ಮಂಗಳ ಗ್ರಹ ಮೇಲಿನ ಶಬ್ಧ ರೆಕಾರ್ಡ್ ಮಾಡಿದ್ಯಾ ನಾಸಾದ ಹೊಸ ರೋವರ್?

By Suvarna News  |  First Published Feb 22, 2021, 11:48 AM IST

ಮಂಗಳ ಗ್ರಹದ ಶಬ್ಧ, ದೃಶ್ಯ ಸೆರೆ ಹಿಡಿಯಿತಾ ನಾಸಾದ ಸೂನತ ರೋವರ್| ವೈರಲ್ ಆದ ವಿಡಿಯೋ ಹಿಂದಿನ ಸತ್ಯವೇನು?


ನವದೆಹಲಿ(ಫೆ.22): ಟ್ವಿಟರ್ ಸೇರಿ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಇದು ಮಂಗಳನ ಅಂಗಳ ತಲುಪಿದ ನೂತನ ಪರ್ಸವಿರನ್ಸ್‌(NASA's New Mars Rover)ದ್ದೆಂದು ಹೇಳಲಾಗಿದೆ. ಅಲ್ಲದೇ ಈ ವಿಡಿಯೋದಲ್ಲಿ ರೋವರ್‌ನಲ್ಲಿ ಮಂಗಳ ಗ್ರಹದಲ್ಲಿ ಕೇಳಿ ಬಂದ ಶಬ್ಧವೂ ರೆಕಾರ್ಡ್‌ ಆಗಿದೆ. ಭಾರತದ ಭೂ ವಿಜ್ಞಾನ ಸಚಿವರಿಂದ ಹಿಡಿದು ಮಾಧವನ್ ರಾಜೀವನ್, ಲೇಖಕ ಜೇಮ್ಸ್ ಹಾಲೆಂಡ್ ಹೀಗೆಡ ಅನೇಕ ಗಣ್ಯರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಜೇಮ್ಸ್ ಹಾಲೆಂಡ್ ಎಲ್ಲಾ ಕೆಲಸವನ್ನು 26 ಸೆಕೆಂಡ್‌ಗಳವರೆಗೆ ತಡೆ ಹಿಡಿದು ಅನ್ಯ ಗ್ರಹದಿಂದ ಕೇಳಿ ಬಂದ ಈ ಶಬ್ಧವಿರುವ ಈ ವಿಡಿಯೋವನ್ನು ನೋಡಿದೆ. ಎಂದಿದ್ದಾರೆ. ಆದರೆ ಇದು ನಿಜಾನಾ ಎಂದು ಪರಿಶೀಲಿಸಿದಾಗ ಈ ವಿಡಿಯೋ ನಾಸಾದ ಕ್ಯೂರೋಸಿಟಿ ಮಾರ್ಸ್ ರೋವರ್‌ದ್ದೆಂದು ತಿಳಿದು ಬಂದಿದೆ. ಇದನ್ನು ಬಾಹ್ಯಾಕಾಶ ಸಂಸ್ಥೆಯ ಯೂಟ್ಯೂಬ್ ಪೇಜ್‌ನಲ್ಲಿ 2020ರ ಮಾರ್ಚ್ 4 ರಂದು ಅಪ್ಲೋಡ್ ಮಾಡಲಾಗಿದೆ. 

Mars, fascinating. pic.twitter.com/WSyq8Ojna2

— Anonymous (@YourAnonOne)

Latest Videos

ನಾಸಾದನ್ವಯ ಇದು ಮಂಗಳಗ್ರಹದ ಮೌಂಟ್‌ ಶಾರ್ಪ್ ಶಿಖರದ 360 ಡಿಗ್ರಿಯ್ಲಲಿ ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಈ ಫೂಟೇಜ್ 2019ರ ನವೆಂಬರ್ 24 ರಿಂದ ಡಿಸೆಂಬರ್‌ನೊಳಗೆ ಸೆರೆ ಹಿಡಿಯಲಾಗಿದೆ. ಮಿಷನ್‌ನಲ್ಲಿದ್ದ ತಂಡ 

click me!