ಯುಎಸ್‌ ಓಪನ್ 2024: ನೋವಾಕ್ ಜೋಕೋವಿಚ್ 25ನೇ ಗ್ರಾನ್‌ಸ್ಲಾಂ ಕನಸು ಭಗ್ನ!

Published : Sep 01, 2024, 10:05 AM IST
ಯುಎಸ್‌ ಓಪನ್ 2024: ನೋವಾಕ್ ಜೋಕೋವಿಚ್ 25ನೇ  ಗ್ರಾನ್‌ಸ್ಲಾಂ ಕನಸು ಭಗ್ನ!

ಸಾರಾಂಶ

ಯುಎಸ್ ಒಪನ್ ಟೆನಿಸ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಎದುರಾಗಿದ್ದು, 25ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ನೋವಾಕ್ ಜೋಕೋವಿಚ್‌ ಕನಸು ನುಚ್ಚುನೂರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನ್ಯೂಯಾರ್ಕ್: ಈ ಬಾರಿ ಯುಎಸ್ ಓಪನ್ ಗ್ರಾನ್‌ಸ್ಲಾಂ ಟೆನಿಸ್ ಟೂರ್ನಿ ಮತ್ತೊಂದು ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಹಾಲಿ ಹಾಗೂ 4 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ 3ನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ 25ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ಸರ್ಬಿಯಾದ 37 ವರ್ಷದ ಜೋಕೋ ಕನಸು ಮತ್ತೆ ಭಗ್ನಗೊಂಡಿದೆ. 

ಕಳೆದ ವರ್ಷ ಯುಎಸ್ ಓಪನ್‌ ಗೆದ್ದಿದ್ದ ಜೋಕೋ, ಈ ವರ್ಷ ಒಂದೂ ಗ್ರಾನ್‌ಸ್ಲಾಂ ಪ್ರಶಸ್ತಿ ಗೆದ್ದಿಲ್ಲ. 2017ರ ಬಳಿಕ ಇದೇ ಮೊದಲ ಬಾರಿ ವರ್ಷದ 4 ಗ್ರಾನ್ ಸ್ಲಾಂಗಳ ಪೈಕಿ ಒಂದನ್ನೂ ಗೆಲ್ಲಲು ಜೋಕೋ ವಿಫಲರಾಗಿದ್ದಾರೆ. ಶುಕ್ರವಾರ ರಾತ್ರಿ ವಿಶ್ವ ನಂ.2 ಜೋಕೋ ಆಸ್ಟ್ರೇಲಿಯಾದ ಅಲೆಕ್ಸಿ ಪೋಪಿರಿನ್ ವಿರುದ್ಧ 6-4, 6-4, 2-6, 6-4 3 ಪರಾಭವಗೊಂಡರು. 28ನೇ ಶ್ರೇಯಾಂಕಿತ, 25 ವರ್ಷದ ಅಲೆಕ್ಸಿ ವಿರುದ್ಧ 3ನೇ ಸೆಟ್‌ನಲ್ಲಿ ಜೋಕೋ ಕೊಂಚ ಪ್ರತಿರೋಧತೋರಿದರೂ ಸೋಲು ತಪ್ಪಿಸಲಾಗಲಿಲ್ಲ.
ಜೋಕೋ ಯುಎಸ್ ಓಪನ್‌ನ 3ನೇ ಸುತಿನಲ್ಲಿ ಸೋತಿದ್ದು ಕಳೆದ 18 ವರ್ಷಗಳಲೇ ಇದೇ ಮೊದಲು. 

ಮಹಾರಾಜ ಟ್ರೋಫಿ ಟಿ20: ಮೈಸೂರು ವಾರಿಯರ್ಸ್‌ ಫೈನಲ್‌ಗೆ ಲಗ್ಗೆ

2005, 2006ರಲ್ಲಿ ಅವರು 3ನೇ ಸುತ್ತಿನಲ್ಲಿ ಸೋತಿದ್ದರು. ಆ ಬಳಿಕ ಪ್ರತಿ ಬಾರಿಯೂ 4ನೇ ಸುತ್ತು ಪ್ರವೇಶಿಸಿದ್ದರು. 10 ಬಾರಿ ಫೈನಲ್‌ಗೇರಿದ್ದ ಅವರು 4 ಬಾರಿ ಪ್ರಶಸ್ತಿ ಗೆದ್ದಿದ್ದರು. 2006ರ ಬಳಿಕ ಮೊದಲ ಬಾರಿ 3ನೇ ಸುತ್ತಲ್ಲೇ ಪರಾಭವಗೊಂಡಿದ್ದಾರೆ. 

ಗಾಫ್ 4ನೇ ಸುತ್ತಿಗೆ: ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೊಕೊ ಗಾಫ್ 4ನೇ ಸುತ್ತು ಪ್ರವೇಶಿಸಿದರು. 2ನೇ ಶ್ರೇಯಾಂಕಿತ ಅರೈನಾ ಸಬಲೆಂಕಾ, ಪುರುಷರ ಸಿಂಗಲ್ಸ್‌ನಲ್ಲಿ ಅಲೆಕ್ಸಾಂಡರ್ ಜೆರೆವ್, ಆ್ಯಂಡ್ರೆ ರುಬ್ಲೆವ್ 4ನೇ ಸುತ್ತಿಗೆ ಲಗ್ಗೆ ಇಟ್ಟರು. ಎಲೆನಾ ರಬೈಕನಾ ಎರಡನೇ ಸುತ್ತಲೇ ಸೋತು ಹೊರಬಿದ್ದರು.

ಬೋಪಣ್ಣ, ಭಾಂಬ್ರಿ 3ನೇ ಸುತ್ತಿಗೆ ಪ್ರವೇಶ

ಯುಎಸ್ ಓಪನ್ ಗ್ರ್ಯಾನ್‌ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಭಾರತದ ರೋಹನ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ 3ನೇ ಸುತ್ತು ಪ್ರವೇಶಿಸಿದ್ದಾರೆ. ಕಳೆದ ಬಾರಿ ರನ್ನರ್-ಅಪ್ ಇಂಡೋ-ಆಸೀಸ್ ಜೋಡಿ ಶನಿವಾರ ಸ್ಪೇನ್‌ನ ರಾಬೆರ್ಟೆಕ್ಯಾ‌ ಬೆಲ್ಲೆಸ್ - ಅರ್ಜೆಂಟೀನಾದ ಫೆಡೆರಿಕೊ ಕೊರಿಯಾ ವಿರುದ್ಧ 6-2, 6-4ರಲ್ಲಿ ಗೆಲುವು ಸಾಧಿಸಿತು. ಇನ್ನು ಯೂಕಿ ಭಾಂಬ್ರಿ -ಫ್ರಾನ್ಸ್‌ನ ಒಲಿವೆಟ್ಟಿ ಆಮೆರಿಕದ ಆಸ್ಟಿನ್ ಕ್ರೇಜಿಕೆಕ್ - ನೆದರ್‌ಂಡ್ಸ್‌ನ ಜೀನ್ ವಿರುದ್ಧ ಗೆದ್ದರು. ಆದರೆ ಶ್ರೀರಾಮ್ ಬಾಲಾಜಿ - ಅರ್ಜೆಂಟೀನಾದ ಗ್ಯುಡೊ ಆ್ಯಂಡ್ರಜಿ ಸೋಲನುಭವಿಸಿದರು.

Paris Paralympics 2024: ಶೂಟರ್ ರುಬಿನಾ ಫ್ರಾನ್ಸಿಸ್ ಪ್ಯಾರಾ ಕಂಚಿಗೆ ಕಿಸ್..!

ಅಥ್ಲೆಟಿಕ್ಸ್‌: ಸ್ನೇಹಾ, ಮಣಿಕಂಠಗೆ ಬೆಳ್ಳಿ

ಬೆಂಗಳೂರು: 63ನೇ ಆವೃತ್ತಿಯ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸ್ನೇಹಾ ಎಸ್‌.ಎಸ್‌ ಹಾಗೂ ಮಣಿಕಂಠ ಬೆಳ್ಳಿ ಪದಕ ಗೆದ್ದಿದ್ದಾರೆ. ಸ್ನೇಹಾ ಮಹಿಳೆಯರ 100 ಮೀ. ರೇಸ್‌ನಲ್ಲಿ 11.57 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದುಕೊಂಡರು. ಸರ್ವಿಸಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಮಣಿಕಂಠ ಪುರುಷರ 100 ಮೀ. ರೇಸ್‌ನಲ್ಲಿ 10.48 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಜಯಿಸಿದರು. ಕೂಟ ಸೋಮವಾರ ಕೊನೆಗೊಳ್ಳಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ ಪದಚ್ಯುತಿ ರಹಸ್ಯ: ಗೌತಮ್ ಗಂಭೀರ್ ಕೈವಾಡದ ಶಂಕೆ ವ್ಯಕ್ತಪಡಿಸಿದ ಮಾಜಿ ಕ್ರಿಕೆಟರ್!
'ಅವನ ವಿಷಯದಲ್ಲಿ ಮಾತ್ರ ಯಾಕೆ ಈ ತಾರತಮ್ಯ?' ಈ ಆಟಗಾರನನ್ನು ಕೈಬಿಟ್ಟಿದ್ದಕ್ಕೆ ಗಂಭೀರ್ ವಿರುದ್ಧ ಅಶ್ವಿನ್ ಕಿಡಿ!