ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಬರೋಬ್ಬರಿ 9 ತಿಂಗಳ ಕಾಲ ಕಳೆದು ಇದೀಗ ಭೂಮಿಗೆ ಮರಳುತ್ತಿದ್ದಾರೆ. ಆದರೆ ಸುದೀರ್ಘ ದಿನ ಬಾಹ್ಯಾಕಾಶದಲ್ಲಿ ಕಳೆದಿದ್ದು ಸುನೀತಾ ವಿಲಿಯಮ್ಸ್ ಅಲ್ಲ, ಹಾಗಾದರೆ ಮತ್ಯಾರು?
ನಾಸಾ(ಮಾ.18) ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ತಾಂತ್ರಿಕ ದೋಷದ ಕಾರಣ ಕಳೆದ 9 ತಿಂಗಳು ಬಾಹ್ಯಾಕಾಶದಲ್ಲಿ ಉಳಿಯುವಂತಾಗಿತ್ತು. ಇದೀಗ ಇಬ್ಬರು ಗನನಯಾತ್ರಿಗಳು ಭೂಮಿಗೆ ಮರಳುತ್ತಿದ್ದಾರೆ. ನಾಸಾ ಹಾಗೂ ಸ್ಪೆಸ್ ಎಕ್ಸ್ ಜಂಟಿಯಾಗಿ ಸುನೀತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಇಬ್ಬರನ್ನು ಸುರಕ್ಷಿತವಾಗಿ ಭೂಮಿಗೆ ಕರೆ ತರುತ್ತಿದೆ. ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಲು ಭಾರತದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸುದೀರ್ಘ ದಿನಗಳನ್ನೇ ಕಳೆಯಬೇಕಾಯಿತು. ಆದರೆ ಬಾಹ್ಯಾಕಾಶದಲ್ಲಿ ಅತೀ ಹೆಚ್ಚು ದಿನ ಕಳೆದಿದ್ದು ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅಲ್ಲ. ಈ ಕೀರ್ತಿಗೆ ರಷ್ಯಾದ ಕಾಸ್ಮೋನೌಟ್ ವಲೇರಿ ಪೊಲ್ಯಾಕೌವ್ ಪಾತ್ರರಾಗಿದ್ದಾರೆ.
ವಲೇರಿ ಪೊಲ್ಯಾಕೌವ್ ಬಾಹ್ಯಾಕಾಶದಲ್ಲಿ ಸತತವಾಗಿ 14 ತಿಂಗಳು ಉಳಿದುಕೊಂಡಿದ್ದರು. ಅಂದರೆ ಬರೋಬ್ಬರಿ 437 ದಿನ. ಸದ್ಯ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ 286 ದಿನ ಬಾಹ್ಯಾಕಾಶದಲ್ಲಿ ಉಳಿದುಕೊಂಡಿದ್ದಾರೆ. ಈಗಲೂ ಅತೀ ಹೆಚ್ಚು ದಿನ ಬಾಹ್ಯಾಕಾಶದಲ್ಲಿ ಉಳಿದುಕೊಂಡ ದಾಖಳೆ ವಲೇರಿ ಪೊಲ್ಯಾಕೌವ್ ಹೆಸರಿನಲ್ಲಿದೆ.
ಸುನಿತಾ ವಿಲಿಯಮ್ಸ್ ಆಗಮನಕ್ಕೆ ಕ್ಷಣಗಣನೆ; ಫ್ಲೋರಿಡಾದ ಸಮುದ್ರದ ಮೇಲೆ ಇಳಿಯಲಿದೆ ನೌಕೆ
ರಷ್ಯಾದ ಗಗನಯಾತ್ರಿ ವಲೇರಿ ಪೊಲ್ಯಾಕೌವ್1988ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಿದ್ದರು. ಮಿರ್ ಬಾಹ್ಯಾಕಾಶ ಕೇಂದ್ರದಲ್ಲಿ ಉಳಿದುಕೊಂಡಿದ್ದ ವಲೇರಿ ಪೊಲ್ಯಾಕೌವ್ ಅಧ್ಯಯನಕ್ಕಾಗಿ ಬರೋಬ್ಬರಿ 8 ತಿಂಗಳು ಉಳಿದುಕೊಂಡಿದ್ದರು. ಸತತ 8 ತಿಂಗಳ ಬಳಿಕ ವಲೇರಿ ಪೊಲ್ಯಾಕೌವ್ ಭೂಮಿಗೆ ಸುರಕ್ಷಿತವಾಗಿ ಮರಳಿದ್ದರು. ಇದಾದ ಬಳಿಕ ವಲೇರಿ ಪೊಲ್ಯಾಕೌವ್ 1994ರಲ್ಲಿ ಮತ್ತೆ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದರು. ಇದು ದಾಖಲೆಯಾಗಿತ್ತು.
ವಲೇರಿ ಪೊಲ್ಯಾಕೌವ್ ಎರಡನೇ ಬಾರಿಗೆ ಬಾಹ್ಯಾಕಾಶ ಕೇಂದ್ರದಲ್ಲಿ ಬರೋಬ್ಬರಿ 14 ತಿಂಗಳು 17 ದಿನ ಉಳಿದುಕೊಂಡಿದ್ದರು. ಒಟ್ಟು 437 ದಿನ ಉಳಿದುಕೊಂಡ ವಲೇರಿ ಪೊಲ್ಯಾಕೌವ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದರು. ವಿಶೇಷ ಅಂದರೆ ವಲೇರಿ ಪೊಲ್ಯಾಕೌವ್ ಆರೋಗ್ಯ ಉತ್ತಮವಾಗಿತ್ತು. ಪ್ರತಿ ದಿನ 2 ಗಂಟೆ ಬಾಹ್ಯಾಕಾಶದಲ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ವ್ಯಾಯಾಮ ಮಾಡುತ್ತಿದ್ದರು.
ಆದರೆ ಶೂನ್ಯ ಗುರತ್ವಾಕರ್ಷಣೆಯಿಂದ ವಲೇರಿ ಪೊಲ್ಯಾಕೌವ್ ದೇಹದಲ್ಲಿ ಭಾರಿ ಬದಲಾವಣೆ ಆಗಿರಲಿಲ್ಲ. ಭೂಮಿಗೆ ಮರಳಿದ ಬಳಿಕ ವಲೇರಿ ಪೊಲ್ಯಾಕೌವ್ ನಡೆದಾಡಲು ಯಾವುದೇ ಸಮಸ್ಸೆ ಎದುರಾಗಿರಲಿಲ್ಲ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗಗನಯಾತ್ರಿ ವಲೇರಿ ಪೊಲ್ಯಾಕೌವ್ ಯಶಸ್ವಿಯಾಗಿದ್ದರು.
ಸುನಿತಾ ವಿಲಿಯಮ್ಸ್ ದೀರ್ಘ ಬಾಹ್ಯಾಕಾಶ ಯೋಜನೆಯ ಪಾಠ: ಭವಿಷ್ಯದ ಅನ್ವೇಷಣೆಗಳಿಗೆ ಹೊಸರೂಪ