ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡುವಂತೆ ಜನರಿಂದ ಆಗ್ರಹ ಕೇಳಿ ಬಂದಿದೆ. ಕಾಮಗಾರಿ ಮುಕ್ತಾಯವಾದರೂ ಇನ್ನೂ ಮುಕ್ತವಾಗಿಸದ ಹಿನ್ನೆಲೆ ಶೀಘ್ರ ಸಂಚಾರ ಮುಕ್ತಕ್ಕೆ ಆಗ್ರಹಿಸಲಾಗಿದೆ.
ಶಿವಮೊಗ್ಗ [ಅ.20]: ನಗರ ಮತ್ತು ಸೋಮಿನಕೊಪ್ಪ ಭಾಗಕ್ಕೆ ಸಂಪರ್ಕಕೊಂಡಿಯಾದ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿನ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡು ವರ್ಷಕ್ಕೂ ಹೆಚ್ಚು ಸಮುಯವಾದರೂ ಇನ್ನೂ ಸಂಚಾರಕ್ಕೆ ತೆರವುಗೊಳಿಸದೆ ಕಾಲಹರಣ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇತುವೆಗೆ ಸಂಪರ್ಕ ರಸ್ತೆಯ ಜಾಗ ತೆರವುಗೊಳಿಸದೆ ಇರುವುದರಿಂದ, ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಸಂಚಾರಕ್ಕೆ ಅನುವುಮಾಡಿಕೊಡದೆ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜನಪ್ರತಿನಿಧಿಗಳು ಮತ್ತು ಸಂಬಂಧ ಪಟ್ಟಇಲಾಖೆ ಅಧಿಕಾರಿಗಳು ಕೂಡಲೇ ಸೋಮಿನಕೊಪ್ಪ ಮುಖ್ಯ ರಸ್ತೆಯ ನೂತನ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
(ಸಾಂದರ್ಬಿಕ ಚಿತ್ರ)