2019: DC ವಿರುದ್ಧ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ RCB!

By Web Desk  |  First Published Apr 7, 2019, 1:55 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದಿನ ಪಂದ್ಯ ಸಂಪೂರ್ಣ ಹಿಸರು ಮಯವಾಗಲಿದೆ. ಪ್ರತಿ ಆವೃತ್ತಿಯಲ್ಲಿ RCB ಪರಿಸರ ಕಾಳಜಿಗೆ ಎಲ್ಲಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.   
 


ಬೆಂಗಳೂರು(ಏ.07): ಪ್ರತಿ ಐಪಿಎಲ್ ಟೂರ್ನಿಯಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷವೂ ಗೋ ಗ್ರೀನ್ ಅಭಿಯಾನಕ್ಕೆ ಒತ್ತು ನೀಡಿದೆ. ಇಂದು(ಏ.07) ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ RCB ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಇದನ್ನೂ ಓದಿ: IPL 2019: ಡೆಲ್ಲಿ ವಿರುದ್ಧ ಪಂದ್ಯಕ್ಕೆ RCB ತಂಡದಲ್ಲಿ ಬದಲಾವಣೆ?

Latest Videos

undefined

ಇಂದಿನ ಪಂದ್ಯದ ಟಾಸ್ ವೇಳೆ RCB ನಾಯಕ ವಿರಾಟ್ ಕೊಹ್ಲಿ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್‌ಗೆ ಗಿಡ ನೀಡಲಿದ್ದಾರೆ. ಇನ್ನು RCB ಜರ್ಸಿ, ಬಾವುಟ ಸೇರಿದಂತೆ ಎಲ್ಲವೂ ಹಸಿರುಮಯವಾಗಲಿದೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಏಕೈಕ ತಂಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಇದನ್ನೂ ಓದಿ: ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕೆ ಹೀಗೆ? 

ಪರಿಸರ ಸಂರಕ್ಷಣೆ ಹಾಗೂ ತಾಜ್ಯಗಳ ಮರುಬಳಕೆಗೆ ಒತ್ತು ನೀಡವು ಉದ್ದೇಶದಿಂದ ಈ ಆವೃತ್ತಿಯಲ್ಲಿ RCB ಗೋ ಗ್ರೀನ್ ಅಭಿಯಾನಕ್ಕೆ ಚಾಲನೆ ನೀಡಲಿದೆ. ಹಸಿರು ಬಣ್ಣದ RCB ಜರ್ಸಿ ಕೂಡ ತ್ಯಾಜ್ಯಗಳ ಮರುಬಳಕೆಯಿಂದ ತಯಾರಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಸುತ್ತ ಮುತ್ತ ಸಂಗ್ರಹಿಸಲಾದ ಪ್ಲಾಸ್ಟಿಕ್ ಬಾಟಲಿ ಹಾಗೂ ಇತರ ತ್ಯಾಜ್ಯಗಳಿಂದ ಜರ್ಸಿ ತಯಾರಿಸಲಾಗಿದೆ. 

click me!