ರಶೀದ್ ಸ್ಪಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ

First Published Jun 4, 2018, 3:30 PM IST
Highlights

ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ಎಂದು ನಿರ್ಲಕ್ಷಿಸಿದ ಬಾಂಗ್ಲಾದೇಶ ತಂಡಕ್ಕೆ ತಕ್ಕ ಶಾಸ್ತಿಯಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲೋಪ್ಪಿಕೊಂಡಿದೆ.

ಡೆಹ್ರಾಡೂನ್(ಜೂನ್.4) ಐಪಿಎಲ್‌ ಟೂರ್ನಿಯಲ್ಲಿ ಮಿಂಚಿದ ಅಫ್ಘಾನಿಸ್ತಾನ್ ಸ್ಪಿನ್ ಬೌಲರ್ ರಶೀದ್ ಖಾನ್ ಇದೀಗ ಬಾಂಗ್ಲಾದೇಶ ವಿರುದ್ಧದ ಟಿ-ಟ್ವೆಂಟಿ ಪಂದ್ಯದಲ್ಲೂ ಮೋಡಿ ಮಾಡಿದ್ದಾರೆ.  ಬಾಂಗ್ಲಾದೇಶ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಅಫ್ಘಾನಿಸ್ತಾನ 45 ರನ್‌ಗಳ ಗೆಲುುವು ಸಾಧಿಸಿದೆ. 

ಭಾರತದ ಡೆಹ್ರಡೂನ್‌ನಲ್ಲಿ ಆಯೋಜಿಸಲಾಗಿರುವ ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲಿ ಅಫ್ಘಾನಿಸ್ತಾನ ಶುಭಾರಂಭ ಮಾಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ಮೊಹಮ್ಮದ್ ಶೆಹಝಾದ್ ಹಾಗೂ ಉಸ್ಮಾನ್ ಘನಿ ಮೊದಲ ವಿಕೆಟ್‌ಗೆ 62 ರನ್ ಜೊತೆಯಾಟ ನೀಡಿದರು. ಉಸ್ಮಾನ್ 26 ರನ್ ಸಿಡಿಸಿದರೆ, ಶೆಹಝಾದ್ 40 ರನ್ ಕಾಣಿಕೆ ನೀಡಿದರು.

ನಾಯಕ ಮೊಹಮ್ಮದ್ ಅಸ್ಗರ್ 25 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ನಜೀಬುಲ್ಲಾ ಝರ್ದಾನ್ ಹಾಗೂ ಮೊಹಮ್ಮದ್ ನಬಿ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಇನ್ನು ಶೈಮುಲ್ಲಾ ಶೆನ್ವಾರಿ 36 ರನ್ ಬಾರಿಸಿದರು. ಶಫೀಕ್ಉಲ್ಲಾ 24 ರನ್ ಸಿಡಿಸಿದರು. ಈ ಮೂಲಕ ಅಫ್ಘಾನಿಸ್ತಾನ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಕಕ್ಕೆ 167 ರನ್ ಪೇರಿಸಿತು. ಬಾಂಗ್ಲಾ ಪರ  ಮೊಹಮ್ಮದುಲ್ಲಾ ಹಾಗೂ ಅಬ್ದುಲ್ ಹಸನ್ ತಲಾ 2 ವಿಕೆಟ್  ಪಡೆದರು. ಶಕೀಬ್-ಅಲ್-ಹಸನ್, ರುಬೆಲ್ ಹುಸೈನ್ ಹಾಗೂ ಅಬು ಜಾಯೆದ್ ತಲಾ 1 ವಿಕೆಟ್ ಪಡೆದರು.
 

click me!