ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟವಾಗಿ ಬಾಹ್ಯಾಕಾಶವನ್ನು ಆಳಿದ್ದ ರಷ್ಯಾ, ಬರೋಬ್ಬರಿ 47 ವರ್ಷಗಳ ಬಳಿಕ ಚಂದ್ರನ ಪರಿಶೋಧನೆಗಾಗಿ ಕಳಿಸಿದ್ದ ಲೂನಾ 25 ನೌಕೆ ಭಾನುವಾರ ಚಂದ್ರನ ಮೇಲೆ ಕ್ರ್ಯಾಶ್ ಲ್ಯಾಂಡ್ ಆಗಿದೆ. ಇದರ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ರಷ್ಯಾದ ಸೋಲನ್ನು ಸಂಭ್ರಮಿಸಿ ಟ್ವೀಟ್‌ಗಳು ವೈರಲ್ ಆಗಿದೆ.
ಬೆಂಗಳೂರು (ಆ.20): ವಿಜ್ಞಾನದಲ್ಲಿ ಸೋಲು, ವೈಫಲ್ಯ ಅನ್ನೋದೆಲ್ಲ ಇರೋದಿಲ್ಲ. ಆದರೆ, ಯಾವುದೇ ಉದ್ದೇಶಕ್ಕಾಗಿ ಕಳಿಸಿದ ನೌಕೆ ತನ್ನ ನಿಗದಿತ ಗುರಿ ಮುಟ್ಟುವಲ್ಲಿ ಹಿನ್ನಡೆ ಕಂಡಾಗ ಅದನ್ನು ಸೋಲೆಂದೆ ಭೂಮಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಭಾರತ ತನ್ನ ಚಂದ್ರಯಾನ-2 ಯೋಜನೆಯಲ್ಲಿ ಕಂಡಂಥ ಹಿನ್ನಡೆಯನ್ನೇ ರಷ್ಯಾ ತನ್ನ ಬಹುನಿರೀಕ್ಷಿತ ಲೂನಾ 25 ಚಂದ್ರ ಯೋಜನೆಯಲ್ಲಿ ಕಂಡಿದೆ. ಡಿಬೂಸ್ಟಿಂಗ್ ಸಮಯದಲ್ಲಿ ಆದ ವೈಫಲ್ಯದಿಂದಾಗಿ ಲೂನಾ-25 ನೌಕೆ ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರೋಸ್‌ಕಾಸ್ಮೋಸ್ ಅಧಿಕೃತವಾಗಿ ತಿಳಿಸಿದೆ. ಇದರ ಬೆನ್ನಲ್ಲಿಯೇ ರಷ್ಯಾದ ಈ ಹಿನ್ನಡೆಯನ್ನು ಸಂಭ್ರಮಿಸಿದ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಟ್ವೀಟ್‌ಗಳು ವೈರಲ್ ಆಗಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ, ವಿಶ್ವದಲ್ಲಿ ತನ್ನ ಹಠಮಾರಿ ಧೋರಣೆ ಹೊಂದಿರುವ ರಷ್ಯಾಗೆ ಇದು ಆಗಬೇಕಾಗಿದ್ದೇ ಎನ್ನುವ ಅರ್ಥದ ಟ್ವೀಟ್‌ಗಳು ವೈರಲ್ ಆಗಿದೆ. ಆದರೆ, ಬ್ಯಾಹಾಕಾಶ ಯೋಜನೆಯಲ್ಲಿ ಆಗುವ ಸೋಲುಗಳು ಮಾನವರಾಗಿ ಎಂದೂ ಸಂಭ್ರಮ ಪಡುವ ವಿಚಾರವಲ್ಲ. ಯಾಕೆಂದರೆ, ಬಾಹ್ಯಾಕಾಶ ಎನ್ನುವುದು ಯುದ್ಧಭೂಮಿಯಲ್ಲ.. ರಷ್ಯಾದ ಲೂನಾ ಸೋಲು ಸಂಭ್ರಮ ಪಡುವ ವಿಚಾರವಲ್ಲ.
'ರಷ್ಯಾ ಉಕ್ರೇನ್‌ಅನ್ನು ಬಿಡುವವರೆಗೂ ನಾವು ಆ ದೇಶದ ಬಗ್ಗೆ ಸಣ್ಣ ಕನಿಕರವನ್ನೂ ತೋರೋದಿಲ್ಲ' ರಷ್ಯಾದ ಯಾವ ಸಂಭ್ರಮಗಳು ನಮಗೆ ಖುಷಿ ನೀಡೋದಿಲ್ಲ. 8 ವರ್ಷದ ಬಾಲಕಿಯ ಮೇಲೆ ರಷ್ಯಾದ ಸೇನೆ ಬಾಂಬ್ ಹಾಕಿರುವಾಗ ಅವರ ಎಲ್ಲಾ ಸೋಲುಗಳನ್ನು ನಾವು ಸಂಭ್ರಮ ಪಡುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ. 'ರಷ್ಯಾದ ವಿರುದ್ಧ ನಮಗೆ ಯಾವುದೇ ದ್ವೇಷವಿಲ್ಲ. ಆದರೆ, ಭಾರತದೊಂದಿಗೆ ಸ್ಪೇಸ್ ರೇಸ್‌ಗೆ ಇಳಿಯುವ ಪ್ರಯತ್ನವನ್ನು ಅವರು ಮಾಡಬಾರದಾಗಿತ್ತು. ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಸ್ಪರ್ಧೆ ಮಾಡಿ ಅವರು ಸೋತಿದ್ದಾರೆ ಎಂದ ಮೇಲೆ ಸಂಭ್ರಮಿಸುವುದರಲ್ಲಿ ತಪ್ಪೇನಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಇನ್ನೂ ಕೆಲವರು ರಷ್ಯಾದ ಸೋಲನ್ನು ಸಂಭ್ರಮಿಸುತ್ತಿರುವವತಿಗೆ ಟೀಕೆ ಮಾಡುತ್ತಿದ್ದಾರೆ. 'ರಷ್ಯಾದ ಲೂನಾ 25 ಎದುರಿಸಿರುವ ಸವಾಲುಗಳನ್ನು ಜನರು ಆಚರಣೆ ಮಾಡುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಮ್ಮ ಬಾಹ್ಯಾಕಾಶ ಯೋಜನೆಗಳಲ್ಲಿ ರಷ್ಯಾ ಧೃಡವಾಧ ಮಿತ್ರರಾಷ್ಟ್ರವಾಗಿದೆ. ಲೂನಾ ಹಾಗೂ ಚಂದ್ರಯಾನ-3 ಎರಡಕ್ಕೂ ಒಳ್ಳೆಯದಾಗಲಿ ಎಂದು ಹಾರೈಸಬೇಕಿತ್ತು. ಏಕೆಂದರೆ, ಬಾಹ್ಯಾಕಾಶದಲ್ಲಿ ಪ್ರಮುಖವಾಗುವುದು ಒಗ್ಗಟ್ಟು. ವಿಭಜನೆಯಲ್ಲ. ನೀವಿದನ್ನು ಒಪ್ಪಿಕೊಳ್ಳುತ್ತೀರಾ? ಎಂದು ಪ್ರಗತಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಲೂನಾ 25 ಎದುರಿಸಿದ ಸಮಸ್ಯೆಯ ಬಗ್ಗೆ ಭಾರತೀಯರು ಸೇರಿದಂತೆ ಹೆಚ್ಚಿನವರು ಸಂಭ್ರಮಿಸುತ್ತಿದ್ದಾರೆ. ಆದರೆ, ಇಂಥ ಒಂದು ಪ್ರಯತ್ನಗಳಿಗೆ ಸಾಕಷ್ಟು ಪರಿಶ್ರಮ, ಹಣ ಹಾಗೂ ಸಮಯ ಬೇಕಾಗುತ್ತದೆ. ನಿಮಗೆ ನೆನಪಿರಲಿ.. ನಮ್ಮ ಗಗನಯಾನ ಯೋಜನೆಗೆ ಬೆಂಬಲ ನೀಡುತ್ತಿರುವ ಒಂದು ರಾಷ್ಟ್ರವಿದ್ದರೆ ಅದು ರಷ್ಯಾ ಮಾತ್ರ. ಬಾಹ್ಯಾಕಾಶ ಮಾತ್ರವಲ್ಲ ಹಲವು ವಲಯಗಳಲ್ಲಿ ರಷ್ಯಾ ನಮಗೆ ಸಹಕಾರ ನೀಡಿದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
Chandrayaan-3 vs Lunar-25: ಆಮೆ-ಮೊಲದ ಸ್ಪೇಸ್ ರೇಸ್‌ನಲ್ಲಿ ಗೆಲ್ಲೋದ್ ಯಾರು?
'ನಾನೂ ನೋಡುತ್ತಿದ್ದರೆ ಸಾಕಷ್ಟು ಜನರು ರಷ್ಯಾದ ಲೂನಾ 25 ಎದುರಿಸಿರುವ ಕಷ್ಟವನ್ನು ಸಂಭ್ರಮಿಸುತ್ತಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ನಾವೆಲ್ಲರೂ ವಿರೋಧಿಸಬಹುದು. ಭೂಮಿನ ಮೇಲೆ ಅದು ನಮ್ಮ ಪ್ರಜ್ಞೆ ಕೂಡ ಆಗಿರಬಹುದು. ಆದರೆ, ಚಂದ್ರ ಎನ್ನುವುದು ಇಡೀ ಮಾನವಕುಲಕ್ಕೆ ಸಂಬಂಧಪಟ್ಟಿದ್ದು, ಅಲ್ಲಿ ಆಗುವ ಸಣ್ಣ ಅನ್ವೇಷಣೆಯೂ ಇಡೀ ಭೂಮಿಗೆ ಸಂಬಂಧಿಸಿದ್ದು' ಎಂದು ವಿವೇಕ್ ಸಿಂಗ್ ಎನ್ನುವವರು ಬರೆದಿದ್ದಾರೆ.
undefined
ಚಂದ್ರನ ದಕ್ಷಿಣ ಧ್ರುವದಲ್ಲಿಳಿಯಲು ರಷ್ಯಾ ವಿಫಲ: ಚಂದ್ರನ ಅಂಗಣದಲ್ಲಿ ಕ್ರ್ಯಾಶ್ ಆದ ಲೂನಾ25