ಜಗತ್ತಿನಲ್ಲಿ 6ನೇ ಮಹಾಸಾಗರದ ಉದಯ; ಎರಡು ಭಾಗವಾಗ್ತಿದೆ ಖಂಡ, ಭೂಮಿ ಇಬ್ಭಾಗವಾಗ್ತಿರೋ ಸ್ಥಳ ಪತ್ತೆ ಹಚ್ಚಿದ ವಿಜ್ಞಾನಿಗಳು

Mahmad Rafik   | AFP
Published : Feb 17, 2025, 03:37 PM ISTUpdated : Feb 17, 2025, 03:38 PM IST
ಜಗತ್ತಿನಲ್ಲಿ 6ನೇ ಮಹಾಸಾಗರದ ಉದಯ; ಎರಡು ಭಾಗವಾಗ್ತಿದೆ ಖಂಡ, ಭೂಮಿ ಇಬ್ಭಾಗವಾಗ್ತಿರೋ ಸ್ಥಳ ಪತ್ತೆ ಹಚ್ಚಿದ ವಿಜ್ಞಾನಿಗಳು

ಸಾರಾಂಶ

world sixth ocean: ಖಂಡದಲ್ಲಿ ಬೆಳೆಯುತ್ತಿರುವ ಬಿರುಕು ಹೊಸ ಮಹಾಸಾಗರದ ರಚನೆಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಈ ಬಿರುಕು ಈ ಖಂಡವನ್ನು ಎರಡು ಭಾಗಗಳಾಗಿ ವಿಭಜಿಸುವ ಸಾಧ್ಯತೆಯಿದೆ.

ಕೇಪ್‌ಟೌನ್: ಭೂವಿಜ್ಞಾನಿಗಳು ಜಗತ್ತಿನಲ್ಲಿ ರೂಪುಗೊಳ್ಳುತ್ತಿರುವ 6ನೇ ಮಹಾಸಾಗರದ ಸ್ಥಳವನ್ನು ಪತ್ತೆ ಮಾಡಿದ್ದಾರೆ. ಈ ಭಾಗದಲ್ಲಿ ಮೂಡಿರುವ ಮಹಾ ಬಿರುಕು ಆಫ್ರಿಕಾ ಖಂಡವನ್ನೇ ಎರಡು ಭಾಗ ಮಾಡಲಿದೆ ಎಂದು ವಿಜ್ಞಾನಿಗಳು ಅಚ್ಚರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಭೂಮಿಯ ಶೇ.71ರಷ್ಟು ಭಾಗವನ್ನು ನೀರು ಆವರಿಸಿಕೊಂಡಿದೆ. ಭೂಮಿ ಮೇಲೆ ಸದ್ಯ 5 ಮಹಾಸಾಗರಗಳಿವೆ. ಇದೀಗ ಮತ್ತೊಂದು ಮಹಾಸಾಗರ ಉದ್ಭವವಾಗುತ್ತಿದೆ. ಹೊಸ ಮಹಾಸಾಗರದ ರಚನೆಗೆ ಆಫ್ರಿಕಾ ಖಂಡ ಸಾಕ್ಷಿಯಾಗಲಿದ್ದು, ಇದಕ್ಕೆ ಕಾರಣ ಇಲ್ಲಿಯ  ಅಪರೂಪದ ಭೂವೈಜ್ಞಾನಿಕ ವಿದ್ಯಮಾನ ಮತ್ತು ವೈವಿದ್ಯಮಯ ಪ್ರಾಕೃತಿಕ ಭೂದೃಶ್ಯ ಎನ್ನಲಾಗಿದೆ. ಆಫ್ರಿಕಾ ಖಂಡ (ತ್ರಿಕೋನ ಆಕಾರ) ಪರ್ಯಾಯ ದ್ವೀಪದ ಭೂ ಸನ್ನಿವೇಶಗಳನ್ನು ಹೊಂದಿದೆ. 

ಟೈಮ್ ಆಫ್ ಇಂಡಿಯಾ ವರದಿ ಪ್ರಕಾರ, ಆಫ್ರಿಕಾದ ತ್ರಿಕೋನ ಆಕಾರ ಮೂರು ನುಬಿಯನ್, ಸೊಮಾಲಿ ಮತ್ತು ಅರೇಬಿಯನ್  ಟೆಕ್ಟೋನಿಕ್ ಪ್ಲೇಟ್‌ಗಳನ್ನು ಹೊಂದಿದೆ. ಈ ಮೂರು ಟೆಕ್ಟೋನಿಕ್ ಪ್ಲೇಟ್‌ ಸಂಧಿಸುತ್ತವೆ. ಈ ತ್ರಿಕೋನ ಆಕಾರದ ಪ್ರದೇಶ ಪೂರ್ವ ಆಫ್ರಿಕಾದವರೆಗೂ ವ್ಯಾಪಿಸಿದ್ದು, ಈ ಭಾಗದಲ್ಲಿ ಉಂಟಾಗುತ್ತಿರುವ ಬಿರುಕು ಪ್ರಕ್ರಿಯೆ ಲಕ್ಷಾಂತರ ವರ್ಷಗಳಿಂದ ನಡೆದುಕೊಂಡು ಬಂದಿದೆ. ಥಿಯೋಪಿಯನ್ ಮರುಭೂಮಿಯಲ್ಲಿ ಉಂಟಾದ 35 ಮೈಲಿ ಉದ್ದದ ಬಿರುಕು 2005ರಲ್ಲಿ ಕಂಡು ಬಂದಿತ್ತು. ಈ ಬಿರುಕು ಆಫ್ರಿಕಾ ಖಂಡವನ್ನು ವಿಭಜನೆ ಮಾಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಈ ಬಿರುಕು ಸೊಮಾಲಿ ಪ್ಲೇಟ್ ನುಬಿಯನ್ ಪ್ಲೇಟ್‌ನಿಂದ ದೂರ ಮಾಡುತ್ತದೆ. ಇಲ್ಲಿ ಭೂಮಿ ಪದರು ಹಿಗ್ಗುವಿಕೆಯಿದ ಬೇರ್ಪಡುವಿಕೆ ಆಗುತ್ತಿದೆ. 5 ರಿಂದ 10 ಮಿಲಿಯನ್ ವರ್ಷಗಳಲ್ಲಿ ಟೆಕ್ಟೋನಿಕ್ಸ್ ಆಫ್ರಿಕನ್ ಖಂಡವನ್ನು ಎರಡು ಭಾಗಗಳಾಗಿ ವಿಭಜಿಸಲಿದೆ ಎಂದು ಭೂವಿಜ್ಞಾನಿಗಳು ಅಂದಾಜಿಸಿದ್ದಾರೆ. ಈಗ ಕಾಣಿಸಿಕೊಂಡಿರುವ ಬಿರುಕಿನಿಂದಲೇ ಮಹಾಸಾಗರ ಅಥವಾ ಜಲಾನಯನ ಪ್ರದೇಶದ ರಚನೆಗೆ ಕಾರಣವಾಗಬಹುದು ಎಂದು ಅ ಹೊರಬರಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: 2024 ವೈಆರ್ 4: ಭೂಮಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಳ ಎಂದ ನಾಸಾ!

ಈ ಹೊಸ ಜಲ ಸಂಗ್ರಹ ಅಥವಾ ಮಹಾಸಾಗರ ಆಫ್ರಿಕಾದ ತ್ರಿಕೋನ ಪ್ರದೇಶದ ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿ ಮತ್ತು ಪೂರ್ವ ಆಫ್ರಿಕಾದ ಬಿರುಕು ಕಣಿವೆಯಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ. ಈ ಪ್ರವಾಹದಿಂದ ಪೂರ್ವ ಆಫ್ರಿಕಾ ಹೊಸ ಅಥವಾ ಪ್ರತ್ಯೇಕ ಖಂಡವಾಗಿ ರಚನೆಯಾಗಲಿದೆ. ಹೊಸ ಸಾಗರದ ರಚನೆಯು  ಸಂಕೀರ್ಣ ಮತ್ತು ದೀರ್ಘ ಪ್ರಕ್ರಿಯೆಯಾಗಿದ್ದು, ಭೂಖಂಡದ ವಿಭಜನೆಯಿಂದ ಹಿಡಿದು ಸಾಗರ ಮಧ್ಯದ ಬೆಳವಣಿಗೆಯವರೆಗೆ ಬಿರುಕು ಬಿಡುವಿಕೆಯ ವಿವಿಧ ಹಂತಗಳನ್ನು ಒಳಗೊಂಡಿದೆ. ಈ ಹೊಸ ಸಾಗರದ ಉದ್ಭವ ಮತ್ತು ಅದರಿಂದಾಗುವ ಮಹಾಪ್ರವಾಹ ಭೂಮಿಯ ರಚನೆಯಲ್ಲಾಗುವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹೊಸ ಭೂಭಾಗದ ರಚನೆ ಅಥವಾ ಇಬ್ಭಾಗ ಹೊಸತನಕ್ಕೆ ಕಾರಣವಾಗಲಿದೆ. ಹೊಸ ಸಾಗರದ ರಚನೆ ಬೆರಳಣಿಕೆಯ ವರ್ಷಗಳಲ್ಲಿ ಆಗದು. ಇದಕ್ಕಾಗಿ ಲಕ್ಷಾಂತರ ವರ್ಷಗಳು ಬೇಕಾಗುತ್ತದೆ.

ಇದನ್ನೂ ಓದಿ: ಭೂಮಿಯ ಸಮೀಪಕ್ಕೆ ಬರುತ್ತಿದೆ ಅಪಾಯಕಾರಿ ಕ್ಷುದ್ರಗ್ರಹ; ಚೀನಾದಿಂದ ಡಿಫೆನ್ಸ್ ಫೋರ್ಸ್ ನೇಮಕ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ