ಶಿವಮೊಗ್ಗ : ಪ್ರಜ್ಞೆ ತಪ್ಪಿಸಿ ಬಾಲಕಿ ಅಪಹರಣ, ಪೋಸ್ಕೋ ಪ್ರಕರಣ

By Kannadaprabha NewsFirst Published Oct 20, 2019, 11:48 AM IST
Highlights

ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅಪಹರಿಸಿದ್ದ ಐವರ ವಿರುದ್ಧ ಸೊರಬ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. 

ಶಿವಮೊಗ್ಗ[ಅ.20]:  ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅಪಹರಿಸಿದ್ದ ಐವರ ವಿರುದ್ಧ ಸೊರಬ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಬಾಲಕಿ ಹೇಳಿಕೆ ಮೇರೆಗೆ ಅನಿಲ್‌ ಎಂಬಾತನ ಕುಮ್ಮಕ್ಕಿನಿಂದ ಈ ಘಟನೆ ನಡೆದಿದ್ದು, ಅನಿಲ್‌ ಮತ್ತು ನಾಲ್ವರ ಸಹಚರರ ವಿರುದ್ಧ ಸೊರಬ ಠಾಣೆಯಲ್ಲಿ 130/2019 ಕಲಂ-366(ಎ) 354 ಎ 354 ಡಿ 504 506 ಸಹಿತ 149 ಐಪಿಸಿ ಸಹಿತ 10,12 ಪೋಕ್ಸೋ ಕಾಯಿದೆ 2012ರ ಅಡಿ ಪ್ರಕರಣದ ದೂರು ದಾಖಲಾಗಿದೆ.

ಅ. 18ರಂದು ಬೆಳಗ್ಗೆ ಸೊರಬದಲ್ಲಿನ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಬಸ್‌ ನಿಲ್ದಾಣದಲ್ಲಿ ಕಾದು ನಿಂತಿದ್ದ ಬಾಲಕಿಯನ್ನು ಹರೂರು ಗ್ರಾಮದ ಅನಿಲ್‌ ಎಂಬಾತ ತನ್ನ ಸಹಚರರ ಸಹಾಯದಿಂದ ಪ್ರಜ್ಞೆ ತಪ್ಪಿಸಿ ಅಪಹರಿಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲ ಗಂಟೆಗಳ ನಂತರ ಎಚ್ಚರವಾದಾಗ ಒಮ್ನಿ ವಾಹನದಲ್ಲಿ ಇರುವುದು ಗೊತ್ತಾದ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಯಾರದೋ ಸಹಾಯದಿಂದ ತನ್ನ ತಂದೆಗೆ ಮೊಬೈಲ್‌ ಫೋನ್‌ ಮೂಲಕ ಸಂಪರ್ಕಿಸಿ ಘಟನೆ ಬಗ್ಗೆ ವಿವರಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ತಕ್ಷಣವೇ ಆಕೆಯ ತಂದೆ ಮಗಳನ್ನು ಪತ್ತೆ ಹಚ್ಚಿ ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಆರೋಗ್ಯವಾಗಿದ್ದಾಳೆ ಎಂದು ತಿಳಿದು ಬಂದಿದೆ.

click me!