IPL 2019: ಡೆಲ್ಲಿ ವಿರುದ್ಧ ಪಂದ್ಯಕ್ಕೆ RCB ತಂಡದಲ್ಲಿ ಬದಲಾವಣೆ?

Published : Apr 07, 2019, 12:04 PM ISTUpdated : Apr 07, 2019, 12:19 PM IST
IPL 2019: ಡೆಲ್ಲಿ ವಿರುದ್ಧ ಪಂದ್ಯಕ್ಕೆ RCB ತಂಡದಲ್ಲಿ ಬದಲಾವಣೆ?

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB Vs DC ಪಂದ್ಯ ನಡೆಯಲಿದೆ. ಸೋಲಿನ ಸುಳಿಯಲ್ಲಿ  ಸಿಲುಕಿರುವ ಬೆಂಗಳೂರು ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆ ಮಾಡಲುವ ಸಾಧ್ಯತೆ ಹೆಚ್ಚಿದೆ. ಇಂದಿನ ಪಂದ್ಯಕ್ಕೆ ಸಂಭವನೀಯ ತಂಡ ಇಲ್ಲಿದೆ. 

ಬೆಂಗಳೂರು(ಏ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಲೂರು ತಂಡ ಇದೀಗ 6ನೇ ಪ್ರಯತ್ನದಲ್ಲಿ ಗೆಲುವು ಸಾಧಿಸೋ ವಿಶ್ವಾಸದಲ್ಲಿದೆ. ಆರಂಭಿಕ 5 ಪಂದ್ಯದಲ್ಲಿ ಮುಗ್ಗರಿಸಿರುವ RCB ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  ಹೋರಾಟ ನಡಸೆಲಿದೆ. ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆ ಮಾಡಲು RCB ಮುಂದಾಗಿದೆ.

ಇದನ್ನೂ ಓದಿ: ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕೆ ಹೀಗೆ?

ಕಳೆದ ಪಂದ್ಯದಲ್ಲಿ 205 ರನ್ ಸಿಡಿಸಿ ಸೋಲೊಪ್ಪಿಕೊಂಡ RCB ಬೌಲಿಂಗ್ ವಿಭಾಗದಲ್ಲಿ ಬದಲಾವಣೆಮಾಡಲು ಮುಂದಾಗಿದೆ. ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್‌ನಲ್ಲಿ ದುಬಾರಿಯಾದ ಮೊಹಮ್ಮದ್ ಸಿರಾಜ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಮತ್ತೊರ್ವ ದುಬಾರಿ ಬೌಲರ್ ಟಿಮ್ ಸೌಥಿ ಎರಡನೇ ಅವಕಾಶ ಪಡೆಯೋ ಸಾಧ್ಯತೆ ಇದೆ.

ಇದನ್ನೂ ಓದಿ: IPL ಕ್ರಿಕೆಟ್‌ನಲ್ಲಿ ಅಲ್ಜಾರಿ ಜೋಸೆಫ್ ಸರ್ವ ಶ್ರೇಷ್ಠ ದಾಖಲೆ!

RCB ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ಪಾರ್ಥೀವ್ ಪಟೇಲ್, ಎಬಿ ಡಿವಿಲಿಯರ್ಸ್, ಮಾರ್ಕಸ್ ಸ್ಟೊಯ್ನಿಸ್, ಮೊಯಿನ್ ಆಲಿ, ಆಕ್ಷದೀಪ್ ನಾಥ್, ಪವನ್ ನೇಗಿ, ಟಿಮ್ ಸೌಥಿ, ನವದೀಪ್ ಸೈನಿ, ಯಜುವೇಂದ್ರ ಚೆಹಾಲ್, ಉಮೇಶ್ ಯಾದವ್

ಇದನ್ನೂ ಓದಿ: RCBಗೆ ಡೆಲ್ಲಿ ಎದುರಾಳಿ- ಬೆಂಗಳೂರಿನಲ್ಲಿ ಕೊನೆಯಾಗುತ್ತಾ ಸೋಲಿನ ಚಾಳಿ?

ಡೆಲ್ಲಿ ಸಂಭವನೀಯ ತಂಡ:
ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೊಲಿನ್ ಇನ್‌ಗ್ರಾಂ, ಕ್ರಿಸ್ ಮೊರಿಸ್, ಆಕ್ಸರ್ ಪಟೇಲ್, ಕಾಗಿಸೋ ರಬಾಡ, ಇಶಾಂತ್ ಶರ್ಮಾ, ಸಂದೀಪ್ ಲಮಿಚಾನೆ, ರಾಹುಲ್ ತಿವಾಠಿಯಾ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇವತ್ತು 10/10 ಎಂದ ಮಾಸ್ಟರ್ ಬ್ಲಾಸ್ಟರ್! ಸಚಿನ್‌ ತೆಂಡೂಲ್ಕರ್‌ಗೆ ಅಪರೂಪದ ಗಿಫ್ಟ್ ಕೊಟ್ಟ ಮೆಸ್ಸಿ!
ನಾನು ಫಾರ್ಮ್ ಕಳೆದುಕೊಂಡಿಲ್ಲ, ಆದ್ರೆ..! 3ನೇ ಟಿ20 ಪಂದ್ಯದ ಗೆಲುವಿನ ಬೆನ್ನಲ್ಲೇ ಸೂರ್ಯ ಅಚ್ಚರಿ ಹೇಳಿಕೆ!