ನಮ್ಮ ಸೌರಮಂಡಲದಲ್ಲಿ ಭೂಮಿ, ಸೂರ್ಯನಷ್ಟೇ ದೊಡ್ಡದಾಗಿ ಬೃಹದಾಕಾರವಾಗಿ ಇದ್ದಿದ್ದರೆ ಏನಾಗುತ್ತಿತ್ತು? ಬಹುಶಃ ಇಂಥದ್ದೊಂದು ಕುತೂಹಲ ನಿಮ್ಮಲ್ಲೂ ಹುಟ್ಟಿರಬಹುದು. ಹಾಗೇನಾದರೂ ಭೂಮಿ ಹಾಗೂ ಸೂರ್ಯ ಒಂದೇ ಗಾತ್ರದಲ್ಲಿ ಇದ್ದಿದ್ದರೆ ಏನಾಗುತ್ತಿತ್ತು ಅನ್ನೋದರ ಪುಟ್ಟ ವಿವರ ಇಲ್ಲಿದೆ.
ಬೆಂಗಳೂರು (ಸೆ.16): ಸೂರ್ಯನ ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತ ಆದಿತ್ಯ ಎಲ್1 ನೌಕೆಯನ್ನು ಸೂರ್ಯ ಹಾಗೂ ಭೂಮಿಯ ನಡುವಿನ ಲಾಂಗ್ರೆಜ್ ಪಾಯಿಂಟ್‌ಗೆ ಕಳಿಸುತ್ತಿದೆ. ಆದರೆ, ನಮಗಿಂತ 15 ಕೋಟಿ ಕಿಲೋಮೀಟರ್ ದೂರದಲ್ಲಿ ಸೂರ್ಯನಿದ್ದಾನೆ. ಸೂರ್ಯ ಎಷ್ಟು ದೊಡ್ಡದಾಗಿದ್ದಾನೆ ಎನ್ನುವ ಸಣ್ಣ ಅರಿವು ಇಲ್ಲಿ ನೀಡುತ್ತೇವೆ. ಅಂದಾಜು 13 ಲಕ್ಷ ಭೂಮಿಯನ್ನು ಒಟ್ಟುಗೂಡಿಸಿದರೆ, ಒಬ್ಬ ಸೂರ್ಯನಾಗುತ್ತಾನೆ. ನಮ್ಮಿಂದ 15 ಕೋಟಿ ಕಿಲೋಮೀಟರ್ ದೂರದಲ್ಲಿಯೇ ಸೂರ್ಯ ಅಷ್ಟು ದೊಡ್ಡದಾಗಿ ಕಾಣುತ್ತಾನೆ ಎಂದಾಗಲೇ ನೀವು ಸೂರ್ಯ ಎಷ್ಟು ದೊಡ್ಡ ನಕ್ಷತ್ರ ಎನ್ನುವುದನ್ನು ಅಂದಾಜು ಮಾಡಿಕೊಳ್ಳಬೇಕು. ನಮ್ಮ ಸೌರಮಂಡಲದಲ್ಲಿ ಸೂರ್ಯನಷ್ಟು ದೊಡ್ಡ ಆಕಾಶಕಾಯ ಇನ್ನೊಂದಿಲ್ಲ. ಸೂರ್ಯ ಬಿಟ್ಟರೆ ಅತೀದೊಡ್ಡ ಗ್ರಹ ಅಂತಿದ್ದರೆ ಅದು ಗುರು ಗ್ರಹ. ಸೌರಮಂಡಲದಲ್ಲಿ ನಮ್ಮ ಭೂಮಿ ಕೂಡ ಸೂರ್ಯನಷ್ಟೇ ದೊಡ್ಡದಾಗಿ ಬೃಹದಾಕಾರವಾಗಿ ಇದ್ದಿದ್ದರೆ ಏನಾಗುತ್ತಿತ್ತು? ಎನ್ನುವ ಪ್ರಶ್ನೆ ನಿಮ್ಮಲ್ಲಿ ಹುಟ್ಟಿರಬಹುದು. ಹಾಗೇನಾದರೂ ಭೂಮಿ ಸೂರ್ಯನಷ್ಟೇ ದೊಡ್ಡದಾಗಿದ್ದರೆ, ಏನೆಲ್ಲಾ ವ್ಯತ್ಯಾಸವಾಗುತ್ತಿತ್ತು ಎನ್ನುವ ಸಣ್ಣ ಆಲೋಚನೆಯ ಅಂದಾಜು ಇಲ್ಲಿದೆ.
ಭೂಮಿಯಲ್ಲಿ ಈಗಿರುವ ಎಲ್ಲಾ ಚರಾಚರಗಳನ್ನೂ ಸೂರ್ಯನ ಗಾತ್ರಕ್ಕೆ ವಿಸ್ತರಿಸಲಾಗಿದೆ ಎನ್ನುವುದನ್ನು ಸುಮ್ಮನೆ ಅಂದಾಜಿಸಿಕೊಳ್ಳಿ. ನಮ್ಮ ಎಲ್ಲಾ ಖಂಡಗಳು ವಿಸ್ತರಣೆ ಆಗುತ್ತಿದ್ದವು. ಜನರ ವಾಸಕ್ಕೆ ಇನ್ನಷ್ಟು ಹೆಚ್ಚಿನ ಸ್ಥಳಗಳು ಸಿಗುತ್ತಿದ್ದರೆ, ಕೈಗೆಟುಕುವ ದರದಲ್ಲಿ ಜಾಗ ಸುಲಭವಾಗಿ ಸಿಗುತ್ತಿದ್ದವು. ಆದರೆ, ಈಗ ನಮ್ಮ ಭೂಮಿಯ ಮೇಲಿರುವ ಪ್ರತಿಯೊಂದು ಚರಾಚರಗಳು ಇನ್ನಷ್ಟು ಹೆಚ್ಚಿನ ಜಾಗಕ್ಕೆ ವಿಸ್ತರಣೆ ಆಗುತ್ತಿದ್ದವು. ಇದರ ಅರ್ಥ ಏನೆಂದರೆ, ಸಮುದ್ರಗಳು, ನದಿಗಳು ಹಾಗೂ ಸರೋವರಗಳು ಇನ್ನಷ್ಟು ದೊಡ್ಡ ಜಾಗವನ್ನು ಆವರಿಸಿಕೊಂಡರೂ ಅವುಗಳು ಹೆಚ್ಚೇನೂ ಆಳವಾಗಿ ಇರುತ್ತಿರಲಿಲ್ಲ. ಸೂರ್ಯನಷ್ಟೇ ದೊಡ್ಡದಾಗಿರುವ ಕಾರಣ, ಅತಿಯಾದ ಬಿಸಿಲಿನಿಂದ ಎಲ್ಲವೂ ಆವಿಯಾಗಿ ದಿನಕಳೆದಂತೆ ಇಂಗುತ್ತಿದ್ದವು. ಸಮುದ್ರಜೀವಿಗಳು ಸಾಯುತ್ತಿದ್ದವು. ನೀರಿನ ಆಳ ಕಡಿಮೆ ಇದ್ದಷ್ಟು ಸೂರ್ಯನಿಂದ ಹೆಚ್ಚು ಶಾಖ ಪಡೆಯುತ್ತದೆ. ಇದು ಸಮುದ್ರ ಜೀವಿಗಳು ಬದುಕುವ ವಾತಾವರಣ ಆಗುತ್ತಿರಲಿಲ್ಲ.ಬದುಕಲು ತಂಪಾದ ನೀರಿನ ಅಗತ್ಯವಿರುವ ಸಮುದ್ರ ಜೀವಿಗಳಿಗೆ ಇದು ಅಪಾಯವನ್ನುಂಟು ಮಾಡುತ್ತದೆ. ನದಿ ಸರೋವರಗಳಂಥ ಇತರ ಸಣ್ಣ ನೀರಿನ ಮೂಲಗಳು ಒಣಗಲು ಪ್ರಾರಂಭಿಸಿದಾಗ, ಭೂಮಿಯ ಮೇಲಿನ ಮಾನವರು ಹಾಗೂ ವನ್ಯಜೀವಿಗಳು, ತಾಜಾ ನೀರಿಗಾಗಿ ಹೆಚ್ಚು ದೂರ ಪ್ರಯಾಣ ಮಾಡಬೇಕಾಗುತ್ತಿತ್ತು.
ಇನ್ನು ಮಾನವರು ಕೂಡ ಬದುಕೋದು ಕಷ್ಟವಾಗುತ್ತಿತ್ತು. ಲಭ್ಯವಿರುವ ಸೀಮಿತ ಶುದ್ಧ ನೀರಿಗಾಗಿ ಯುದ್ಧಗಳು ನಡೆಯುವುದು ಮಾತ್ರವಲ್ಲ, ಆಹಾರ ಉತ್ಪಾದನೆ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿತ್ತು. ಆಹಾರ ಬೆಳೆ ಬೆಳೆಯಲು ಮತ್ತು ಅವುಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ನಿರ್ದಿಷ್ಟ ಪ್ರಮಾಣದ ಮಣ್ಣಿನ ಅಗತ್ಯವಿದೆ. ನಮ್ಮ ಜಗತ್ತು ಸೂರ್ಯನಷ್ಟು ದೊಡ್ಡದಾಗಿದ್ದರೆ. ನಂತರ, ನೀರಿನಂತೆ, ನಮ್ಮ ಮಣ್ಣನ್ನು ಹೆಚ್ಚು ವಿಶಾಲವಾದ ಜಾಗವನ್ನು ಹರಡಿಕೊಂಡಿರುತ್ತದೆ. ಕಡಿಮೆ ಮಣ್ಣು ಕಡಿಮೆ ಆಹಾರವನ್ನು ಅರ್ಥೈಸುತ್ತದೆ, ಆದರೆ ಆಹಾರದ ಬೇಡಿಕೆಯು ಒಂದೇ ಆಗಿರುತ್ತದೆ.
undefined
ಇನ್ನು ಭೂಮಿ ಸೂರ್ಯನಷ್ಟು ದೊಡ್ಡದಾಗಿದ್ದರೆ, ಅದು ಇಡೀ ಸೌರವ್ಯೂಹಕ್ಕೆ ಅಡ್ಡಿ ಉಂಟು ಮಾಡುತ್ತದೆ. ಸೂರ್ಯನಷ್ಟೇ ಬಲವಾದ ದ್ರವ್ಯರಾಶಿ ಭೂಮಿ ಹೊಂದಿರುತ್ತಿದ್ದ ಕಾರಣದಿಂದ ಚಂದ್ರನನ್ನೂ ನಾವು ಕಳೆದುಕೊಳ್ಳುತ್ತಿದ್ದೆವು.
ಚಂದ್ರನ ಮೇಲೆ ನೀರು ಸಾಧ್ಯವಿದೆ, ಚಂದ್ರಯಾನ-1 ಡೇಟಾದಿಂದ ಸಿಕ್ಕಿತು ಮಹತ್ವದ ಮಾಹಿತಿ!
ಅದಲ್ಲದೆ, ಭೂಮಿಯ ಮೇಲಿನ ಗುರುತ್ವಾಕರ್ಷಣೆ ಈಗಿರುವುದಕ್ಕಿಂತ ಶೇ. 28ರಷ್ಟು ಅಧಿಕವಾಗುತ್ತಿತ್ತು. ಇದರಿಂದ ಸೌರಮಂಡಲದಲ್ಲಿ ಮಾತ್ರವಲ್ಲ, ನಮ್ಮ ಬದುಕು ಕೂಡ ದುಸ್ತರವಾಗುತ್ತಿತ್ತು. ಮಾನವನ ತೂಕ ಗಣನೀಯವಾಗಿ ಏರಿಕೆಯಾಗುತ್ತಿತ್ತು. ಇಂದು ಭೂಮಿಯ ಮೇಲೆ ನೀವು 50 ಕೆಜಿ ತೂಕ ಹೊಂದಿದ್ದರೆ, ಸೂರ್ಯನಷ್ಟೇ ದೊಡ್ಡದಾದ ಭೂಮಿಯಲ್ಲಿ ನಿಮ್ಮ ತೂಕ 1400 ಕೆಜಿ ಆಗುತ್ತಿತ್ತು. ಇದರಿಂದ ಮಾನವರಿಗೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಗುರುತ್ವಾಕರ್ಷಣೆ ಹೆಚ್ಚಿರುವ ಕಾರಣ ಸಮಯ ನಿಧಾನಗೊಳ್ಳುತ್ತದೆ. ಭೂಮಿಯ ಮೇಲೆ ಹೆಚ್ಚಿನ ಕಾಲ ಮಾನವರು ಬದುಕಲು ಸಾಧ್ಯವಾಗುತ್ತದೆ. ಆದರೆ, ಭೂಮಿಯ ಮೇಲೆ ಇದ್ದಷ್ಟು ದಿನ ಹಾಸಿಗೆಯಲ್ಲೇ ದಿನ ದೂಡಬೇಕಿರುತ್ತದೆ.
ಚೆನ್ನೈನ ತಾಂಬರಂ ಆಗಸದಲ್ಲಿ ಕಂಡಿದ್ದು ಫ್ಲ್ಯಾಶ್ ಲೈಟೋ ಅಥವಾ ಹಾರುವ ತಟ್ಟೆಗಳೋ? ಶುರುವಾಯ್ತು ಚರ್ಚೆ
ಹೌದು ಭೂಮಿ ಸೂರ್ಯನಷ್ಟೇ ದೊಡ್ಡದಾಗಿದ್ದರೆ, ಇಷ್ಟೆಲ್ಲ ಸಂಭವಿಸುತ್ತದೆ. ಅದೃಷ್ಟಕ್ಕೆ ಹಾಗಾಗೋದು ಸಾಧ್ಯವೇ ಇಲ್ಲ. ಆದರೆ, ನಮ್ಮ ಭೂಮಿ ಚಿಕ್ಕದಂತೂ ಆಗುತ್ತಿದೆ. ಯಾಕೆಂದರೆ, ಪ್ರತಿದಿನ ಎನ್ನುವಂತೆ ಬಾಹ್ಯಾಕಾಶಕ್ಕೆ ನಾವು ನೂರಾರು ಟನ್ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತಿದ್ದೇವೆ.