ಭೌತಶಾಸ್ತ್ರ ಬದಲಿಸಲಿದ್ದ ಐನ್‍ಸ್ಟೈನ್ ಪತ್ನಿ: ನಮಗೆ ಗೊತ್ತಿರದ ಮಿಲೆವಾ ಮಾರಿಕ್!

Published : Mar 19, 2019, 02:46 PM ISTUpdated : Mar 19, 2019, 02:51 PM IST
ಭೌತಶಾಸ್ತ್ರ ಬದಲಿಸಲಿದ್ದ ಐನ್‍ಸ್ಟೈನ್ ಪತ್ನಿ: ನಮಗೆ ಗೊತ್ತಿರದ ಮಿಲೆವಾ ಮಾರಿಕ್!

ಸಾರಾಂಶ

ನಮಗೆ ಗೊತ್ತಿರದ ಅಲ್ಬರ್ಟ್ ಐನ್‍ಸ್ಟೈನ್ ಪತ್ನಿ ಮಿಲೆವಾ ಮಾರಿಕ್| ಭೌತಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಮಿಲೆವಾ ಮಾರಿಕ್| ಐನ್‍ಸ್ಟೈನ್ 'Theory of Relativity' ಸಿದ್ಧಾಂತ ಮಂಡಿಸಲು ಮಿಲೆವಾ ನೆರವು| "Einstein's Wife: The Real Story of Mileva Einstein-Maric," ಪುಸ್ತಕದಲ್ಲಿವೆ ಕುತೂಹಲಕಾರಿ ಅಂಶ| ಸಂಸಾರದ ಜವಾಬ್ದಾರಿಯಿಂದಾಗಿ ಭೌತಶಾಸ್ತ್ರದಿಂದ ದೂರ ಸರಿದ ಮಿಲೆವಾ|

'ನಿಮ್ಮನ್ನು ಪತ್ನಿಯಾಗಿ ಸ್ವೀಕರಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನೀವು ನನ್ನ ಅರ್ಧಾಂಗಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ..' 1900ರಲ್ಲಿ ವಿಶ್ವ ವಿಖ್ಯಾತ ಭೌತಶಾಸ್ತ್ರಜ್ಞ, ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್ ತಮ್ಮ ಭಾವಿ ಪತ್ನಿ ಮಿಲೆವಾ ಮಾರಿಕ್ ಅವರಿಗೆ ಬರೆದ ಪತ್ರವಿದು.

ಆದರೆ ಬಹುತೇಕರಿಗೆ ಪರಿಚಯವಿರದ ಐನ್‍ಸ್ಟೈನ್ ಪತ್ನಿ ಮಿಲೆವಾ ಮಾರಿಕ್ ಕುರಿತು ಅನೇಕ ಕುತೂಹಲಕಾರಿ ಸಂಗತಿಗಳು ಒಂದೊಂದಾಗಿ ಹೊರ ಬೀಳುತ್ತಿವೆ.

ಅಸಲಿಗೆ ಮಿಲೆವಾ ಮಾರಿಕ್ ಕೂಡ ಭೌತಶಾಸ್ತ್ರಜ್ಞೆಯಾಗಿದ್ದು, "Einstein's Wife: The Real Story of Mileva Einstein-Maric," ಎಂಬ ಪುಸ್ತಕದಲ್ಲಿ ಮಿಲೆವಾ ಕುರಿತು ಹಲವು ಕುತೂಹಲಕಾರಿ ಅಂಶಗಳಿವೆ.

ಐನ್‍ಸ್ಟೈನ್ ಅವರ ಪ್ರಸಿದ್ಧ 'Theory of Relativity' ಸಿದ್ಧಾಂತ ಮಂಡಿಸುವಲ್ಲಿ ಪತ್ನಿ ಮಿಲೆವಾ ಕೂಡ ನೆರವಾಗಿದ್ದರು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಭೌತಶಾಸ್ತ್ರದ ಕುರಿತು ಐನ್‍ಸ್ಟೈನ್ ಅವರಿಗಿಂತ ಆಳವಾದ ಜ್ಞಾನ ಹೊಂದಿದ್ದ ಮಿಲೆವಾ, 'Theory of Relativity' ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ಡೇವಿಡ್ ಸಿ ಕ್ಯಾಸಿಡಿ, ರುತ್ ಲೆವಿನ್ ಮತ್ತು ಅಲೆನ್ ಇಸ್ಟರ್ಸನ್ ಅವರಂತ ಲೇಖಕರು ಮಿಲೆವಾ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರವೇಶ ವಿರೋಧಿಸುತ್ತಿದ್ದ ಕಾಲದಲ್ಲೇ ಮಿಲೆವಾ ಭೌತಶಾಸ್ತ್ರದಲ್ಲಿ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡಿದ್ದರು ಎಂದು ಹೇಳಿದ್ದಾರೆ.

ಐನ್‍ಸ್ಟೈನ್ ಅವರೊಂದಿಗಿನ ಮದುವೆ ಬಳಿಕ ಸಂಸಾರದ ಜವಾಬ್ದಾರಿ ಹೊತ್ತ ಮಿಲೆವಾ, ಪತಿ ಮತ್ತು ಮಕ್ಕಳ ಆರೈಕೆಯಲ್ಲಿ ಭೌತಶಾಸ್ತ್ರದಿಂದ ದೂರ ಸರಿದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ