ಯುಟ್ಯೂಬರ್ ನಗ್ನ ವಿಡಿಯೋ ವೈರಲ್, ಮನೆಯಲ್ಲಿ CCTV ಅಳವಡಿಸುವ ಮುನ್ನ ಇದು ಗೊತ್ತಿರಲಿ!

By Suvarna NewsFirst Published Dec 15, 2023, 5:13 PM IST
Highlights

ನಮ್ಮ ಹಾಗೂ ನಮ್ಮ ಮನೆಯ ಸುರಕ್ಷತೆಗೆ ಸಿಸಿಟಿವಿ ಅಗತ್ಯ. ಮನೆ, ಕಚೇರಿ, ಶಾಲೆ, ರಸ್ತೆ ಎಲ್ಲ ಕಡೆ ಸಿಸಿಟಿವಿ ಅಳವಡಿಸಲಾಗುತ್ತೆ. ಆದ್ರೆ ಇವು ಕೆಲವೊಮ್ಮೆ ನಮ್ಮನ್ನು ಆಪತ್ತಿಗೆ ತಳ್ಳುತ್ತವೆ. ಅದರ ಬಳಕೆ ಮುನ್ನ ಅದ್ರ ಬಗ್ಗೆ ಮಾಹಿತಿ ತಿಳಿದಿರಬೇಕು.  
 

ಕಳ್ಳರು ಬರದಿರಲಿ ಎನ್ನುವ ಕಾರಣಕ್ಕೆ, ಮನೆಯಲ್ಲಿರೋರೆ ಕಳ್ಳರಾದ್ರೆ ಅದನ್ನು ಪತ್ತೆ ಮಾಡೋಕೆ, ಮಕ್ಕಳ ಮೇಲೆ ನಿಗಾ ಇಡಲು ಮನೆಯಲ್ಲಿ ಈಗ ಸಿಸಿಟಿವಿ ಹಾಕೋದು ಮಾಮೂಲಿಯಾಗಿದೆ. ಅನೇಕರ ಮನೆಯಲ್ಲಿ ನೀವು ಸಿಸಿಟಿವಿ ನೋಡ್ಬಹುದು. ಸಿಸಿಟಿವಿ ಎಷ್ಟು ಸುರಕ್ಷತೆಯೋ ಅಷ್ಟೇ ಅಪಾಯಕಾರಿ. ಮನೆಯೊಂದರಲ್ಲಿ ಹಾಕಿದ್ದ ಸಿಸಿಟಿವಿ ಎಷ್ಟು ಖತರ್ನಾಕ್ ಎಂಬುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ.

ಘಟನೆ ಮುಂಬೈ (Mumbai) ನ ಬಾಂದ್ರಾದಲ್ಲಿ ನಡೆದಿದೆ. ಯುಟ್ಯೂಬರ್ (YouTuber)  ಒಬ್ಬರು ತಮ್ಮ ಖಾಸಗಿ ವಿಷ್ಯ ವೈರಲ್ ಆದ ಬಗ್ಗೆ ದೂರು ನೀಡಿದ್ದಾರೆ. 21 ವರ್ಷದ ಯುಟ್ಯೂಬರ್ ಮನೆಯಲ್ಲಿ ಸಿಸಿಟಿವಿ (CCTV) ಕ್ಯಾಮರಾ ಹಾಕಿಸಿದ್ದರು. ಅವರ ಸಿಸಿಟಿವಿ ಎಕ್ಸೆಸ್ ಪಡೆದ ಯಾರೂ, ಯುಟ್ಯೂಬರ್ ನ್ಯೂಡ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಪೊಲೀಸ್ ಪ್ರಕಾರ, ನವೆಂಬರ್ 17ರಂದೇ ಯುಟ್ಯೂಬರ್ ಮನೆಯ ಸಿಸಿಟಿವಿ ಕ್ಯಾಮರಾ ಪಾಸ್ವರ್ಡ್ ತಿಳಿದು ಎಕ್ಸೆಸ್ ಪಡೆದಿದ್ದಾರೆ. ಆದ್ರೆ ಪೀಡಿತರಿಗೆ ಡಿಸೆಂಬರ್ ಒಂಭತ್ತರಂದು ವಿಷ್ಯ ಗೊತ್ತಾಗಿದೆ.

ಅದ್ಕೇ ಹೇಳೋದು ಅಲ್ವಾ ಇಟ್ಕೊಂಡವಳು ಇರೋ ತನಕ, ಕಟ್ಕೊಂಡೋಳು ಕಡೇ ತನಕ ಅಂತ!

ಘಟನೆ ಬಗ್ಗೆ ಯುಟ್ಯೂಬರ್ ಹೇಳಿದ್ದೇನು? : ಸುರಕ್ಷತೆ ದೃಷ್ಟಿಯಿಂದ ಯುಟ್ಯೂಬರ್ ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಒಂದು ಕ್ಯಾಮರಾವನ್ನು ಬೆಡ್ ರೂಮಿಗೆ ಹಾಕಿದ್ದಾರೆ. ಅವರ ಸ್ನೇಹಿತರೊಬ್ಬರು ಡಿಸೆಂಬರ್ ಒಂಭತ್ತರಂದು ಕರೆ ಮಾಡಿ, ಬಟ್ಟೆ ಬದಲಿಸುತ್ತಿರುವ ನಿಮ್ಮ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದಿದ್ದಾರೆ. ಯುಟ್ಯೂಬರ್ ವಿಡಿಯೋ ಚೆಕ್ ಮಾಡಿದಾಗ ಇದು ಅವರದ್ದೇ ಎಂಬುದು ಗೊತ್ತಾಗಿದೆ. ಇದಾದ್ಮೇಲೆ ಅನೇಕರು ಯುಟ್ಯೂಬರ್ ಗೆ ಕರೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ಆಪ್ತರಲ್ಲೇ ಯಾರಾದ್ರೂ ಇರಬೇಕು ಎಂಬ ಶಂಕೆ ವ್ಯಕ್ತಪಡಿಸಿದ ಪೊಲೀಸರು ಎಲ್ಲ ಎಂಗಲ್ ನಲ್ಲೂ ತನಿಖೆ ನಡೆಸುತ್ತಿದ್ದಾರೆ.

ಸಿಸಿಟಿವಿ ವಿಡಿಯೋ ಲೀಕ್ ಆಗೋದು ಹೇಗೆ? : ಸಿಸಿಟಿವಿಯನ್ನು ವೈಫೈಗೆ ಕನೆಕ್ಟ್ ಮಾಡಲಾಗುತ್ತೆ. ಸುರಕ್ಷತೆಗಾಗಿ ನಿಮ್ಮ ಮನೆಯಲ್ಲಿ ಹಾಕುವ ಸಿಸಿಟಿವಿಗೆ ಇಂಟರ್ನೆಟ್ ಅವಶ್ಯಕತೆ ಇರುತ್ತದೆ. ಹಾಗಾಗಿ ಅದಕ್ಕೆ ನೆಟ್ ಕನೆಕ್ಟ್ ಮಾಡಲಾಗುತ್ತದೆ. ನಿಮ್ಮ ಸಿಸಿಟಿವಿ ಎಕ್ಸೆಸ್ ಬೇಕು ಎನ್ನುವವರು ವೈ ಫೈ ಪಾಸ್ವರ್ಡ್ ಪಡೆದು ನಂತ್ರ ಸಿಸಿಟಿವಿ ಎಕ್ಸೆಸ್ ಪಡೆಯುತ್ತಾರೆ. 

2023ರಲ್ಲಿ ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡಿದ ಫುಡ್‌, ಸತತ ಎಂಟನೇ ವರ್ಷ ನಂ.1 ಸ್ಥಾನದಲ್ಲಿ ಬಿರಿಯಾನಿ

ನೀವು ಸಿಸಿಟಿವಿಗೆ ಹಾಕುವ ಪಾಸ್ವರ್ಡ್ ಇಲ್ಲಿ ಮಹತ್ವ ಪಡೆಯುತ್ತದೆ. ನೀವು ಸುಲಭವಾದ ಪಾಸ್ವರ್ಡ್ ಹಾಕಿದ್ರೆ ಅದನ್ನು ಹ್ಯಾಕರ್ಸ್ ಆರಾಮವಾಗಿ ಪತ್ತೆ ಮಾಡ್ತಾರೆ. ನಿಮ್ಮಆಪ್ತರು ಇಲ್ಲ ನಿಮ್ಮ ನೆರೆಯವರು ಕೂಡ ನಿಮ್ಮ ಪಾಸ್ವರ್ಡ್ ಪತ್ತೆ ಮಾಡಿ, ಸಿಸಿಟಿವಿ ದೃಶ್ಯಗಳನ್ನು ಕದಿಯುವ ಸಾಧ್ಯತೆ ಇರುತ್ತದೆ.

ಇದಲ್ಲದೆ ಹೋಮ್ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸಿಸಿಟಿವಿ ಎಲ್ಲಾ ಭದ್ರತಾ ಕ್ರಮಗಳನ್ನು ಅನುಸರಿಸದಿದ್ದರೆ ಹ್ಯಾಕರ್ಸ್ ಸುಲಭವಾಗಿ ನಿಮ್ಮ ಸಿಸಿಟಿವಿ ಮಾಹಿತಿಯನ್ನು ಕದಿಯುತ್ತಾರೆ.  ನೀವು ಯಾವುದೇ ಅನುಮಾನಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರೆ ಅಥವಾ ಯಾವುದೇ ಅನುಮಾನಾಸ್ಪದ ಫೈಲ್ ಅನ್ನು ಡೌನ್‌ಲೋಡ್ ಮಾಡಿದ್ದರೆ ಇಂಥ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. 

ನೀವು ಮನೆಯ ಯಾವ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುತ್ತೀರಿ ಎನ್ನುವುದು ಮುಖ್ಯ. ನೀವು ಡ್ರಾಯಿಂಗ್ ರೂಮಿನಲ್ಲಿ ಕ್ಯಾಮರಾ ಅಳವಡಿಸಬಹುದು. ಅದೇ ನಿಮ್ಮ ಬೆಡ್ ರೂಮಿನಲ್ಲಿ ಸಿಸಿಟಿವಿ ಅಳವಡಿಸಬೇಕು. ಲೀವಿಂಗ್ ರೂಮಿನಲ್ಲಿ ಅಗತ್ಯ ಎಂದಾದ್ರೆ ಕ್ಯಾಮರಾ ಬಾಗಿಲಿನ ಕಡೆ ಮುಖಮಾಡಿರುವಂತೆ ಇಡಿ. ಇಲ್ಲವೆಂದ್ರೆ ನಿಮ್ಮ ಖಾಸಗಿ ಜೀವನ ಅದರಲ್ಲಿ ದಾಖಲಾಗುತ್ತದೆ. ಅದು ಹ್ಯಾಕರ್ ಕೈ ಸೇರುವ ಅಪಾಯ ಹೆಚ್ಚಿರುತ್ತದೆ. ಇದಲ್ಲದೆ ನೀವು ಬೆಡ್ ರೂಮ್ ಹಾಗೂ ಲೀವಿಂಗ್ ರೂಮ್ ಕ್ಯಾಮರಾಗಳನ್ನು ಇಂಟರ್ನೆಟ್ ಗೆ ಸಂಪರ್ಕಿಸಬೇಡಿ. 
 

click me!