
ಚಂದ್ರ, ಕತ್ತಲೆಯಲ್ಲಿ ಬೆಳಕು ನೀಡುವ ಗ್ರಹ. ಕವಿಗಳಿಗೆ ಸೌಂದರ್ಯ ವರ್ಣಿಸುವ ವಸ್ತು. ಮಕ್ಕಳ ಆಟಿಕೆ. ಒಟ್ಟಾರೆ ಎಲ್ಲರ ಅಚ್ಚುಮೆಚ್ಚು ಚಂದ್ರ. ಈ ಚಂದ್ರ 4.5 ಶತಕೋಟಿ ವರ್ಷಗಳಿಗೂ ಹೆಚ್ಚು ಕಾಲ ಸೂರ್ಯನ ಸುತ್ತ ಭೂಮಿಯೊಂದಿಗೆ ಸುತ್ತುತ್ತಿದೆ. ಮಂಗಳ ಗಾತ್ರದ ವಸ್ತುವೊಂದು ಭೂಮಿಗೆ ಡಿಕ್ಕಿ ಹೊಡೆದಾಗ ಚಂದ್ರ ಹುಟ್ಟಿಕೊಂಡಿತು ಎಂದು ತಜ್ಞರು ನಂಬುತ್ತಾರೆ. ನಾವು ಚಂದ್ರನ ಉಪಸ್ಥಿತಿಗೆ ಎಷ್ಟು ಒಗ್ಗಿಕೊಂಡಿದ್ದೇವೆ ಅಂದ್ರೆ ಅದಿಲ್ಲದೆ ಭೂಮಿಯನ್ನು ಊಹಿಸೋದು ಕಷ್ಟ. ಒಂದಲ್ಲ ಒಂದು ದಿನ ಚಂದ್ರ ಗ್ರಹ ಕಣ್ಮರೆಯಾಗುತ್ತಾ? ಒಂದ್ವೇಳೆ ಕಣ್ಮರೆಯಾದ್ರೆ ಏನಾಗುತ್ತೆ?
ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತದ (ನಾಸಾ) ಆರ್ಟೆಮಿಸ್ 3 ಚಂದ್ರ ಕಾರ್ಯಾಚರಣೆಯ ಯೋಜನಾ ವಿಜ್ಞಾನಿ, ನೋಹ್ ಪೆಟ್ರೋ, ಕೆಲವೇ ಕೆಲವು ಖಗೋಳ ಘಟನೆಗಳು ಚಂದ್ರ ಕಣ್ಮರೆಯಾಗಲು ಕಾರಣವಾಗಬಹುದು ಎಂದಿದ್ದಾರೆ. ಪೆಟ್ರೋ ಪ್ರಕಾರ, ಏಕೈಕ ಖಗೋಳ ಘಟನೆ ಚಂದ್ರನ ಮೇಲೆ ಸಾಕಷ್ಟು ದೊಡ್ಡ ಪರಿಣಾಮ ಬೀರಬಹುದು, ಚಂದ್ರನನ್ನು ಒಡೆಯಬಹುದು ಎಂದಿದ್ದಾರೆ. ಅವರ ಪ್ರಕಾರ, ದೊಡ್ಡ ಘರ್ಷಣೆಯಿಂದ ಚಂದ್ರ ಗ್ರಹ ರೂಪಗೊಂಡಿದೆ. ಅದೇ ರೀತಿ ದೊಡ್ಡ ಘರ್ಷಣೆಯಾದ್ರೆ, ದೊಡ್ಡ ವಸ್ತು ಚಂದ್ರನಿಗೆ ಘರ್ಷಿಸಿದ್ರೆ ಮಾತ್ರ ಅದು ಹೋಳಾಗಬಹುದು. ಆದ್ರೆ ಇದು ಸಂಭವಿಸೋ ಸಾಧ್ಯತೆ ಬಹಳ ಕಡಿಮೆ ಎಂದು ಅವರು ಹೇಳಿದ್ದಾರೆ.
ಸೌರವ್ಯೂಹದಲ್ಲಿರುವ ಹೆಚ್ಚಿನ ದೊಡ್ಡ ವಸ್ತುಗಳನ್ನು ಸೂರ್ಯ ಮತ್ತು ಗ್ರಹಗಳು ಹೀರಿಕೊಂಡಿವೆ. ಪೆಟ್ರೋ ಪ್ರಕಾರ, ಇನ್ನೊಂದು ಸಾಧ್ಯತೆಯೆಂದರೆ ರಾಕ್ಷಸ ಗ್ರಹವು ಅಂತರತಾರಾ ಬಾಹ್ಯಾಕಾಶದಿಂದ ಸೌರವ್ಯೂಹವನ್ನು ಪ್ರವೇಶಿಸಿದ್ರೆ ಇದು ಆಗ್ಬಹುದು. ಆದ್ರೆ ಅದು ಚಂದ್ರನೊಂದಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಅವರು ಹೇಳಿದ್ದಾರೆ.
ಚಂದ್ರ ಕಣ್ಮರೆಯಾದರೆ ಭೂಮಿಗೆ ಏನಾಗುತ್ತದೆ? : ಚಂದ್ರ ಕಣ್ಮರೆಯಾದ್ರೆ, ಮನುಷ್ಯ ಒಗ್ಗಿಕೊಂಡಿರುವಂತಹ ಅನೇಕ ವಿದ್ಯಮಾನಗಳಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ. ಸಮುದ್ರದ ಏರಿಳಿದ, ಕರಾವಳಿ ಪರಿಸರ ವ್ಯವಸ್ಥೆ ಮತ್ತು ಸಮುದ್ರ ಜೀವಿಗಳ ಮೇಲೆ ಇದು ಪರಿಣಾಮ ಬೀರಲಿದ್ದು, ಅವುಗಳ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಸ್ಪೇಸ್ ವರದಿ ಮಾಡಿದೆ. ಕರಾವಳಿಗಳಲ್ಲಿ ಸಮುದ್ರದ ಏರಿಳಿತ ಕಡಿಮೆ ಆಗುತ್ತದೆ. ಇದು ಗ್ರಹದ ಸುತ್ತಲಿನ ಶಾಖ ಮತ್ತು ಶಕ್ತಿಯ ಪ್ರಸರಣದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದಲ್ಲದೆ, ಚಂದ್ರನನ್ನು ಸ್ಥಿರಗೊಳಿಸದೆ, ಭೂಮಿಯ ಅಕ್ಷದ ಕಂಪನವು ವಿಪರೀತ ಮತ್ತು ಅನಿಯಮಿತವಾಗಬಹುದು. ಇದು ಅನಿರೀಕ್ಷಿತ ಹವಾಮಾನ ಮತ್ತು ಭೂಮಿಯ ವಾಸಯೋಗ್ಯತೆಯಲ್ಲಿ ತೀವ್ರ ಬದಲಾವಣೆ ತರಬಹುದು.
ಚಂದ್ರ ಭೂಮಿಗೆ ಹತ್ತಿರ ಬಂದ್ರೆ ಏನಾಗುತ್ತೆ? : ಚಂದ್ರನು ಭೂಮಿಯಿಂದ ಸರಾಸರಿ 3,84,400 ಕಿಲೋಮೀಟರ್ ದೂರದಲ್ಲಿರುತ್ತಾನೆ. ಆದಾಗ್ಯೂ, ಚಂದ್ರನು ಇದ್ದಕ್ಕಿದ್ದಂತೆ ಭೂಮಿಗೆ ಬಹಳ ಹತ್ತಿರ ಬಂದರೆ, ಅದು ಭಯಾನಕ ಪರಿಣಾಮಗಳನ್ನು ಬೀರಬಹುದು. ಚಂದ್ರನು ಭೂಮಿಗೆ ಹತ್ತಿರ ಬಂದ್ರೆ ಏರಿಳಿತ ಅಗಾಧವಾಗಿ ಹೆಚ್ಚಾಗುತ್ತವೆ. ಇದು ಸಮುದ್ರಗಳ ನೀರಿನ ಮಟ್ಟವು ಹಠಾತ್ತನೆ ತುಂಬಾ ಹೆಚ್ಚಾಗಲು ಕಾರಣವಾಗಬಹುದು. ಇದು ಕರಾವಳಿ ಪ್ರದೇಶಗಳಲ್ಲಿ ತೀವ್ರ ಪ್ರವಾಹ ಬೀರುತ್ತವೆ. ಇದು ಭೂಮಿಯ ಟೆಕ್ಟೋನಿಕ್ ಪ್ಲೇಟ್ಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟು ಮಾಡುತ್ತದೆ. ಇದು ಭೂಕಂಪಗಳು ಮತ್ತು ಜ್ವಾಲಾಮುಖಿಯನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇದು ಹೊಸ ಭೂಕಂಪನ ಅಪಾಯಗಳನ್ನು ಉಂಟುಮಾಡಬಹುದು. ಇದು ಮನುಷ್ಯನಿಗೆ ಬರೀ ಪ್ರಕೃತಿ ಹಾನಿಯೊಂದನ್ನೇ ಉಂಟು ಮಾಡೋದಿಲ್ಲ. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ವೈಯಕ್ತಿಕ ಜೀವನದಲ್ಲಿ ಒತ್ತಡವನ್ನು ಉಂಟುಮಾಡಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.