2030ರ ಕಾಮನ್‌ವೆಲ್ತ್‌ ಗೇಮ್ಸ್‌ನ ಆಯೋಜನಾ ಸಮಿತಿಯಲ್ಲಿ ರಾಹುಲ್‌ ದ್ರಾವಿಡ್‌ಗೆ ಸ್ಥಾನ!

Kannadaprabha News   | Kannada Prabha
Published : Oct 31, 2026, 09:38 AM IST
rahul dravid

ಸಾರಾಂಶ

2030ರ ಕಾಮನ್‌ವೆಲ್ತ್‌ ಗೇಮ್ಸ್‌ನ ಆಯೋಜನಾ ಸಮಿತಿಗೆ ಕ್ರೀಡಾಪಟುಗಳ ಪ್ರತಿನಿಧಿಗಳಾಗಿ ರಾಹುಲ್‌ ದ್ರಾವಿಡ್‌ ಹಾಗೂ ಸೈನಾ ನೆಹ್ವಾಲ್‌ ಅವರನ್ನು ಕೇಂದ್ರ ಕ್ರೀಡಾ ಇಲಾಖೆ ನಾಮನಿರ್ದೇಶನಗೊಳಿಸಿದೆ. ಇದರೊಂದಿಗೆ, ಸೆನೆಗಲ್‌ನ ಡಾಕಾರ್‌ನಲ್ಲಿ ಯುವ ಒಲಿಂಪಿಕ್ಸ್‌ ಕ್ರೀಡಾಕೂಟ ಶನಿವಾರದಿಂದ ಆರಂಭವಾಗಲಿದ್ದು, ಭಾರತದ 17 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ.

ನವದೆಹಲಿ(ಅ.31): ಅಹಮದಾಬಾದ್‌ನಲ್ಲಿ ನಡೆಯಲಿರುವ 2030ರ ಕಾಮನ್‌ವೆಲ್ತ್‌ ಗೇಮ್ಸ್‌ನ ಆಯೋಜನಾ ಸಮಿತಿಗೆ ಕೇಂದ್ರ ಕ್ರೀಡಾ ಇಲಾಖೆಯು ಅಥ್ಲೀಟ್‌ಗಳ ಪ್ರತಿನಿಧಿಗಳಾಗಿ ದಿಗ್ಗಜ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಹಾಗೂ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರ ಹೆಸರನ್ನು ನಾಮನಿರ್ದೇಶನಗೊಳಿಸಿದೆ.

ಈ ಸಂಘಟನಾ ಸಮಿತಿಯ ನೇತೃತ್ವವವನ್ನು ಗುಜರಾತ್‌ ಕ್ರೀಡಾ ಸಚಿವ, ಡಿಸಿಎಂ ಹರ್ಷ ಸಂಘವಿ ವಹಿಸಿಕೊಳ್ಳುವ ಸಾಧ್ಯತೆಯಿದೆ. ಖಾಸಗಿ ವಲಯದಿಂದ ಜಿನಲ್ ಮೆಹ್ತಾ ಮತ್ತು ಆರ್‌ಸಿಬಿ ಒಡತಿ ಅನನ್ಯಾ ಬಿರ್ಲಾ ಅವರ ಹೆಸರುಗಳನ್ನು ಇಲಾಖೆ ಶಿಫಾರಸು ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಲ್ಲದೇ ಡಿಸೆಂಬರ್‌ನಲ್ಲಿ ಚುನಾವಣೆ ಎದುರಿಸಲಿರುವ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್''ನ ಪ್ರತಿನಿಧಿಗಳು, ಕಾಮನ್‌ವೆಲ್ತ್ ಗೇಮ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಪ್ರತಿನಿಧಿಯಾಗಿ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ.

ಇಂದಿನಿಂದ 14 ದಿನ ಯುವ ಒಲಿಂಪಿಕ್ಸ್‌

ಡಾಕಾರ್‌: ಕಿರಿಯರ ಒಲಿಂಪಿಕ್‌ ಕ್ರೀಡಾಕೂಟ ಶನಿವಾರ ಸೆನೆಗಲ್‌ನ ಡಾಕಾರ್‌ನಲ್ಲಿ ಆರಂಭಗೊಳ್ಳಲಿದೆ. ಕೂಟವು ನ.13ರ ವರೆಗೂ ನಡೆಯಲಿದ್ದು, 207 ರಾಷ್ಟ್ರಗಳ ಸುಮಾರು 2700 ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ. ಭಾರತದ 17 ಕ್ರೀಡಾಪಟುಗಳು 11 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಕರ್ನಾಟಕದ ತಾರಾ ಈಜುಪಟು ಧಿನಿಧಿ ದೇಸಿಂಘು ಕೂಡಾ ಕಣದಲ್ಲಿದ್ದಾರೆ.

ಸಿಂಧು ಸೆಮೀಸ್‌ ಪ್ರವೇಶ

ಸಾರ್ಬ್ರುಕೆನ್(ಜರ್ಮನಿ): ಹೈಲೋ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಪಿ.ವಿ. ಸಿಂಧು ಜರ್ಮನಿಯ ಅಮಾಲಿ ಶುಲ್ಜ್ ವಿರುದ್ಧ 21-12, 21-10 ಅಂಕಗಳಿಂದ ಗೆದ್ದಿದ್ದು, ಸೆಮೀಸ್‌ ಪ್ರವೇಶಿಸಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಭಾರತದ ಅನ್ಮೋಲ್‌ ಖರ್ಬ್‌ರನ್ನು ಎದುರಿಸಲಿದ್ದಾರೆ. ಅನ್ಮೋಲ್‌, ಉನ್ನತಿ ಹೂಡಾರನ್ನು ಮಣಿಸಿ ಸೆಮೀಸ್‌ ಪ್ರವೇಶಿಸಿದ್ದಾರೆ.

ಹಾಕಿಯಲ್ಲಿ ಭಾರತಕ್ಕೆ 4-1 ಜಯ

ಜಲಾಂಧರ್‌: ಪುರುಷರ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. 5 ಸಲದ ಚಾಂಪಿಯನ್‌ ಭಾರತ, ಶುಕ್ರವಾರ ಜಪಾನ್‌ ವಿರುದ್ಧ 4-1 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ. ಭಾರತದ ಪರ ಅಭಿಷೇಕ್‌ 2 ಗೋಲು ಬಾರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ನಿಮ್ಮ ಅಮ್ಮ ಸಿಂಗಲ್ ಆಗಿದ್ದಾರಾ?’ ಸ್ಟಾರ್ ಕ್ರಿಕೆಟಿಗನಿಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ನೆಟ್ಟಿಗರು ಶಾಕ್!
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಬಗ್ಗೆ ಬಿಸಿಸಿಐಗೆ ಯುವರಾಜ್ ಸಿಂಗ್ ಖಡಕ್ ಸಂದೇಶ..!