
ಬೆಂಗಳೂರು(ಮಾ.11): ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್'ನ ಕನಸಾಗಿರುತ್ತದೆ. ಅದರಲ್ಲೂ ಆಸ್ಟ್ರೇಲಿಯಾದಂತಹ ಬಲಿಷ್ಟ ಟೆಸ್ಟ್ ತಂಡದ ವಿರುದ್ಧವೇ ಆ ಸಾಧನೆ ಮಾಡಿದರೆ ಹೇಗಿರುತ್ತದೆ ಅಲ್ವಾ..
ಭಾರತ ಕ್ರಿಕೆಟ್ ಕಂಡ ಅದ್ಭುತ ಆಫ್'ಸ್ಪಿನ್ನರ್'ಗಳಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಒಂದು ಹ್ಯಾಟ್ರಿಕ್ ಮೂಡಿಬಂದಿದ್ದು ಆಸೀಸ್ ವಿರುದ್ದ ಕೋಲ್ಕತಾದ ಈಡನ್'ಗಾರ್ಡನ್'ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ. ಈ ದಾಖಲೆ ನಿರ್ಮಾಣವಾಗಿ ಇಂದಿಗೆ ಬರೋಬ್ಬರಿ 16 ವರ್ಷಗಳಾಯ್ತು..!
ಆಸೀಸ್'ನ ದಿಗ್ಗಜ ಬ್ಯಾಟ್ಸ್'ಮನ್'ಗಳಾದ ರಿಕಿ ಪಾಂಟಿಂಗ್, ಆ್ಯಡಂ ಗಿಲ್'ಕ್ರಿಸ್ಟ್ ಮತ್ತು ಶೇನ್ ವಾರ್ನ್ ಅವರಿಗೆ ದೂಸ್ರಾ ಸ್ಪೆಷಲಿಸ್ಟ್ ಹರ್ಭಜನ್ ಸಿಂಗ್ ಪೆವಿಲಿಯನ್ ಹಾದಿ ತೋರಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎನ್ನುವ ದಾಖಲೆಯನ್ನೂ ಭಜ್ಜಿ ನಿರ್ಮಿಸಿದರು...
ಹೀಗಿತ್ತು ಇತಿಹಾಸ ಸೃಷ್ಟಿಯಾದ ಆ ಕ್ಷಣಗಳು...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.