ಭೂಮಂಡಲಕ್ಕೆ ಅಪೋಫಿಸ್ ಎಂಬ ಕ್ಷುದ್ರ ಗ್ರಹ ದೊಡ್ಡ ಗ್ರಹ ಹುಟ್ಟಿಸಿದೆ. ಈ ಗ್ರಹ ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆಯಂತೆ. ಒಂದು ವೇಳೆ ಹಾಗೇನಾದ್ರು ಆದ್ರೆ ಇಡೀ ಭೂ ಮಂಡಲ ನಾಶವಾಗುವ ಸಾಧ್ಯತೆ ಇದೆಯಂತೆ. ಈ ಗ್ರಹದ ಕುರಿತು ಇಸ್ರೋ ಅಧ್ಯಕ್ಷ ಎಸ್, ಸೋಮನಾಥ್ ಭಯಾನಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಆ ಕುರಿತ ಒಂದು ವರದಿ ಇಲ್ಲಿದೆ.
ಭೂಮಂಡಲಕ್ಕೆ ಅಪೋಫಿಸ್ ಎಂಬ ಕ್ಷುದ್ರ ಗ್ರಹ ದೊಡ್ಡ ಗ್ರಹ ಹುಟ್ಟಿಸಿದೆ. ಈ ಗ್ರಹ ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆಯಂತೆ. ಒಂದು ವೇಳೆ ಹಾಗೇನಾದ್ರು ಆದ್ರೆ ಇಡೀ ಭೂ ಮಂಡಲ ನಾಶವಾಗುವ ಸಾಧ್ಯತೆ ಇದೆಯಂತೆ. ಈ ಗ್ರಹದ ಕುರಿತು ಇಸ್ರೋ ಅಧ್ಯಕ್ಷ ಎಸ್, ಸೋಮನಾಥ್ ಭಯಾನಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಆ ಕುರಿತ ಒಂದು ವರದಿ ಇಲ್ಲಿದೆ.
ಅಚ್ಚರಿಗಳ ಆಗರ ಸೌರಮಂಡಲ
ಸೌರಮಂಡಲ ಎಂಬುವುದು ಅಚ್ಚರಿಗಳ ಆಗರ. ಅಚ್ಚರಿಗಳನ್ನೇ ಹೊತ್ತು ತೇಲಾಡುತ್ತಿರುವ ಮಂಡಲವಿದು. ಏಲಿಯನ್ನಿಂದ ಹಿಡಿದು ಕ್ಷುದ್ರ ಗ್ರಹಗಳವರೆಗೆ ನೂರಾರು ಅಚ್ಚರಿಗಳನ್ನು ಸೌರಮಂಡಲ ಹೊಂದಿದೆ. ಈಗ ಈ ಅಚ್ಚರಿ ಮಂಡಲದಿಂದ, ಭೂಮಂಡಲಕ್ಕೆ ಆತಂಕವೊಂದು ಶುರುವಾಗಿದೆ. ಭೂ ಮಂಡಲಕ್ಕೆ ಎದುರಾಗಲಿರುವ ಆ ಆತಂಕದ ಕುರಿತು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಎಚ್ಚರಿಸಿದ್ದಾರೆ.
undefined
ಅಪೋಫಿಸ್ ಎಂಬ ಕ್ಷುದ್ರ ಗ್ರಹ ಭೂಮಿಗೆ ಹತ್ತಿರದಲ್ಲೇ ಇದೆ. ಇನ್ನು ಐದು ವರ್ಷಗಳಲ್ಲಿ ಅದು ಭೂಮಿಗೆ ಹತ್ತಿರದಲ್ಲೇ ಹಾದು ಹೋಗಲಿದೆಯಂತೆ. ಹೀಗಾಗಿ ಈ ಅಪೋಫಿಸ್ ಎಂಬ ಕ್ಷುದ್ರ ಗ್ರಹ ಭೂ ಮಂಡಲಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಇಸ್ರೋ ಸಂಸ್ಥೆಗಳು ನಿರಂತರವಾಗಿ ಅದರ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಭೂಮಿಗೆ ಆ ಗ್ರಹದಿಂದ ಅಪಾಯವಿದೆ ಎಂಬ ಸೂಚನೆ ಸಿಕ್ಕರೆ ಅದನ್ನು ತಪ್ಪಿಸುವುದು ಹೇಗೆಂಬ ತಯಾರಿಯನ್ನು ನಾವು ಮಾಡಿಕೊಳ್ಳುವ ಅವಶ್ಯವಿದೆ. ಯಾಕೆಂದ್ರೆ ನಮಗಿರುವುದು ಒಂದೇ ಭೂಮಿ. ಹೀಗಾಗಿ ಆ ಸಂದರ್ಭ ಎದುರಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈ ಜೋಡಿಸಲು ಇಸ್ರೋ ಸಿದ್ಧವಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದಾರೆ.
ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ 'ಜಯಂತಮೂರ್ತಿ' ಹೆಸರಿಟ್ಟ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ
ವಿಜ್ಞಾನಿಗಳು ಅರಿತಿರುವಂತೆ, ಅಪೋಫಿಸ್ ಕ್ಷುದ್ರ ಗ್ರಹ ತನ್ನ ಪಥದಲ್ಲೇ ಸರಿಯಾಗಿ ಸಾಗಿದರೆ ಭೂಮಂಡಲಕ್ಕೆ ಯಾವುದೇ ಅಪಾಯವಿಲ್ಲವೆಂದು ಹೇಳಲಾಗುತ್ತಿದೆ. ಆದ್ರೆ ಆ ದಿನ ತಾನು ಹಾದು ಹೋಗುವ ಪಥದಲ್ಲೇನಾದ್ರು ಕೊಂಚ ಬದಲಾವಣೆಯಾದ್ರೆ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಕ್ಷುದ್ರ ಗ್ರಹದಿಂದ ಭೂ ಮಂಡಲಕ್ಕೆ ಶೇ. 3ರಷ್ಟು ಅಪಾಯವಿರುವುದು ಸಧ್ಯಕ್ಕೆ ವಿಜ್ಞಾನಿಗಳ ಅಧ್ಯಯನದಿಂದ ತಿಳಿದು ಬಂದಿದೆ. ಹೀಗಾಗಿ ಹಾಗೇನಾದ್ರು ಆಗಿದ್ದಾದಲಿ ಅದರಿಂದ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಕೆಲಸ ಮಾಡುವುದು ತುಂಬಾ ಅವಶ್ಯವಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ಈ ಅಪೋಫಿಸ್ ಗ್ರಹವು 2004ರಲ್ಲಿ ಜಗತ್ತಿನ ವಿಜ್ಞಾನಿಗಳ ಕಣ್ಣಿಗೆ ಬಿತ್ತು. ಈ ಕ್ಷುದ್ರ ಗ್ರಹವು ವಿಜ್ಞಾನಿಗಳ ಕಣ್ಣಿಗೆ ಬೀಳುತ್ತಿದ್ದಂತೆ ವಿಜ್ಞಾನ ಲೋಕದಲ್ಲಿ ಕುತೂಹಲ ಹೆಚ್ಚಿತು. ಕುತೂಹಲದಲ್ಲೇ ಇದರ ಬಗ್ಗೆ ತಿಳಿದುಕೊಳ್ಳಲು ವಿಜ್ಞಾನಿಗಳು ನಿಂತರು. ಕೇವಲ ಎರಡು ವರ್ಷಗಳಲ್ಲಿ ಇದರ ಜಾತಕವನ್ನೇ ಅಧ್ಯಯನ ಮಾಡಿದ ವಿಜ್ಞಾನಿಗಳು ಅಂದಿನಿಂದಲೇ ಇದರ ಮೇಲೆ ಹದ್ದಿನ ಕಣ್ಣಿಟ್ಟರು.
1.6 ಕೋಟಿ ಕಿಲೋಮೀಟರ್ ದೂರದ ಲೇಸರ್ ಬೀಮ್ ಸಂದೇಶ ಸ್ವೀಕರಿಸಿದ ಭೂಮಿ!
ಅಮೆರಿಕಾದ ನಾಸಾ ಸಂಸ್ಥೆ ಅಪೋಫಿಸ್ ಎಂಬ ಈ ಭಯಾನಕ ಗ್ರಹದ ಮೇಲೆ ಕಳೆದ ಕೆಲ ವರ್ಷಗಳಿಂದ ಹದ್ದಿನ ಕಣ್ಣನ್ನು ಇಟ್ಟಿದೆ. ಇದರ ಪ್ರತಿ ಕ್ಷಣದ ಚಲನವಲನವನ್ನು ನಾಸಾ ಅತೀ ಸೂಕ್ಷ್ಮವಾಗಿ ನೋಡುತ್ತಿದೆ. ಬೇಕಿದ್ರೆ ನೀವು ಗೂಗಲ್‌ನಲ್ಲಿ ನಾಸಾ ವೆಬ್ಸೈಟ್‌ಗೆ ಹೋಗಿ. ಆ ವೆಬ್ಸೈಟ್‌ನಲ್ಲಿ ಅಪೋಫಿಸ್ ಎಂದು ಸರ್ಚ್ ಕೊಡಿ. ಆಗ ಅಮೆರಿಕಾದ ನಾಸಾ ಸಂಸ್ಥೆ ಅಪೋಫಿಸ್ ಕ್ಷುದ್ರ ಗ್ರಹವನ್ನು ಹೇಗೆ ಹಿಂಬಾಲಿಸುತ್ತಿದೆ ಅನ್ನೋದು ನಿಮಗೆ ಗೊತ್ತಾಗುತ್ತೆ.
ಹಾಗೆನೇ ಮುಂದಿನ ದಿನಗಳಲ್ಲಿ ಅಪೋಫಿಸ್ ಕ್ಷುದ್ರ ಗ್ರಹದಿಂದ ಮುಂದಿನ ದಿನಗಳಲ್ಲಿ ಭೂಮಂಡಲಕ್ಕೆ ಎದುರಾಗಬಹುದಾದ ಅಪಾಯಗಳಿಂದ ಪಾರಾಗಲು ನಾಸಾ ಸಂಸ್ಥೆ ಈಗಾಗಲೇ ಅಪೋಫಿಸ್ ಕ್ಷುದ್ರ ಗ್ರಹದ ವಿರುದ್ಧ ಕಾರ್ಯಾಚರಣೆಯನ್ನು ಸದ್ಯದಲ್ಲೇ ಆರಂಭಿಸಲಿದೆ ಎಂದು ನಾಸಾ ಘೋಷಣೆ ಮಾಡಿಕೊಂಡಿದೆ.
ಹಾಗೆನೇ ಮೊನ್ನೆ ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರು ಹೇಳಿರುವಂತೆ ಭಾರತೀಯ ವಿಜ್ಞಾನ ಸಂಸ್ಥೆ ಸಹ ಈಗಾಗಲೇ ಈ ಅಪಾಯಕಾರಿ ಗ್ರಹದ ಮೇಲೆ ಕಣ್ಣಿಟ್ಟಿದೆಯಂತೆ. ಇದರ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆಯಂತೆ. ಹಾಗೆನೇ ಮುಂದಿನ ದಿನಗಳಲ್ಲಿ ಇಸ್ರೋ ಸಹ ಈ ಗ್ರಹದಿಂದ ಎದುರಾಗಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ. ನಾಸಾ ಮತ್ತು ಇಸ್ರೋದಂತೆ ಯುರೋಪ್‌ನ ಇನ್ನು ಕೆಲ ಬಾಹ್ಯಾಕಾಶ ಸಂಸ್ಥೆಗಳು ಸಹ ಅಪಾಯಕಾರಿ ಕ್ಷುದ್ರ ಗ್ರಹದ ಮೇಲೆ ಕಣ್ಣಿಟ್ಟಿವೆ.