ನೌಕೆಯಿಂದ ಹೊರಬಂದ ಸುನೀತಾ ವಿಲಿಯಮ್ಸ್ ತಂಡ, ಆರೋಗ್ಯ ತಪಾಸಣೆ ಪ್ರಕ್ರಿಯೆ ಶುರು

Published : Mar 19, 2025, 04:30 AM ISTUpdated : Mar 19, 2025, 04:31 AM IST
ನೌಕೆಯಿಂದ ಹೊರಬಂದ ಸುನೀತಾ ವಿಲಿಯಮ್ಸ್ ತಂಡ, ಆರೋಗ್ಯ ತಪಾಸಣೆ ಪ್ರಕ್ರಿಯೆ ಶುರು

ಸಾರಾಂಶ

ಬರೋಬ್ಬರಿ 9 ತಿಂಗಳಿಂದ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಇದೀಗ ಸುರಕ್ಷಿತವಾಗಿ ಭೂಮಿಗೆ ವಾಪಾಸ್ ಆಗಿದ್ದಾರೆ. ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ಸುರಕ್ಷಿತವಾಗಿ ಫ್ಲೋರಿಡಾ ಸಮುದ್ರದಲ್ಲಿ ಲ್ಯಾಂಡ್ ಆಗಿದೆ. ಇದೀಗ ಈ ನೌಕೆಯಿಂದ ಸುನೀತ್ ವಿಲಿಯಮ್ಸ್ ತಂಡ ಹೊರಬಂದಿದೆ. ಮುಂದಿನ ಪ್ರಕ್ರಿಯೆ ಏನು?

ಫ್ಲೋರಿಡಾ(ಮಾ.19) ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಹಾಗೂ ತಂಡ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಫ್ಲೋರಿಡಾ ಸಮುದ್ರದಲ್ಲಿ ಸ್ಪೇಸ್ ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ನೌಕೆ ಲ್ಯಾಂಡ್ ಆಗಿದೆ. ಸಮುದ್ರಕ್ಕಿಳಿದ ನೌಕೆಯನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಸಿಬ್ಬಂದಿಗಳ ತಂಡ ಹಡಗಿನ ಮೂಲಕ ಮೇಲಕ್ಕೆತ್ತಿದೆ. ಇದೀಗ ಈ ನೌಕೆಯಿಂದ ಸುನೀತಾ ವಿಲಿಯಮ್ಸ್ ಹಾಗೂ ತಂಡ ಹೊರಬಂದಿದೆ. ಗುರುತ್ವಾಕರ್ಷಣ ಬಲವಿಲ್ಲದೆ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಕಳೆದಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್‌ಗೆ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಸಮುದ್ರದಲ್ಲಿ ಸ್ಪೇಸ್‌ಕ್ರಾಫ್ಟ್ ನೌಕೆ ಇಳಿದಿದೆ. ಈ ನೌಕೆಯಲ್ಲಿ ಒಟ್ಟು ನಾಲ್ವರಿದ್ದಾರೆ.  ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್.  ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ನೌಕೆಯ ಹ್ಯಾಚ್ ತೆರೆಯಲಾಗಿದೆ. ಬಳಿಕ ಸಿಬ್ಬಂದಿಗಳ ತಂಡ ನೌಕೆಯ ಒಳ ಪ್ರವೇಶಿಸಿ ಅಗತ್ಯ ವಸ್ತುಗಳನ್ನು ಹೊರತಂದಿದ್ದಾರೆ. ಬಳಿಕ ನಾಲ್ವರು ಗಗನಯಾತ್ರಿಗಳನ್ನು ನೌಕೆಯಿಂದ ಸುರಕ್ಷಿತವಾಗಿ ಹೊರತರಲಾಗಿದೆ.

9 ತಿಂಗಳ ಬಳಿಕ ಭೂಮಿಗಿಳಿದ ಸುನೀತಾ ವಿಲಿಯಮ್ಸ್, ರೋಚಕ ಕ್ಷಣಕ್ಕೆ ಸಾಕ್ಷಿಯಾದ ಫ್ಲೋರಿಡಾ ಸಮುದ್ರ

ಸುದೀರ್ಘ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಯಾವುದೇ ಗುರುತ್ವಾಕರ್ಷಣಾ ಬಲವಿಲ್ಲದೆ ಕಳೆದಿರುವ ಕಾರಣ ಭೂಮಿಗೆ ಆಗಮಿಸಿದಾಗ ಏಕಾಏಕಿ ಗುರುತ್ವಾಕರ್ಷಣಾ ಬಲಕ್ಕೆ ಒಳಪಡುತ್ತಾರೆ. ಹೀಗಾಗಿ ಗಗನಯಾತ್ರಿಗಳಲ್ಲಿ ತಲೆಸುತ್ತು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಗಗನಯಾತ್ರಿಗಳಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ ಪ್ರಕ್ರಿಯೆ ಶುರು ಮಾಡಿದೆ.  

 

 

ಸ್ಟಾರ್‌ಲೈನರ್ ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಕಾರಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಕಾರ್ಯಾಚರಣೆಯ ಅವಧಿಯನ್ನು ವಿಸ್ತರಿಸಬೇಕಾಯಿತು. ಸುದೀರ್ಘ 9 ತಿಂಗಳ ಕಾರ್ಯಾಚರಣೆಯನ್ನು ರೋಮಾಂಚನಕಾರಿಯಾಗಿ ಪೂರ್ಣಗೊಳಿಸಿ ಭೂಮಿಗೆ ಮರಳಿದ್ದಾರೆ. 2024ರ ಜೂನ್ 5ರಂದು ಬೋಯಿಂಗ್‌ನ ಸ್ಟಾರ್‌ಲೈನರ್ ಪ್ರಾಯೋಗಿಕ ನೌಕೆಯಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಐಎಸ್‌ಎಸ್‌ಗೆ ಹಾರಿದರು. ಕೇವಲ ಎಂಟು ದಿನಗಳ ಕಾರ್ಯಾಚರಣೆಯ ಅವಧಿಯಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಸುನಿತಾ ಮತ್ತು ಬುಚ್ ಸ್ಟಾರ್‌ಲೈನರ್‌ನಲ್ಲಿ ಹಿಂತಿರುಗಲು ಸಾಧ್ಯವಾಗಲಿಲ್ಲ. ಬೋಯಿಂಗ್ ಮತ್ತು ನಾಸಾ ಇಬ್ಬರೂ ಇಲ್ಲದೆ ನೌಕೆಯನ್ನು ಇಳಿಸಿದರು. ಅಂತಿಮವಾಗಿ ಸುನಿತಾ ಮತ್ತು ಬುಚ್ ಅವರ ಪ್ರಯಾಣವನ್ನು 2025ರ ಮಾರ್ಚ್‌ಗೆ ಮುಂದೂಡಲಾಯಿತು.

ಬಾಹ್ಯಾಕಾಶದಲ್ಲಿ ಅತೀ ಹೆಚ್ಚು ದಿನ ಕಳೆದಿದ್ದು ಸುನೀತಾ ವಿಲಿಯಮ್ಸ್ ಅಲ್ಲ, ಮತ್ಯಾರು?

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ