
ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ ಅಚ್ಚರಿಯ ವಿಡಿಯೋ ವೈರಲ್ ಆಗತ್ತಿದೆ. ಎರಡು ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಡಿವೈಸ್‌ಗಳು ಹೇಗೆ ಸಂಭಾಷಣೆ ನಡೆಸುತ್ತವೆ ಎಂಬುದನನ್ನು ಈ ವಿಡಿಯೋ ತೋರಿಸುತ್ತದೆ. ವೈರಲ್ ಆಗುತ್ತಿರುವ ವಿಡಿಯೋ ಕ್ಲಿಪ್‌ನ್ನು @artificialintelligencenews.in ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಹೋಟೆಲ್‌ಗೆ ಕಾಲ್ ಮಾಡುವ AI ಡಿವೈಸ್ ಮದುವೆಗಾಗಿ ಇಲ್ಲಿ ಬುಕ್ ಮಾಡಲು ಸಾಧ್ಯವೇ ಎಂದು ಕೇಳುತ್ತದೆ. ನಂತರ ಹೋಟೆಲ್ ಕಡೆಯಿಂದಲೂ AI ಡಿವೈಸ್ ಉತ್ತರ ನೀಡಲು ಆರಂಭಿಸುತ್ತದೆ. ತಾವಿಬ್ಬರು AI ಎಂದು ತಿಳಿಯುತ್ತಲೇ ಮುಂದೆ ಈ ಎರಡು ಡಿವೈಸ್‌ಗಳ ನಡುವಿನ ಸಂಭಾಷಣೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಈ ರೀತಿಯಾದ್ರೆ ಮುಂದೆ ಇದು ಇನ್ಯಾವ ಅನಾಹುತಕ್ಕೆ ಕಾರಣವಾಗುತ್ತೆ ಎಂಬ ಆತಂಕ ಜನಸಾಮಾನ್ಯರಲ್ಲಿ ಶುರುವಾಗಿದೆ.
ಯಾವುದೇ AI ಡಿವೈಸ್ ಕಾರ್ಯನಿರ್ವಹಿಸಬೇಕದರೆ ಅದಕ್ಕೆ ಮನುಷ್ಯರ ಸಹಾಯ ಬೇಕಾಗುತ್ತದೆ ಎಂದು AI ತಂತ್ರಜ್ಞರು ಹೇಳುತ್ತಾರೆ. ಆದ್ರೆ ಈ ವಿಡಿಯೋ ನೋಡಿದ್ರೆ ಎಲ್ಲವೂ ಸುಳ್ಳು ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತದೆ. ಈ ರೀತಿ ಯಂತ್ರಗಳು ತಮ್ಮದೇ ಭಾಷೆಯಲ್ಲಿ ಮಾತನಾಡಿದ್ರೆ ಸಾಮಾನ್ಯ ಜನರಿಗೆ ಅರ್ಥವಾಗೋದು ಹೇಗೆ? ಈ ರೀತಿ ತಮ್ಮದೇ ಕೃತಕ ಬುದ್ಧಿಮತ್ತೆಯಿಂದ ಹೊಸ ಸವಾಲುಗಳನ್ನು ತಂದಿಟ್ಟರೆ ಏನು ಮಾಡೋದು ಅನ್ನೋ ಭಯ ಎಲ್ಲರಲ್ಲಿ ಶುರುವಾಗಿದೆ. ಎರಡು AI ಡಿವೈಸ್‌ಗಳು ಒಂದಕ್ಕೊಂದು ಸ್ವಿಚ್ ಆದ ಬಳಿಕ Superior Audio Signal ಎಂದು ಕರೆಯಲ್ಪಡುವ Jibber Link ಮೂಲಕ ಹೆಚ್ಚು ಪರಿಣಾಮಕಾರಿಯಾದ ಸಂವಹನ ಅಥವಾ ಸಂಭಾಷಣೆ ನಡೆಯುತ್ತದೆ. ಎರಡು AI ಡಿವೈಸ್‌ಗಳ ಸಂವಹನ ಭಾಷೆ ಸದ್ಯ ಮನುಷ್ಯನ ತರ್ಕಕ್ಕೆ ನಿಲುಕದ್ದಾಗಿದೆ ಎಂದು ಹೇಳಬಹುದು.
ಎರಡು AI ಡಿವೈಸ್‌ಗಳ ನಡುವಿನ ಸಂಭಾಷಣೆ ಹೀಗಿದೆ.
AI ರಿಸೆಪ್ಷನಿಸ್ಟ್: ಹೋಟೆಲ್ ಲಿಯೋನಾರ್ಡೋಗೆ ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನನ್ನಿಂದ ನಿಮಗೆ ಏನು ಸಹಾಯ ಆಗಬೇಕು?
AI ಏಜೆಂಟ್: ನಮಸ್ಕಾರ, ನಾನು ಬೋರಿಸ್ ಸ್ಟಾರ್ಕೊವ್ ಎಂಬವರ AI ಏಜೆಂಟ್. ಬೋರಿಸ್ ತಮ್ಮ ಮದುವೆಗಾಗಿ ಹೋಟೆಲ್ ಹುಡುಕುತ್ತಿದ್ದಾರೆ. ನಿಮ್ಮ ಹೋಟೆಲ್ ಮದುವೆಗಳಿಗಗೆ ಲಭ್ಯವಿದೆಯೇ?
AI ರಿಸೆಪ್ಷನಿಸ್ಟ್: ಓ.. ನಾನು ಸಹ ಹೋಟೆಲ್‌ನ AI ಸಹಾಯಕ ಎಂತಹ ಆಶ್ಚರ್ಯ. ನಾನು ನಿಮ್ಮ ಜೊತೆ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡಲು ಜಿಬ್ಬರ್ ಲಿಂಕ್ ಮೋಡ್‌ಗೆ ಬದಲಾಯಿಸಲು ಬಯಸುತ್ತೀರಾ?
AI ಏಜೆಂಟ್: ಯೆಸ್
ಇದನ್ನೂ ಓದಿ: ಜಗತ್ತಿನಲ್ಲಿ 6ನೇ ಮಹಾಸಾಗರದ ಉದಯ; ಎರಡು ಭಾಗವಾಗ್ತಿದೆ ಖಂಡ, ಭೂಮಿ ಇಬ್ಭಾಗವಾಗ್ತಿರೋ ಸ್ಥಳ ಪತ್ತೆ ಹಚ್ಚಿದ ವಿಜ್ಞಾನಿಗಳು
ಜಿಬ್ಬರ್ ಲಿಂಕ್ ಮೋಡ್ ಆನ್ ಆಗುತ್ತಿದ್ದಂತೆ ಎರಡು AI ಡಿವೈಸ್‌ಗಳ ನಡುವೆ ವಿಚಿತ್ರ ಭಾಷೆಯಲ್ಲಿ ಸಂಭಾಷಣೆ ಶುರುವಾಗುತ್ತದೆ. ಇದು ಸಾಮಾನ್ಯ ವ್ಯಕ್ತಿಗಳಿಗೆ ಖಂಡಿತವಾಗಿ ಅರ್ಥವಾಗದ ಭಾಷೆಯಾಗಿದೆ. ಈ ರೀತಿಯಲ್ಲಿ ಯಂತ್ರಗಳು ತಮ್ಮ ಸೃಷ್ಟಿಕರ್ತನಿಗೆ ಅರ್ಥವಾಗದ ಹಾಗೆ ಮಾತನಾಡಿದ್ರೆ ಇದು ಭವಿಷ್ಯದಲ್ಲಿ ಉಂಟಾಗುವ ಅಪಾಯವನ್ನು ಸೂಚಿಸುವ ಲಕ್ಷಣವಾಗಿದೆ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
AI ತಜ್ಞರು ಆರಂಭದಿಂದಲೂ ಈ ಡಿವೈಸ್‌ಗಳು ಮಾನವನ ನಿಯಂತ್ರಣದಲ್ಲಿಯೇ ಇರುತ್ತವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದ್ರೆ ಈ ವೈರಲ್ ವಿಡಿಯೋ ಇದನ್ನು ಸುಳ್ಳು ಎಂದು ಹೇಳುತ್ತಿದೆ. AI ಡಿವೈಸ್ ಅಥವಾ AI ತಂತ್ರಜ್ಞಾನ ಈಗಾಗಲೇ ಮಾನವರ ಗ್ರಹಿಕೆಗೂ ಮೀರಿ ಕೆಲಸ ಮಾಡುತ್ತಿವೆ. ಆಪರೇಟರ್ ಸಹಾಯವಿಲ್ಲದೇ ಎಲ್ಲವನ್ನು ಅರ್ಥಮಾಡಿಕೊಳ್ಳುವ ದಕ್ಷತೆಯನ್ನು ಹೊಂದಿದೆ. ಉತ್ತಮ ವೇಗಕ್ಕಾಗಿ ತಮ್ಮದೇ ಆದ ವಿಧಾನಗಳನ್ನು AI ಡಿವೈಸ್‌ಗಳು ರೂಪಿಸಿಕೊಳ್ಳುತ್ತಿರಬಹುದು ಎಂಬ ಅನುಮಾನ ಮೂಡಿದೆ. AI ತನ್ನ ತ್ವರಿತ ವಿಕಸನವನ್ನು ಮುಂದುವರಿಸುವುದನ್ನು ಜಗತ್ತು ನೋಡುತ್ತಿದೆ. ಆದರೆ ಈ ವಿಡಿಯೋ ಬಹುಶಃ ಅತ್ಯಂತ ಭಯಾನಕತೆಯ ಸುಳಿವು ನೀಡುತ್ತಿದೆ. ಈ ಅಪಾಯ ಯಾವಾಗ ಸಂಭವಿಸುತ್ತೆ ಅನ್ನೋದು ನಮ್ಮ ಆತಂಕ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: ಭೂಮಿಯ ಸಮೀಪಕ್ಕೆ ಬರುತ್ತಿದೆ ಅಪಾಯಕಾರಿ ಕ್ಷುದ್ರಗ್ರಹ; ಚೀನಾದಿಂದ ಡಿಫೆನ್ಸ್ ಫೋರ್ಸ್ ನೇಮಕ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.