ಐಸಿಸಿಯಿಂದ ಬಿಸಿಸಿಐಗೆ 2615 ಕೋಟಿ!

By Suvarna Web DeskFirst Published Jun 23, 2017, 3:37 PM IST
Highlights

ಐಸಿಸಿಯೊಂದಿಗಿನ ಆದಾಯ ಹಂಚಿಕೆ ಹಗ್ಗಜಗ್ಗಾಟ ಅಂತ್ಯಗೊಂಡಿದ್ದು, ಬಿಸಿಸಿಐಗೆ 8 ವರ್ಷಗಳಿಗೆ ಒಟ್ಟು .2615 ಕೋಟಿ ಹಣ ಸ್ವೀಕರಿಸಲು ಒಪ್ಪಿಕೊಂಡಿದೆ. ಇಲ್ಲಿ ನಡೆಯುತ್ತಿರುವ ಐಸಿಸಿ ವಾರ್ಷಿಕ ಸಭೆಯಲ್ಲಿ ಬಿಸಿಸಿಐ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ

ಮುಂಬೈ(ಜೂ.23): ಐಸಿಸಿಯೊಂದಿಗಿನ ಆದಾಯ ಹಂಚಿಕೆ ಹಗ್ಗಜಗ್ಗಾಟ ಅಂತ್ಯಗೊಂಡಿದ್ದು, ಬಿಸಿಸಿಐಗೆ 8 ವರ್ಷಗಳಿಗೆ ಒಟ್ಟು .2615 ಕೋಟಿ ಹಣ ಸ್ವೀಕರಿಸಲು ಒಪ್ಪಿಕೊಂಡಿದೆ. ಇಲ್ಲಿ ನಡೆಯುತ್ತಿರುವ ಐಸಿಸಿ ವಾರ್ಷಿಕ ಸಭೆಯಲ್ಲಿ ಬಿಸಿಸಿಐ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ.

ಈ ಮೊದಲು ಬಿಸಿಸಿಐ .3681 ಕೋಟಿಗೆ ಬೇಡಿಕೆ ಇಟ್ಟಿತ್ತು. ಆದರೆ ಐಸಿಸಿ ಕೇವಲ .1892 ಕೋಟಿ ಕೊಡುವುದಾಗಿ ತಿಳಿಸಿತ್ತು. ಪಟ್ಟು ಬಿಡದ ಬಿಸಿಸಿಐ, ಚಾಂಪಿಯನ್ಸ್‌ ಟ್ರೋಫಿ ಬಹಿಷ್ಕರಿಸುವ ಹಂತಕ್ಕೆ ತಲುಪಿತ್ತು. ಆನಂತರ ಐಸಿಸಿ ಅಧ್ಯಕ್ಷ ಶಶಾಂಕ್‌ ಮನೋಹರ್‌ ಹೆಚ್ಚುವರಿ .645 ಕೋಟಿ ನೀಡುವುದಾಗಿ ಹೇಳಿದ್ದರು. ಆರಂಭದಲ್ಲಿ ಪ್ರಸ್ತಾಪಿಸಿದ್ದಕ್ಕಿಂತ ಬಿಸಿಸಿಐಗೆ ಸದ್ಯ .723 ಕೋಟಿ ಹೆಚ್ಚಿಗೆ ನೀಡಲು ಐಸಿಸಿ ಒಪ್ಪಿಕೊಂಡಿದೆ. ಕೆಲ ಷರತ್ತುಗಳೊಂದಿಗೆ ಈ ಪ್ರಸ್ತಾಪಕ್ಕೆ ಒಪ್ಪಿಕೊಂಡಿರುವುದಾಗಿ ಬಿಸಿಸಿಐ ಹೇಳಿದೆ.

ಭಾರತದ ನಂತರ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗೆ ಅತಿಹೆಚ್ಚು ಹಣ ಸಿಗಲಿದ್ದು, ಆ ಮೊತ್ತ .897 ಕೋಟಿ ಎಂದು ಐಸಿಸಿ ತಿಳಿಸಿದೆ. ಆಸ್ಪ್ರೇಲಿಯಾ, ಪಾಕಿಸ್ತಾನ, ವೆಸ್ಟ್‌ಇಂಡೀಸ್‌, ಶ್ರೀಲಂಕಾ, ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗಳಿಗೆ ತಲಾ .827 ಕೋಟಿ ಹಣ ಸಿಗಲಿದೆ. ಜಿಂಬಾಬ್ವೆಗೆ ಅತಿಕಡಿಮೆ ಅಂದರೆ .607 ಕೋಟಿ ನೀಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

click me!