ಕ್ರಿಕೆಟ್ ಜಗತ್ತು ಕಂಡ ಐದು ಸಾರ್ವಕಾಲಿಕ ಗಡ್ಡದಾರಿ ಕ್ರಿಕೆಟಿಗರಿವರು..!

By Naveen KodaseFirst Published Mar 11, 2017, 5:04 AM IST
Highlights

ಸ್ವಾರಸ್ಯಕರ ಘಟನೆಯೆಂದರೆ ಆಮ್ಲಾ ಅವರ ಮುಖದ ಮೇರಿರುವ ಕೂದಲು ತಲೆಯ ಮೇಲಿಲ್ಲ..!

- ನವೀನ್ ಕೊಡಸೆ

ಜಂಟಲ್'ಮ್ಯಾನ್'ಗಳ ಕ್ರೀಡೆ ಎಂದೇ ಗುರುತಿಸಿಕೊಂಡಿರುವ ಕ್ರಿಕೆಟ್'ನಲ್ಲಿ ಗಡ್ಡ ಬಿಟ್ಟು ವಿಭಿನ್ನವಾಗಿ ಗುರುತಿಸಿಕೊಂಡರು ಕೆಲವೇ ಕ್ರಿಕೆಟಿಗರು ಮಾತ್ರ. ಇತ್ತೀಚಿನ ದಿನಗಳಲ್ಲಂತೂ ಗಡ್ಡಬಿಡುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ.

ತಮ್ಮ ಆಟದ ಮೇಲೆ ಗಮನಹರಿಸುಷ್ಟೇ ಆಸಕ್ತಿಯನ್ನು ಕೆಲ ಆಟಗಾರರು ತಮ್ಮ ಗಡ್ಡ ಮೇಲೂ ಗಮನಹರಿಸಿದ್ದಾರೆ. ಅಂತಹ ಪ್ರಮುಖ ಐವರು ಆಟಗಾರರು ನಿಮ್ಮ ಮುಂದೆ:

#1. ಹಾಶೀಂ ಆಮ್ಲಾ:

ದಕ್ಷಿಣ ಆಫ್ರಿಕಾ ಕ್ರಿಕೆಟ್'ನ ಸ್ಟೈಲೀಶ್ ಆಟಗಾರರಲ್ಲಿ ಹಾಶೀಂ ಆಮ್ಲಾ ಕೂಡ ಒಬ್ಬರು. ಹಾಲಿ ಕ್ರಿಕೆಟ್'ನಲ್ಲಿ ಗಡ್ಡಧಾರಿ ಕ್ರಿಕೆಟಿಗರು ಯಾರು ಎಂದರೆ ಮೊದಲ ಸ್ಥಾನದಲ್ಲಿ ಹಾಶೀಂ ಆಮ್ಲಾ ನಿಲ್ಲುವುದರಲ್ಲಿ ಎರಡು ಮಾತಿಲ್ಲ.

ಇನ್ನೊಂದು ಸ್ವಾರಸ್ಯಕರ ಘಟನೆಯೆಂದರೆ ಆಮ್ಲಾ ಅವರ ಮುಖದ ಮೇರಿರುವ ಕೂದಲು ತಲೆಯ ಮೇಲಿಲ್ಲ..!

#2. ಮೋಯಿನ್ ಅಲಿ:

ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ ಗಡ್ಡಧಾರಿ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಗೊಂಡ ಹೊಸ ಆಟಗಾರ. ಇಂಗ್ಲೆಂಡ್ ಕ್ರಿಕೆಟಿಗರು ಗಡ್ಡಬಿಡುವುದು ತೀರಾ ವಿರಳ. ಆದರೆ ಇದಕ್ಕೆ ಅಪವಾದವೆಂಬಂತೆ ಹೊಸ ತಲೆಮಾರಿನ ಈ ಕ್ರಿಕೆಟಿಗ ಗಡ್ಡ ಬೆಳೆಸುತ್ತಿರುವುದನ್ನು ಗಮನಿಸಿದರೆ ಹಾಶೀಂ ಆಮ್ಲಾ ಅವರಿಗೆ ಪ್ರಬಲ ಪೈಪೋಟಿಯಾಗುವತ್ತ ಹೆಜ್ಜೆಯಾಗುತ್ತಿದ್ದಾರೆ.

#3. ಮೊಹಮ್ಮದ್ ಯೂಸೂಫ್:

ಪಾಕಿಸ್ತಾನದ ಬ್ಯಾಟಿಂಗ್ ಮಾಂತ್ರಿಕ ಯೂಸೂಫ್ ಯೋಹಾನ ಕ್ರಿಶ್ಚಿಯನ್ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಬಳಿಕ ಮೊಹಮ್ಮದ್ ಯೂಸೂಫ್ ಎಂದು ಹೆಸರು ಬದಲಾಯಿಸಿಕೊಂಡರು. ಇಸ್ಲಾಂ ಧರ್ಮಕ್ಕೆ ಮತಾಂತರವಾದ ಬಳಿಕ ಅವರ ಗಡ್ಡ ಪ್ರಮುಖ ಆಕರ್ಷಣೆಯ ಭಾಗವಾಗಿದ್ದಂತೂ ಸುಳ್ಳಲ್ಲ.

#4. ಡೇನಿಯಲ್ ವಿಟೋರಿ:

2015ರ ವಿಶ್ವಕಪ್ ವೇಳೆ ನ್ಯೂಜಿಲ್ಯಾಂಡ್ ತಂಡದ ಬಹುತೇಕ ಆಟಗಾರರು ಗಡ್ಡಧಾರಿಗಳಾಗಿಯೇ ಕಣಕ್ಕಿಳಿದಿದ್ದರು. ಅದ್ಭುತ ಪ್ರದರ್ಶನದ ಮೂಲಕ ನ್ಯೂಜಿಲ್ಯಾಂಡ್ ತಂಡ ಫೈನಲ್ ತಲುಪಿ, ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದು ಈಗ ಇತಿಹಾಸ.

ಈ ಆಟಗಾರರ ಪೈಕಿ ಡೇನಿಯಲ್ ವಿಟೋರಿ ತಮ್ಮ ಆಲ್ರೌಂಡ್ ಆಟದ ಮೂಲಕ ಮಾತ್ರವಲ್ಲದೆ, ತಮ್ಮ ಗಡ್ಡದ ಮೂಲಕವೂ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

#5. ಸಯೀದ್ ಅನ್ವರ್:

ಸಾಕಷ್ಟು ಮಂದಿ ಕ್ರಿಕೆಟಿಗರು ಒಂದು ಫ್ಯಾಷನ್ ಆಗಿ ಗಡ್ಡಬಿಡುತ್ತಾರೆ. ಆದರೆ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ ಮಾತ್ರ ಗಡ್ಡ ಬಿಟ್ಟಿದ್ದು ಬೇರೆಯದ್ದೇ ಕಾರಣಕ್ಕೆ. ತಮ್ಮ ಮಗಳ ಅಕಾಲಿಕ ಸಾವಿನಿಂದ ಗಡ್ಡಬಿಡಲು ಪ್ರಾರಂಭಿಸಿದ ಅನ್ವರ್, ನಂತರ ಅದೇ ಅವರ ಟ್ರೇಡ್'ಮಾರ್ಕ್ ಆಗಿ ಬದಲಾಯಿತು.

ಪಾಕಿಸ್ತಾನದ ಮಾಜಿ ಆಟಗಾರರನ ಗಡ್ಡವು ಅಮೇರಿಕಾದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಗಡ್ಡವನ್ನು ಹೋಲುತ್ತದೆ ಎಂಬ ಮಾತು ಇದೆ.   

click me!