ಆಗಸದಲ್ಲಿ ಪತ್ತೆಯಾಯ್ತಾ ಆನ್ಯಗ್ರಹ ಜೀವಿ ವಿಮಾನ? ಅನುಮಾನ ಹೆಚ್ಚಿಸಿದ ಘಟನೆ ವಿಡಿಯೋ

Published : Feb 21, 2025, 07:30 PM ISTUpdated : Feb 21, 2025, 07:55 PM IST
ಆಗಸದಲ್ಲಿ ಪತ್ತೆಯಾಯ್ತಾ ಆನ್ಯಗ್ರಹ ಜೀವಿ ವಿಮಾನ?  ಅನುಮಾನ ಹೆಚ್ಚಿಸಿದ ಘಟನೆ ವಿಡಿಯೋ

ಸಾರಾಂಶ

ಅನ್ಯಗ್ರಹ ಜೀವಿ ಕುರಿತು ಮತ್ತೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಆಗಸದಲ್ಲಿ ಮಿಂಚಿ ಮರೆಯಾದ ಬೆಳಕು. ವೇಗವಾಗಿ ಚಲಿಸುತ್ತಿದ್ದ ಬೆಳಕೊಂದು ದಿಢೀರ್ ನಿಂತು ಬಳಿಕ ಮರೆಯಾದ ಘಟನೆ ಸೆರೆಯಾಗಿದೆ. ಇದು ಅನ್ಯಗ್ರಹ ಜೀವಿ ವಿಮಾನವೇ ?  

ಅನ್ಯಗ್ರಹ ಜೀವಿಗಳು ಇದೆಯಾ? ಹಲವು ಬಾರಿ ಅನ್ಯಗ್ರಹ ಜೀವಿ ಇರುವಿಕೆ ಕುರಿತು ಕೆಲ ಸಾಕ್ಷ್ಯಗಳು ಲಭ್ಯವಾಗಿದೆ. ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಅನ್ಯಗ್ರಹ ಜೀವಿ ಮೃತದೇಹ ಪತ್ತೆ ಅನ್ನೋ ಮಾಹಿತಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಮತ್ತೆ ಅನ್ಯಗ್ರಹ ಜೀವಿ ಚರ್ಚೆ ಆರಂಭಗೊಂಡಿದೆ. ಇದಕ್ಕೆ ಕಾರಣ ಆಗಸದ ಪತ್ತೆಯಾದ ವಿಚಿತ್ರ ಚಲಿಸುವ ಬೆಳಕು. ಆಗಸದಲ್ಲಿ ವೇಗವಾಗಿ ಚಲಿಸುತ್ತಿರುವ ಬೆಳಕು ಪತ್ತೆಯಾಗಿದೆ. ಏಕಾಏಕಿ ಚಲನೆ ನಿಂತಿದೆ. ಕೆಲ ಹೊತ್ತು ಆಗಸದಲ್ಲಿ ಕಾಣಿಸಿಕೊಂಡ ಈ ಬೆಳಕು ಬಳಿಕ ಮಾಯವಾಗಿದೆ. ಇದು ಅನ್ಯಗ್ರಹ ಜೀವಿಯ ವಿಮಾನ ಅನ್ನೋ ಚರ್ಚೆಗಳು ಶುರುವಾಗಿದೆ. ಈ ವಿಡಿಯೋ ಇದೀಗ ಕೆಲ ಅನುಮಾನಗಳನ್ನು ಹುಟ್ಟು ಹಾಕಿದೆ.

ಅನ್ಯಗ್ರಹ ಜೀವಿ ಕುರಿತು ಈಗಾಗಲೇ ಹಲವು ವಿಡಿಯೋಗಳು, ಸುದ್ದಿಗಳು ಹರಿದಾಡಿದೆ. ಆದರೆ ಯಾವುದಕ್ಕೂ ಪ್ರಬಲವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹಾಗಂತ ಅಧ್ಯಯನ ನಿಂತಿಲ್ಲ. ಇತ್ತೀಚೆಗೆ ವಿಜ್ಞಾನಿಗಳು ಅನ್ಯಗ್ರಹ ಜೀವಿಗಳು ಇದೆ. ವಿಶೇಷ ಅಂದರೆ ಅನ್ಯಗ್ರಹ ಜೀವಿ ಮನುಷ್ಯನ ವೇಷದಲ್ಲಿ ಭೂಮಿಯಲ್ಲಿ ವಾಸಿಸುತ್ತಿದೆ ಎಂದು ಕೆಲ ವಿಜ್ಞಾನಿಗಳು ಹೇಳಿದ್ದರು. ಇವೆಲ್ಲದರ ನಡುವೆ ಅನ್ಯಗ್ರಹ ಜೀವಿ ವಿಮಾನ ಪತ್ತೆಯಾಗಿದೆ ಅನ್ನೋ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ.

ಕೊನೆಗೂ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಭಾರತೀಯ ಸೈಂಟಿಸ್ಟ್, ಈ ಗ್ರಹ ಎಲ್ಲಿದೆ?

ರಾತ್ರಿ ವೇಳೆ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಈ ಘಟನೆಯ್ನು ಮೊಬೈಲ್ ಮೂಲಕ ಸೆರೆ ಹಿಡಿದ್ದಾರೆ. ಆಗಸದಲ್ಲಿ ವೇಗವಾಗಿ ಬೆಳಕಿನ ಆಕಾರದ ವಸ್ತುವೊಂದು ಚಲಿಸುತ್ತಾ ಸಾಗಿದೆ. ಅನ್ಯಗ್ರಹ ಜೀವಿಯ ವಿಮಾನ ಚಿತ್ರಿಸುವ ವೇಳೆ ಸೃಷ್ಟಿಸುವ ವೃತ್ತಕಾರಾದ ವಸ್ತು ರೀತಿಯಲ್ಲಿ ಇದು ಚಲಿಸಿದೆ. ಪ್ರಬಲ ಬೆಳಕಿನ ಕಾರಣದಿಂದ ಎಲ್ಲರಿಗೂ ಇದು ಗೋಚರಿಸಿತ್ತು.

 

 

ಈ ವಸ್ತು ಆಗಸದಲ್ಲಿ ವೇಗವಾಗಿ ಚಲಿಸಿ ಬಳಿಕ ಏಕಾಏಕಿ ನಿಂತಿತ್ತು. ಆದರೆ ಬೆಳಕು ಹಾಕೆ ಉರಿಯುತ್ತಿತ್ತು. ಕೆಲ ಹೊತ್ತು ಈ ಬೆಳಕು ಹಾಗೇ ಉರಿದಿದೆ. ಬಳಿಕ ಏಕಾಏಕಿ ಬೆಳಕು ಮಾಯವಾಗಿದೆ. ಬಳಿಕ ವಸ್ತು ಮಾತ್ರ ವಾಪಸ್ ಚಲಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿ ಝೂಮ್ ಮಾಡಿ ತೋರಿಸಿದ್ದಾರೆ.  ಈ ಸಂಪೂರ್ಣ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಅನ್ಯಗ್ರಹ ಜೀವಿ ವಿಮಾನ. ದೃಶ್ಯ ಸೆರೆಹಿಡಿಯುತ್ತಿರುವುದು ಗೊತ್ತಾಗುತ್ತಿದ್ದಂತೆ ಅನ್ಯಗ್ರಹ ಜೀವಿ ಮರೆಯಾಗಿದೆ ಎಂದ ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಇದು ಆಗಸದಲ್ಲಿ ಸಾಗಿದ ಡ್ರೋನ್ ಎಂದು ಪ್ರತಿಕ್ರಿಯಿಸಿದ್ದಾರೆ.

ಡ್ರೋನ್ ವೇಗವವಾಗಿ ಸಾಗಿದೆ. ಒಂದಷ್ಟು ಕಾಲ ಆಗಸದಲ್ಲಿ ನಿಂತು ಬಳಿಕ ಡ್ರೋನ್ ಲೈಟ್ ಆಫ್ ಮಾಡಲಾಗಿದೆ. ವಿಡಿಯೋ ಜೂಮ್ ಮಾಡುವಾಗ ಡ್ರೋನ್ ವಾಪಸ್ ಚಲಿಸುತ್ತಿರುವುದು ಪತ್ತೆಯಾಗಿದೆ. ಇದು ಅನ್ಯಗ್ರಹ ಜೀವಿಯ ವಿಮಾನ ಅಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಒಂದಷ್ಟು ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಮೇಲ್ನೋಟಕ್ಕೆ ಇದು ಡ್ರೋನ್ ರೀತಿ ಕಾಣಿಸುತ್ತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಆಗಸದಿಂದ ಬಿತ್ತು ದೊಡ್ಡ ಲೋಹದ ಉಂಗುರ, ಗ್ರಾಮಸ್ಥರಲ್ಲಿ ಹೆಚ್ಚಿದ ಏಲಿಯನ್ ಆತಂಕ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ