
ಶಿವಮೊಗ್ಗ (ಡಿ.05) ಶಿವಮೊಗ್ಗದ ಖ್ಯಾತ ಸ್ತ್ರಿ ರೋಗ ತಜ್ಞೆ ಜಯಶ್ರಿ ಹಾಗೂ ಅವರ ಪುತ್ರ ಆಕಾಶ್ ದುರಂತ ಅಂತ್ಯಕಂಡಿದ್ದಾರೆ. ತಾಯಿ ಹಾಗೂ ಮಗ ರಾತ್ರಿ ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಈ ಮಾತಕತೆ ಜಗಳಕ್ಕೆ ತಿರುಗಿದೆ. ಜಗಳವಾಡಿದ ಬಳಿಕ ತಾಯಿ ಹಾಗೂ ಇಬ್ಬರು ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದರೆ, ಸೊಸೆ ಬೇರೊಂದು ಕೋಣೆಯಲ್ಲಿ ಮಲಗಿದ್ದಾರೆ. ಆದರೆ ಬೆಳಗ್ಗೆ ನೋಡಿದಾಗ ಜಯಶ್ರಿ ಹಾಗೂ ಆಕಾಶ್ ದುರಂತ ಅಂತ್ಯಕಂಡಿದ್ದಾರೆ. ಈ ದುರಂತದ ಬಳಿಕ ಇದೇ ಮನೆಯಲ್ಲಿ ಸರಣಿ ದುರಂತದ ಘಟನೆಯಿಂದ ಕುಟುಂಬ ಹಾಗೂ ಮನೆಯಲ್ಲಿ ಸಮಸ್ಯೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ನಗರದ ಅಶ್ವಥ್ ನಗರ ಬಡಾವಣೆಯಲ್ಲಿ ಘಟನೆ ನಡೆದಿದೆ. ಹೊಮ್ಮರಡಿ ಆಸ್ಪತ್ರೆಯ ಪ್ರಖ್ಯಾತ ಸ್ತ್ರೀರೋಗ ತಜ್ಞ ಜಯಶ್ರೀ (56) ಅವರ ಪುತ್ರ ಆಕಾಶ್ ( 36) ಬದುಕು ಅಂತ್ಯಗೊಳಿಸಿದ ದುರ್ದೈವಿಗಳು. ಜಯಶ್ರಿ ಖ್ಯಾತ ಸ್ತ್ರಿ ರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಉತ್ತಮ ಆದಾಯವನ್ನೂ ಗಳಿಸುತ್ತಿದ್ದರು. ಆದರೆ ಪುತ್ರ ಆಕಾಶ್ ಹಲವು ಉದ್ಯಮಗಳಲ್ಲಿ ಕೈ ಹಾಕಿ ಕೈಸುಟ್ಟುಕೊಂಡಿದ್ದರು. ಇದೀಗ ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಆಕಾಶ್ ಮುಂದಾಗಿದ್ದರು. ಇದಕ್ಕಾಗಿ ತಾಯಿ ಜಯಶ್ರಿ ಬಳಿ 3 ಕೋಟಿ ರೂಪಾಯಿ ಹಣ ಕೇಳಿದ್ದರು. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಹಣ ನೀಡುವಂತೆ ಆಕಾಶ್ ಪಟ್ಟು ಹಿಡಿದಿದ್ದ. ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ತಾಯಿ ಜಯಶ್ರಿ ಖಡಕ್ ಆಗಿ ಹೇಳಿದ್ದಾರೆ. ಇದೇ ವಿಚಾರದಲ್ಲಿ ಇಬ್ಬರ ಜಗಳ ತಾರಕಕ್ಕೇರಿದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಕನಿಷ್ಠ 3 ಕೋಟಿ ಬೇಕೆ ಬೇಕು ಎಂದು ಆಕಾಶ್ ಪಟ್ಟು ಹಿಡಿದಿದ್ದಾರೆ. ಹೀಗಾಗಿ ತಡ ರಾತ್ರಿವರೆಗೂ ಜಗಳ ಮುಂದುವರಿದಿದೆ. ಇತ್ತ ತಾಯಿ ಮಗಳ ಜಗಳದ ನಡುವೆ ಸೊಸೆ ಮೋನಿಕಾ ಮೂಗು ತೂರಿಸಲು ಹೋಗಿಲ್ಲ.
ತಾಯಿ ಹಾಗೂ ಮಗ ತಡ ರಾತ್ರಿವರೆಗೂ ಜಗಳ ಮಾಡಿ ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದಾರೆ. ಇತ್ತ ಅಕಾಶ್ ಪತ್ನಿ ಮೋನಿಕಾ ಬೇರೆ ಕೋಣೆಯಲ್ಲಿ ಮಲಗಿದ್ದಾರೆ. ತಡರಾತ್ರಿ ಅವರಿಬ್ಬರೂ ಜಗಳವಾಡಿ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದ ಹಿನ್ನೆಲೆಯಲ್ಲಿ ಸೊಸೆ ಮೋನಿಕ ಗಮನ ಹರಿಸಿರಲಿಲ್ಲ .
ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದಾರೆ. ಬೆಳಗ್ಗೆ ಸೊಸೆ ಮೋನಿಕಾ ಎದ್ದರೂ ಅತ್ತೆ ಜಯಶ್ರಿ ಹಾಗೂ ಗಂಡ ಆಕಾಶ್ ಕುರಿತು ಹೆಚ್ಚಿನ ಗಮನ ಹರಿಸಲು ಹೋಗಿಲ್ಲ. ಮನೆಕೆಲಸದವರರು ಕೋಣೆ ಶುಚಿಗೊಳಿಸುವಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೋನಿಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿದ್ದಾರೆ.
ಜಯಶ್ರಿ ಹಾಗೂ ಆಕಾಶ್ ದುರಂತ ಅಂತ್ಯದ ಬೆನ್ನಲ್ಲೇ ಇದೇ ಮನೆಯಲ್ಲಿ ಕೆಲ ವರ್ಷಗಳ ನಡುವೆ ನಾಲ್ವರು ಬದುಕು ಅಂತ್ಯಗೊಳಿಸಿದ್ದಾರೆ. ಜಯಶ್ರೀ ಪತಿ ಮಕ್ಕಳ ತಜ್ಞರಾಗಿದ್ದ ಡಾ ನಾಗರಾಜ್ ಹತ್ತು ವರ್ಷಗಳ ಹಿಂದೆ ಬದುಕು ಅಂತ್ಯಗೊಳಿಸಿದ್ದರು. ಕಳೆದ ಮೂರು ವರ್ಷಗಳ ಹಿಂದೆ 2022 ನವೆಂಬರ್ 6 ರಂದು ಆಕಾಶ್ ಮೊದಲ ಪತ್ನಿ ನವ್ಯಶ್ರೀ ಮದುವೆಯಾದ ಐದೆ ತಿಂಗಳಿಗೆ ಇದೇ ಮನೆಯಲ್ಲಿ ಬದುಕು ಅಂತ್ಯಗೊಳಿಸಿದ್ದರು. ಇದೀಗ ತಾಯಿ ಹಾಗೂ ಮಗ. ಹೀಗೆ ಒಟ್ಟು ನಾಲ್ವರು ಇದೇ ಮನೆಯಲ್ಲಿ ದುರಂತ ಅಂತ್ಯಕಂಡಿದ್ದಾರೆ.