ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು

By Web Desk  |  First Published Oct 13, 2019, 11:41 AM IST

ಬೆಂಗಳೂರು ಹಾಗೂ ಶಿವಮೊಗ್ಗ ನಡುವಿನ ಜನ ಶತಾಬ್ದಿ ರೈಲಿನ ಸಮಯ ಬದಲಾಗಿದೆ. 


ಶಿವಮೊಗ್ಗ [ಅ.13]:  ಶಿವಮೊಗ್ಗ-ಬೆಂಗಳೂರು ನಡುವೆ ಆರಂಭಗೊಂಡಿದ್ದ ಜನಶತಾಬ್ದಿ ರೈಲು ಇನ್ನು ಮುಂದೆ ಅರ್ಧ ಗಂಟೆ ಬೇಗನೆ ನಿಗದಿತ ಗುರಿ ತಲುಪಲಿದೆ.

ಇದುವರೆಗೆ ಈ ಎರಡೂ ಊರುಗಳ ನಡುವಿನ ಸಂಚಾರಕ್ಕೆ4 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿತ್ತು. ಆದರೆ ಇನ್ನು ಮುಂದೆ 30 ನಿಮಿಷ ಬೇಗನೆ ತಲುಪಲಿದೆ.  ಆಗಸ್ಟ್‌ 14 ರಿಂದ ಹೊಸ ವೇಳಾಪಟ್ಟಿಜಾರಿಗೆ ಬರಲಿದೆ.

Tap to resize

Latest Videos

undefined

ಶಿವಮೊಗ್ಗದಿಂದ ಬೆಳಗ್ಗೆ ಐದು ಹದಿನೈದಕ್ಕೆ ಹೊರಟು ಬೆಳಗ್ಗೆ ಹತ್ತು ಹತ್ತಕ್ಕೆ ಯಶವಂತಪುರ (ಬೆಂಗಳೂರು) ತಲುಪುತ್ತಿದ್ದ ಜನ ಶತಾಬ್ದಿ ರೈಲು ಇನ್ನು ಮುಂದೆ ಬೆಳಗ್ಗೆ 5.30ಕ್ಕೆ ಶಿವಮೊಗ್ಗ ಬಿಟ್ಟು ಯಶವಂತಪುರ ಇಪ್ಪತ್ತು ನಿಮಿಷ ಮುಂಚಿತವಾಗಿ ಅಂದರೆ ಬೆಳಗ್ಗೆ ಒಂಬತ್ತು ಐವತ್ತಕ್ಕೆ ತಲುಪುತ್ತದೆ. ಅದೇ ರೀತಿ ಸಂಜೆ ಐದು ಮೂವತ್ತಕ್ಕೆ ಯಶವಂತಪುರವನ್ನು ಬಿಟ್ಟು ಮೂವತ್ತು ನಿಮಿಷಗಳ ಮುಂಚೆಯೇ ಶಿವಮೊಗ್ಗವನ್ನು ರಾತ್ರಿ ಒಂಬತ್ತು ಐವತ್ತಕ್ಕೆ ತಲುಪುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ ವಾರದಲ್ಲಿ ಆರು ದಿನ ಮಾತ್ರ ಚಲಿಸುತ್ತಿದ್ದ ಜನಶತಾಬ್ದಿ ರೈಲು ಆಗಸ್ವ್‌15ರಿಂದ ಮಂಗಳವಾರವೂ ಸಹ ಓಡಾಡಲಿದೆ. ಈವರೆಗೆ ನಾಲ್ಕು ಗಂಟೆ ಐವತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದ ಜನಶತಾಬ್ದಿ ರೈಲು ಇನ್ನು ಮುಂದೆ ಕೇವಲ ನಾಲ್ಕು ಗಂಟೆ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರು ತಲುಪುತ್ತದೆ. ಇದರಿಂದಾಗಿ ಸಾರ್ವಜನಿಕರು ಬೆಂಗಳೂರಿನ ಕಚೇರಿಗಳಿಗೆ, ವಾಣಿಜ್ಯ ಉದ್ದೇಶಕ್ಕಾಗಿ ತೆರಳಿ ಅದೇ ದಿನ ವಾಪಸ್ಸು ಬರುವಲ್ಲಿ ಬಹಳ ಸಹಕಾರಿಯಾಗಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಸಂಸದ ಬಿ.ವೈ. ರಾಘವೇಂದ್ರ ಕೋರಿದ್ದಾರೆ.

click me!