
ಕಟಕ್(ಜ.19): ಕಟಕ್`ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರನ್ ಹೊಳೆ ಹರಿದಿದೆ. 381 ರನ್`ಗಳ ಬೃಹತ್ ಮೊತ್ತ ಕಲೆ ಹಾಕಿದ ಟೀಮ್ ಇಂಡಿಯಾ ಇಂಗ್ಲೆಂಡ್`ಗೆ 37 ರನ್`ಗಳ ಬೃಹತ್ ಗುರಿ ನೀಡಿದೆ.
ಕೇವಲ 23 ರನ್`ಗಳಿಗೆ ರಾಹುಲ್, ಧವನ್ ಮತ್ತು ಕೊಹ್ಲಿ ವಿಕೆಟ್ ಕಳೆದುಕೊಮಡು ಸಂಕಷ್ಟದಲ್ಲಿದ್ದಾಗ ಫೀಲ್ಡಿಗಿಳಿದ ಯುವರಾಜ್ ಮತ್ತು ಧೋನಿ ಚೇತರಿಕೆಯ ಆಟವಾಡಿದರು ನಿಧಾನಗತಿಯಲ್ಲೇ ಇನ್ನಿಂಗ್ಸ್ ಕಟ್ಟಿದ ಅನುಭವಿ ಆಟಗಾರರು ಬಳಿಕ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಪೂರೈಸಿದರು. ಯುವಿ 6 ವರ್ಷಗಳ ಬಳಿಕ ಶತಕ ಸಿಡಿಸಿದರೆ ಧೋನಿ 4 ವರ್ಷಗಳ ಬಳಿಕ ಬ್ಯಾಟಿಂಗ್ ಲಯ ಕಂಡುಕೊಂಡರು.
ಕೊಹ್ಲಿ ಭರವಸೆ ಇಟ್ಟು ಕೊಟ್ಟ ಅವಕಾಶವನ್ನ ಸದುಪಯೋಗಪಡಿಸಿಕೊಂಡ ಯುವಿ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆಂಗ್ಲ ಬೌಲರ್`ಗಳನ್ನ ಮನಬಂದಂತೆ ದಂಡಿಸಿದ ಯುವಿ 150 ರನ್ ಸಿಡಿಸಿದರು. ಇದರಲ್ಲಿ 21 ಬೌಂಡರಿ ಮತ್ತು ಅಮೋಘ 3 ಸಿಕ್ಸರ್ ಇದ್ದವು.
ಯುವಿಗೆ ಅತ್ಯುತ್ತಮ ಸಾಥ್ ನೀಡಿದ ಧೋನಿ 10 ಬೌಂಡರಿ ಮತ್ತು 6 ಸಿಕ್ಸರ್`ಗಳನ್ನೊಳಗೊಂಡ 134 ರನ್ ಸಿಡಿಸಿದರು. ಅಂತಿಮವಾಗಿ ಭಾರತ 50 ಓವರ್`ಗಳಲ್ಲಿ 6 ವಿಕೆಟ್ ನಷ್ಟಕ್ಕೆ 381 ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ 50 ಓವರ್`ಗಳಲ್ಲಿ 375/6
ಯುವರಾಜ್ ಸಿಂಗ್ - 150 (127 ಎಸತ, 21 ಬೌಂಡರಿ, 3 ಸಿಕ್ಸರ್)
ಎಂ.ಎಸ್. ಧೋನಿ - 134 (122 ಎಸೆತ, 10 ಬೌಂಡರಿ, 6 ಸಿಕ್ಸರ್)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.