌ನಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಬೊಗ್ಡನ್ ಈ ಬಾರಿ ಟ್ರೋಫಿ ತಪ್ಪಿಸಿಕೊಳ್ಳಲಿಲ್ಲ. ಚಾಂಪಿಯನ್ ಬೊಗ್ಡನ್ 2160 ಯುಎಸ್ ಡಾಲರ್(ಸುಮಾರು 1.80 ಲಕ್ಷ ರು.) ಬಹುಮಾನ ಮೊತ್ತ ಪಡೆದರೆ, ಚಾಪೆಲ್‌ಗೆ 1272 ಯುಎಸ್ ಡಾಲರ್(ಸುಮಾರು ₹1.06 ಲಕ್ಷ) ಲಭಿಸಿತು.