ಕಾಶ್ಮೀರಿ ರಾಜಕೀಯ ಮುಖಂಡನ ಜೊತೆ ಗೌತಮ್ ಗಂಭೀರ್ ಟ್ವೀಟ್ ವಾರ್

Published : Jun 04, 2018, 02:33 PM IST
ಕಾಶ್ಮೀರಿ ರಾಜಕೀಯ ಮುಖಂಡನ ಜೊತೆ  ಗೌತಮ್ ಗಂಭೀರ್ ಟ್ವೀಟ್ ವಾರ್

ಸಾರಾಂಶ

ಸೈನಿಕರಗೆ ವಿಶೇಷ ಗೌರವ ನೀಡೋ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮತ್ತೊಮ್ಮೆ ಯೋಧರ ಪರವಾಗಿ ಧನಿ ಎತ್ತಿದ್ದಾರೆ. ಶ್ರೀನಗರದಲ್ಲಿ ಸೈನಿಕರ ಮೇಲೆ ಕಲ್ಲೆಸೆಯುವವರನ್ನ ಸಮರ್ಥಿಸಿಕೊಂಡ ರಾಜಕೀಯ ಮುಖಂಡನಿಗೆ ಗಂಭೀರ್ ಹಿಗ್ಗಾಮುಗ್ಗ ಜಾಡಿಸಿದ್ದಾರೆ.   

ದೆಹಲಿ(ಜೂನ್.4):  ದೇಶ ಹಾಗೂ ಸೈನಿಕರ ವಿಚಾರದಲ್ಲಿ ಕ್ರಿಕೆಟಿಗ ಗೌತಮ್ ಗಂಭೀರ್ ಯಾವತ್ತೂ ಧನಿ ಎತ್ತುತಲೇ ಬಂದಿದ್ದಾರೆ. ಸೈನಿಕರು ಹಾಗೂ ಅವರ ಕುಟುಂಬದ ಕುರಿತು ಇತರರಿಗಿಂತ ಗಂಭೀರ್ ತುಸು ಹೆಚ್ಚು ಕಾಳಜಿವಹಿಸುತ್ತಾರೆ. ಇದೀಗ ಶ್ರೀನಗರದ ಸಿಆರ್‌ಪಿಎಫ್ ಯೋಧರ ಮೇಲಿನ ಕಲ್ಲೆಸೆತಕ್ಕೆ ಗಂಭೀರ್ ಗರಂ ಆಗಿದ್ದಾರೆ.  ಈ ಕುರಿತು ಕಾಶ್ಮೀರಿ ರಾಜಕೀಯ ಮುಖಂಡನ ಜೊತೆ ಟ್ವಿಟರ್ ಮೂಲಕ ವಾಗ್ವಾದ ನಡೆಸಿದ್ದಾರೆ.

ಸಿಆರ್‌ಪಿಎಫ್ ಯೋಧರ ಮೇಲೆ ಕಲ್ಲೆಸೆಯುತ್ತಿರುವುದನ್ನ ವಿಡೀಯೋವನ್ನ ಆದಿತ್ಯ ರಾಜ್ ಕೌಲ್ ಟ್ವೀಟ್‌ ಮಾಡಿದ್ದರು. ಯೋಧರ ಮೇಲೆ ದುಷ್ಕರ್ಮಿಗಳು ಕಲ್ಲೆಸೆಯುತ್ತಿದ್ದಾರೆ. ಎಂದು ಆದಿತ್ಯ ಕೌಲ್ ಟ್ವೀಟ್ ಮಾಡಿದ್ದರು. 

 

 

ಆದಿತ್ಯ ರಾಜ್ ಕೌಲ್ ಟ್ವೀಟ್‌ಗೆ  ಪ್ರತಿಕ್ರೀಯೆ ನೀಡಿದ ಗಂಭೀರ್, ಇದು ಅತ್ಯಂತ ದುರದೃಷ್ಟಕರ ವಿಚಾರ. ಇಷ್ಟಾದರೂ ಸೈನಿಕರ ಮೇಲೆ ಕಲ್ಲೆಸೆಯುತ್ತಿರುವ ಜೊತೆಗೆ ಮತ್ತೆ ಮಾತುಕತೆಗೆ ಮುಂದಾಗತ್ತಿರುವುದು  ನನಗೆ ಆಶ್ಚರ್ಯವಾಗುತ್ತಿದೆ ಎಂದು ಗಂಭೀರ್ ರಿ ಟ್ವೀಟ್ ಮಾಡಿದ್ದರು.  ಇಷ್ಟೇ ಅಲ್ಲ ಇದಕ್ಕೆ ನನ್ನ ಬಳಿ ಪರಿಹಾರ ಸೂತ್ರವಿದೆ. ಜಮ್ಮ ಮತ್ತು ಕಾಶ್ಮೀರದ ರಾಜಕೀಯ ಮುಖಂಡರು, ಸಮಸ್ಯೆಗಳಿರುವ ಪ್ರದೇಶದಲ್ಲಿ ತಮ್ಮ ಕುಟುಂಬದ ಜೊತೆ ಒಂದು ವಾರ ಕಾಲ ವಾಸ್ತವ್ಯ ಹೂಡಬೇಕು. ಅದು ಕೂಡ ಯಾವುದೇ ಭದ್ರತೆ ಇಲ್ಲದೆ. ಇಲ್ಲಿ ಸೈ ಎನಿಸಿಕೊಳ್ಳುವವರು ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆಕ್ರೋಷ ವ್ಯಕ್ತಪಡಿಸಿದ್ದರು.

 

 

 

 

ಗಂಭೀರ್ ಟ್ವೀಟ್‌ಗೆ ತಕ್ಷಣ ಪ್ರತಿಕ್ರೀಯಿಸಿದ ಕಾಶ್ಮೀರಿ ರಾಜಕೀಯ ಮುಖಂಡಡ ಟನ್ವೀರ್ ಸಾಧಿಕ್, ಗಂಭೀರ್ ಪರಿಹಾರ ಸೂತ್ರಕ್ಕೆ ಪ್ರತಿಯಾಗಿ ಆದಿತ್ಯ ರಾಜ್, ಸ್ವತಃ ಗಂಭೀರ್ ಕಾಶ್ಮೀರದಲ್ಲಿ ಬಂದು ಅತಿಥಿಯಾಗಿ ವಾಸ್ತವ್ಯ ಮಾಡಲಿ. ಆಗ ಅರ್ಥವಾಗುತ್ತೆ ಇಲ್ಲಿನ ಸಮಸ್ಯೆ ಎಂದು  ಕೌಲ್ ರಿ ಟ್ವೀಟ್ ಮಾಡಿದ್ದಾರೆ.

 

 

ಇದಕ್ಕೆ ಪ್ರತಿಯಾಗಿ ಜನರ ತೆರೆಗೆ ಹಣದಲ್ಲಿ ಐಶರಾಮಿ ಜೀವನ ನಡೆಸುತ್ತಿರುವ ರಾಜಕೀಯ ಮುಖಂಡರು ಇಷ್ಟು ವರ್ಷವಾದರೂ ಸಮಸ್ಯೆ ಪರಿಹರಿಸಲಿಲ್ಲ ಯಾಕೆ ಎಂದು ಗಂಭೀರ್ ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ, ಮುಗ್ದ ಕಾಶ್ಮೀರಿ ಜನರಿಗೆ ಮೋಸ ಮಾಡಬೇಡಿ ಎಂದು ಸೂಚಿಸಿದ್ದಾರೆ. 

 

 

ತನ್ವೀರ್ ಸಾಧಿಕ್ ವಿರುದ್ದ ಟ್ವೀಟ್ ಸಮರ ನಡೆಸಿರುವ ಗಂಭೀರ್‌ಗೆ ಮೆಚ್ಚುಗೆಗಳು ವ್ಯಕ್ತವಾಗಿದೆ. ಸೈನಿಕರಿಗೆ ಸದಾ ಬೆಂಬಲ ನೀಡುವ ಗೌತಮ್ ಗಂಭೀರ್ ಕಾಶ್ಮೀರ ವಿಚಾರಕ್ಕೆ ಮೂಗು ತುರಿಸಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ತಕ್ಕ ಉತ್ತರ ನೀಡಿದ್ದರು. ಇಷ್ಟೇ ಅಲ್ಲ. ಭಾರತೀಯ ಸೈನಿಕರ ಕುರಿತು ವಿಶೇಷ ಗೌರವ ಹೊಂದಿರುವ ಗಂಭೀರ್, ಇತ್ತೀಚೆಗೆ ಸುಕ್ಮಾದಲ್ಲಿ ನಕ್ಸಲ್ ದಾಳಿಗೆ ವೀರಮರಣಹೊಂದಿದೆ 25 ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನ ಗೌತಮ್ ಗಂಭೀರ್ ಭರಿಸುತ್ತಿದ್ದಾರೆ. ಇದೀಗ ಸೈನಿಕರ ಮೇಲೆ ಕಲ್ಲೆಸೆಯುತ್ತಿರುವುದನ್ನ ಸಮರ್ಥಿಸಿದ ರಾಜಕೀಯ ಮುಖಂಡನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಡಿಮೆ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಜಾರಿದ ಸ್ಟಾರ್ ಆಲ್ರೌಂಡರ್! ಹಾಲಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಜಾಕ್‌ಪಾಟ್
ಐಪಿಎಲ್ ಮಿನಿ ಹರಾಜು: ಮೊದಲ ಸುತ್ತಿನಲ್ಲೇ ದೊಡ್ಡ ಮೊತ್ತಕ್ಕೆ ಬಿಡ್ ಆಗಿ ದಾಖಲೆ ಬರೆದ ಕ್ಯಾಮರೋನ್ ಗ್ರೀನ್