
ನವದೆಹಲಿ(ಮಾ.18) ಭಾರತದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಕೇವಲ ಬಾಹ್ಯಾಕಾಶದಲ್ಲಿ ಘಟಿಸುವ ವಿಸ್ಮಯಗಳಲ್ಲ. ಅದರ ಹಿಂದೆ ಲೆಕ್ಕಾಚಾರಗಳಿವೆ, ರಾಶಿ ಬದಲಾಗುತ್ತದೆ, ಅದೃಷ್ಠ, ಸೂತಕ, ವೃತ ಸೇರಿದಂತೆ ಒಂದಷ್ಟು ವಿಚಾರಗಳು ಅಡಗಿಕೊಂಡಿದೆ. 2025ರ ಮೊದಲ ಚಂದ್ರಗ್ರಹಣ ಇತ್ತೀಚೆಗೆ ಘಟಿಸಿದೆ. ಹೋಳಿ ಹಬ್ಬದ ದಿನವೇ ಚಂದ್ರಗ್ರಹಣ ನಡೆದಿತ್ತು. ಇದೀಗ ಇದೇ ತಿಂಗಳಲ್ಲಿ ಸೂರ್ಯ ಗ್ರಹಣವೂ ನಡೆಯುತ್ತಿದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣ. ಚಂದ್ರನ ಭೂಮಿ ಹಾಗೂ ಸೂರ್ಯನ ನಡುವೆ ಬರುವ ಕಾರಣ ಸೂರ್ಯನ ಬೆಳಕು ಭೂಮಿಗೆ ನೆರಳಾಗಿ ಬೀಳಲಿದೆ.
ಈ ವರ್ಷ ಮೊದಲ ಸೂರ್ಯಗ್ರಹಣ ಯಾವಾಗ?
ಈ ವರ್ಷದ ಮೊದಲ ಸೂರ್ಯಗ್ರಹಣ ಮಾರ್ಚ್ 19 ರಂದು ನಡೆಯಲಿದೆ. ಭಾರತೀಯ ಸಮಯದ ಪ್ರಕಾರ, ಮಾರ್ಚ್ 29 ರಂದು ಸಂಭವಿಸುವ ಸೂರ್ಯಗ್ರಹಣವು ಮಧ್ಯಾಹ್ನ 2:21 ಕ್ಕೆ ಪ್ರಾರಂಭವಾಗಿ ಸಂಜೆ 6:14 ರವರೆಗೆ ಇರಲಿದೆ. ಚಂದ್ರಗ್ರಹಣದಂತೆ ಸೂರ್ಯಗ್ರಹಣವನ್ನು ಸರಿಯಾದ ರಕ್ಷಣೆ ಇಲ್ಲದೆ ನೋಡುವುದು ಅಪಾಯಕಾರಿ. ನಿಮ್ಮ ಕಣ್ಣುಗಳನ್ನು ರಕ್ಷಿಸಲು ಪ್ರಮಾಣೀಕೃತ ಸೌರ ಕನ್ನಡಕಗಳು ಅಥವಾ ರಕ್ಷಣಾತ್ಮಕ ಸಾಧನಗಳನ್ನು ಬಳಸುವುದು ಅತ್ಯಗತ್ಯ. ಗ್ರಹಣದ ಸಮಯದಲ್ಲಿ ಸೂರ್ಯನಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ರೆಟಿನಾಗೆ ಹಾನಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಮಾರ್ಚ್‌ನಲ್ಲಿ ಚಂದ್ರ ಗ್ರಹಣ ಮತ್ತು ಸೂರ್ಯ ಸಂಚಾರ ಒಟ್ಟಿಗೆ, ಈ ರಾಶಿಗೆ ಅದೃಷ್ಟ, ಸಂಪತ್ತು
ಭಾರತದಲ್ಲಿದೆಯಾ ಸೂತಕ?
ಈ ವರ್ಷದ ಮೊದಲ ಸೂರ್ಯಗ್ರಹಣವು ಯುರೋಪ್, ಏಷ್ಯಾದ ಉತ್ತರ ಭಾಗ, ಉತ್ತರ ಮತ್ತು ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕಾದ ಕೆಲವು ಭಾಗಗಳಲ್ಲಿ ಮತ್ತು ಅಟ್ಲಾಂಟಿಕ್ ಮಹಾಸಾಗರದಲ್ಲಿ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಗ್ರಹಣವು ಎಲ್ಲಿಯೂ ಗೋಚರಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಸೂತಕವಿರುವುದಿಲ್ಲ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತಿದೆ. ಈ ಸೂರ್ಯಗ್ರಹಣ ಭಾರತ ಭೂಭಾಗದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಷ್ಟೇ ಅಲ್ಲ ರಾಶಿಗಳ ಚಲನವಲನದಲ್ಲಿ ಯಾವುದೇ ಬದಲಾವಣ ತರುವುದಿಲ್ಲ. ಹೀಗಾಗಿ ಭಾರತದ ಮೇಲೆ ಪರಿಣಾಮವಿಲ್ಲ.
ಸೂರ್ಯಗ್ರಹಣ ವೀಕ್ಷಿಸಲು ಇದೀಗ ವಿಜ್ಞಾನಿಗಳು, ಸಂಶೋಧಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿಜ್ಞಾನಿಗಳಿಗೆ ಪ್ರತಿ ಸೂರ್ಯಗ್ರಹಣ ಅತ್ಯಂತ ಕೌತುಕದ ವಿಚಾರ. ಇದರ ಜೊತೆಗೆ ಅಧ್ಯಯನಗಳು, ಸಂಶೋಧನೆಗಳು ತೀವ್ರಗೊಳ್ಳುತ್ತದೆ.
NASA 2025ರಲ್ಲಿ ಎರಡು ಸೂರ್ಯಗ್ರಹಣಗಳನ್ನು ನಿರೀಕ್ಷಿಸಲಾಗಿದೆ. ಎರಡನೆಯದು ಸೆಪ್ಟೆಂಬರ್ 21 ರಂದು ನಡೆಯಲಿದೆ. ಇದರ ಜೊತೆಗೆ ಆಕಾಶ ವೀಕ್ಷಕರು ಈ ವರ್ಷ ಎರಡು ಚಂದ್ರಗ್ರಹಣಗಳನ್ನು ನಿರೀಕ್ಷಿಸಬಹುದು. ಮೊದಲ ಚಂದ್ರಗ್ರಹಣ ಮಾರ್ಚ್ 14 ರಂದು ನಡೆದಿದೆ. ಇದೀಗ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ನಡೆಯಲಿದೆ.
ಶನಿ ಸಂಕ್ರಮಣದಲ್ಲಿ ಸೂರ್ಯಗ್ರಹಣ, 2025 ರಲ್ಲಿ ಈ 4 ರಾಶಿ ಜೀವನೇ ಬದಲಾಗುತ್ತೆ, ಸಂಪತ್ತು ಹೆಚ್ಚಾಗುತ್ತೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.