ಚಂದ್ರ, ಭೂಮಿಯ ಪಾಲಿಗೆ ಏಕಮಾತ್ರ ನೈಸರ್ಗಿಕ ಉಪಗ್ರಹ. ಆದರೆ ಇದೀಗ ಚಂದ್ರನಿಗೊಂದು ಸಂಗಾತಿ ಸಿಕ್ಕಿದೆ. ಫೆ.15ರ ರಾತ್ರಿ ಸುಮಾರು 1.9 ರಿಂದ 3.5 ಮೀಟರ್ ಸುತ್ತಳತೆ ಇರಬಹುದಾದ ಭೂಮಿಯ 2ನೇ ಚಂದ್ರನನ್ನು ಅಮೆರಿಕದ ಖಗೋಳ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.
ವಾಷಿಂಗ್ಟನ್ (ಫೆ. 29): ಚಂದ್ರ, ಭೂಮಿಯ ಪಾಲಿಗೆ ಏಕಮಾತ್ರ ನೈಸರ್ಗಿಕ ಉಪಗ್ರಹ. ಆದರೆ ಇದೀಗ ಚಂದ್ರನಿಗೊಂದು ಸಂಗಾತಿ ಸಿಕ್ಕಿದೆ. ಫೆ.15 ರ ರಾತ್ರಿ ಸುಮಾರು 1.9 ರಿಂದ 3.5 ಮೀಟರ್ ಸುತ್ತಳತೆ ಇರಬಹುದಾದ ಭೂಮಿಯ 2ನೇ ಚಂದ್ರನನ್ನು ಅಮೆರಿಕದ ಖಗೋಳ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.
ಇದೀಗ ಪತ್ತೆಹಚ್ಚಲಾಗಿರುವ ಉಪಗ್ರಹವು ಕ್ಷುದ್ರಗ್ರಹವಾಗಿದ್ದು, ಭೂಮಿಯ ಗುರುತ್ವ ಬಲಕ್ಕೆ ಸಿಕ್ಕಿದ್ದು, ಅದು ಭೂಮಿಯನ್ನು ಸುತ್ತುತ್ತಿರುವ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
undefined
ಸಾಮಾನ್ಯವಾಗಿ ಕ್ಷುದ್ರಗ್ರಹಗಳು ಇತರ ಗ್ರಹಕಾಯಗಳಂತೆ ಸೂರ್ಯನನ್ನು ಸುತ್ತುತ್ತವೆ. ಆದರೆ ಈ ಕ್ಷುದ್ರಗ್ರಹ ಭೂಮಿಯ ಗುರುತ್ವ ಬಲದ ಪರೀಧಿಯೊಳಗೆ ಬಂದಿರುವುದು ಅಪರೂಪದ ಖಗೋಳ ವಿದ್ಯಮಾನ ಎನ್ನುತ್ತಾರೆ ವಿಜ್ಞಾನಿಗಳು.
ನೂತನವಾಗಿ ಪತ್ತೆಯಾಗಿರುವ ಭೂಮಿಯ ಮತ್ತೊಂದು ನೈಸರ್ಗಿಕ ಉಪಗ್ರಹವಾದ 2020 ಸಿಡಿ-3 ಎಂಬ ಮಿನಿ ಚಂದ್ರನು ಸಿ-ಪ್ರಕಾರದ ಕ್ಷುದ್ರ ಗ್ರಹವಾಗಿರಬಹುದು ಎಂದು ವೈರ್ಜೊಕಾಸ್ ಎಂಬ ಸಂಶೋಧಕ ಟ್ವೀಟ್ ಮಾಡಿದ್ದಾರೆ. ಆದರೆ ಇದು ಭೂಮಿಯ ತಾತ್ಕಾಲಿಕ ಉಪಗ್ರಹವಾಗಿದೆ. ಏಕೆಂದರೆ ಅದು ಇರುವ ಕಕ್ಷೆ ಸ್ಥಿರವಾದುದಲ್ಲ. ಹೀಗಾಗಿ ಅದು ಯಾವುದೇ ಸಮಯದಲ್ಲಿ ಭೂಮಿಯ ಗುರುತ್ವ ಬಲದಿಂದ ದೂರ ಹೋಗಬಹುದು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.