ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ

By Web DeskFirst Published May 1, 2019, 9:09 PM IST
Highlights

ಶಿವಮೊಗ್ಗದ ತಾಳಗುಪ್ಪ ಮತ್ತು ಬೆಂಗಳೂರು ನಡುವೆ ಸಂಚರಿಸುವ ಇಂಟರ್‌ಸಿಟಿ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ನೈಋತ್ಯ ರೈಲ್ವೆ ವಲಯ ತಾತ್ಕಾಲಿಕ  ಬದಲಾವಣೆ ಮಾಡಿದೆ. ಆ ತಾತ್ಕಾಲಿಕ ವೇಳಾಪಟ್ಟಿ ಇಂತಿದೆ.

ಶಿವಮೊಗ್ಗ, [ಮೇ,01]: ತಾಳಗುಪ್ಪ-ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸುವ ಇಂಟರ್‌ ಸಿಟಿ ರೈಲು ವೇಳಾಪಟ್ಟಿಯಲ್ಲಿ ತಾತ್ಕಾಲಿಕವಾಗಿ ಬದಲಾವಣೆಯಾಗಿದೆ.  

ಇಂದಿನಿಂದ ಅಂದ್ರೆ ಮೇ 1ರಿಂದ ಜೂನ್ 6ರವರೆಗೆ ಮಾತ್ರ ಈ ವೇಳಾಪಟ್ಟಿ ಇರಲಿದೆ.  ಎಂದಿನಂತೆ ಇಂಟರ್‌ಸಿಟಿ ಪ್ರತಿದಿನ ಬೆಳಿಗ್ಗೆ  6.40ಕ್ಕೆ ಹೊರಡುತ್ತಿದ್ದ ರೈಲು [ಸಂಖ್ಯೆ 20652] ಬದಲಾದ ವೇಳಾಪಟ್ಟಿಯಂತೆ 7.40ಕ್ಕೆ ಶಿವಮೊಗ್ಗ ಬಿಡಲಿದೆ. 

ರಾಜ್ಯಕ್ಕೆ ರೈಲ್ವೆ ಇಲಾಖೆ ಗಿಫ್ಟ್, ಮಲೆನಾಡಿಗರ ಬಹುದಿನದ ಕನಸು ನನಸು

ಶಿವಮೊಗ್ಗ ಬೆಂಗಳೂರು ನಡುವಿನ ರೆಲ್ವೆ ಮಾರ್ಗದಲ್ಲಿ ದುರಸ್ಥಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದ್ದು, ತಾಳಗುಪ್ಪದಿಂದ ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. 

ಕೇವಲ ಶಿವಮೊಗ್ಗದಿಂದ ಬೆಂಗಳೂರು ವರೆಗೆಗಿನ ಟೈಮಿಂಗ್ ನಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ. 

ತಾಳಗುಪ್ಪದಿಂದ ಎಂದಿನಂತೆ ಇಂಟರ್‌ಸಿಟಿ ರೈಲು ಪ್ರತಿದಿನ ಬೆಳಿಗ್ಗೆ 3.50ಕ್ಕೆ ಹೊರಟು, 6.05ಕ್ಕೆ ಶಿವಮೊಗ್ಗ ತಲುಪಿ, 6.40ಕ್ಕೆ ಶಿವಮೊಗ್ಗದಿಂದ ಹೊರಡುತ್ತಿತ್ತು.

ಆದ್ರೆ ಈ ಪರಿಷ್ಕೃತ ವೇಳಾಪಟ್ಟಿಯಂತೆ 1 ಗಂಟೆ ತಡವಾಗಿ, ಅಂದ್ರೆ ಬೆಳಿಗ್ಗೆ 7.40ಕ್ಕೆ ಶಿವಮೊಗ್ಗದಿಂದ ರೈಲು ಹೊರಡಲಿರುವುದರಿಂದ ಬೆಂಗಳೂರು ತಲುಪುವುದು ಒಂದು ಗಂಟೆ ವಿಳಂಬವಾಗಲಿದೆ.

ಈ ಹಿಂದೆ ಸಂಸದರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲನ್ನು ತಾಳಗುಪ್ಪವರೆಗೆ ವಿಸ್ತರಣೆ ಮಾಡಲು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು.ತದನಂತರ ಬಿಎಸ್ ವೈ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಗಳೂರಿನಿಂದ ತಾಳಗುಪ್ಪದವರೆಗೆ ವಿಸ್ತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

[ಈ ಸುದ್ದಿಗೆ ಸಾಂದರ್ಭಿಕ ಚಿತ್ರ ಬಳಸಲಾಗಿದೆ]

click me!