Man Faced Shield Bug ಉಡುಪಿಯಲ್ಲಿ ಮಾನವ ಮುಖದ ಹಾರುವ ಕೀಟ ಪತ್ತೆ!

By Suvarna NewsFirst Published Apr 28, 2022, 12:24 PM IST
Highlights

ಮನುಷ್ಯ ಮುಖವನ್ನೇ ಹೋಲುವ, ಮರದಿಂದ ಮರಕ್ಕೆ ಹಾರುವ ಅಪರೂಪದ ಕೀಟವೊಂದು ಉಡುಪಿಯಲ್ಲಿ ಪತ್ತೆಯಾಗಿದೆ. ಈ ಕೀಟವನ್ನು ಬೆನ್ನುಳ್ಳ ಕೀಟ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮ್ಯಾನ್ ಫೇಸ್ಡ್ ಬಗ್ ಎಂದು ಕರೆಯುತ್ತಾರೆ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಎ.28): ಪ್ರಕೃತಿ ದಿನಕ್ಕೊಂದು ವಿಸ್ಮಯವನ್ನು ತೋರಿಸುತ್ತದೆ. ನನಗೆ ಯಾರು ಸಾಟಿ ಇಲ್ಲ ಎಂದು ಮಾನವ ಬೀಗುತ್ತಿದ್ದರೆ, ಮಾನವ ಅಹಂಕಾರ ಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿ ಚಮಕ್ ಕೊಡುತ್ತದೆ! ಇದೀಗ ಮನುಷ್ಯ ಮುಖವನ್ನೇ ಹೋಲುವ, ಮರದಿಂದ ಮರಕ್ಕೆ ಹಾರುವ ಅಪರೂಪದ ಕೀಟವೊಂದು (insect ) ಉಡುಪಿಯಲ್ಲಿ (Udupi) ಪತ್ತೆಯಾಗಿದೆ.

ಒಮ್ಮೆ ನೋಡಿದರೆ ಮತ್ತೊಮ್ಮೆ ಕಣ್ಣುಜ್ಜಿ ನೋಡಬೇಕು ಅನಿಸುವಂತ ರೂಪ. ಈ ಕೀಟವನ್ನು ಬೆನ್ನುಳ್ಳ ಕೀಟ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮ್ಯಾನ್ ಫೇಸ್ಡ್ ಶೀಲ್ಡ್ ಬಗ್ (man-faced shield bug) ಎಂದು ಕರೆಯುತ್ತಾರೆ. ಕಾರ್ಕಳ ಬೈಪಾಸ್ ಬಳಿಯ ತಾಳೆ ತೋಟದಲ್ಲಿ ಈ ಅಪರೂಪದ ಕೀಟ ಕಂಡುಬಂದಿದೆ.

ತಲೆಯ ಮೇಲೊಂದು ಮಕ್ಮಲ್ ಟೋಪಿ, ಕಪ್ಪು ಕಾಡಿಗೆ ಹಚ್ಚಿದಂತಹಾ ಸುಂದರ ಕಣ್ಣುಗಳು, ದೊಡ್ಡ ಮೂಗಿನ ಕೆಳಗೆ ಚಾರ್ಲಿ ಚಾಪ್ಲಿನ್ ಮೀಸೆ. ಒಮ್ಮೆಗೆ ದೂರದಿಂದ ನೋಡಿದರೆ ಹಾರುವ ಮಾನವ ಮುಖದಂತೆ ಕಾಣುತ್ತದೆ.

KEA EXAM PAPER LEAK ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ

ಸಿಡುಕ ಮಾನವ ಮುಖದಂತೆ ಕಾಣುವ  ಈ ಕೀಟವು ಭಾರತ ಸಹಿತ ದಕ್ಷಿಣ ಏಷ್ಯಾ ರಾಷ್ಟ್ರಗಳ ಕರಾವಳಿ ಭಾಗದಲ್ಲಿ (Costal area) ಕಂಡುಬರುತ್ತವೆ. ಕೆಂಪು, ಹಳದಿ, ಕಿತ್ತಳೆ, ಕಂದು ಬಣ್ಣದಲ್ಲಿರುವ ಈ ಕೀಟ ಬೆಳಿಗ್ಗೆ ಸುಮಾರು 7 ಗಂಟೆಯಿಂದ ಎಂಟು ಗಂಟೆಯ ಅವಧಿಯಲ್ಲಿ ಸೂರ್ಯನ ಎಳೆಬಿಸಿಲಿನ ಶಾಖವನ್ನು ಹೀರುತ್ತಾ ಗಿಡದಿಂದ ಗಿಡಕ್ಕೆ ಹಾರುತ್ತದೆ. ಮುಂಜಾನೆಯ ಈ ವಿಹಾರದ ವೇಳೆ ಅಪರೂಪದ ಕೀಟ ತೀರಾ ಅಪರೂಪ ಎಂಬಂತೆ ಕಾಣಸಿಗುತ್ತದೆ.

ಫೆಬ್ರವರಿಯಿಂದ ಮೇ ಅವಧಿಯಲ್ಲಿ ಕಂಡುಬರುವ ಈ ಕೀಟವು ಚಿಗುರು, ಕಾಂಡ, ಹಣ್ಣಿನಿಂದ ರಸವನ್ನು ಹೀರುತ್ತದೆ. ತಾಳೆಗರಿಯಲ್ಲಿ ಸ್ವಚ್ಛಂದ ವಿವರಿಸುವ ಮ್ಯಾನ್ ಫೇಸ್ಡ್ ಶೀಲ್ಡ್ ಬಗ್ ನಿರುಪದ್ರವಿ ಜೀವಿ (Harmless creature).

ಬಿಜೆಪಿ ಸರ್ಕಾರದಿಂದ ಕ್ರೈಸ್ತ ಸಂಸ್ಥೆಗಳ ಟಾರ್ಗೆಟ್: ಬೆಂಗಳೂರು ಬಿಷಪ್ ಆರೋಪ

ಗಾತ್ರದಲ್ಲಿ ಗಂಡು (Male) ಚಿಕ್ಕದಾದರೆ ಹೆಣ್ಣು (Female) ಸ್ವಲ್ಪ ದೊಡ್ಡದು. ಈ ಕೀಟಗಳು ಗುಂಪಲ್ಲಿ ಮೊಟ್ಟೆ ಇಡುತ್ತವೆ 25ರಿಂದ 30 ದಿನವಷ್ಟೇ ಇದರ ಆಯುಷ್ಯ. ತಂಪು ಹವಾಮಾನ (Cold weather) ಇದ್ದರೆ ಇವುಗಳ ಜೀವನ ದೀರ್ಘವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೊಳವೆಯಾಕಾರದಲ್ಲಿ ಇರುವ ಬಾಯಿಯನ್ನು ಮುಚ್ಚಿ ರಸಹೀರುವ ಈ ಕೀಟವನ್ನು ವೈಜ್ಞಾನಿಕವಾಗಿ ಕೆಟ ಕ್ಯಾಂಥನ್ ಇನ್ ಕಾರ್ನೇಟಸ್ (Catacanthus incarnatus) ಎಂದು ಕರೆಯಲಾಗುತ್ತದೆ. ಫೆಂಟಟೋಮಿಡೆ (Pentatomidae) ಜಾತಿಗೆ ಸೇರಿದ್ದು ಮಕ್ಕಳಿಗೆ ಹಾಗೂ ಕೀಟಶಾಸ್ತ್ರರಿಗೆ (Entomology) ಇದರ ಬಗ್ಗೆ ಅಧ್ಯಯನ ಮಾಡುವುದು ಅತ್ಯಂತ ಆಸಕ್ತಿದಾಯಕ ವಿಷಯವಾಗಿದೆ. ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸುವ ತಾಳ್ಮೆ ಇದ್ದವರಿಗೆ ಈ ಅಪರೂಪದ ಕೀಟದ ದರ್ಶನ ಭಾಗ್ಯ ಸಿಗಬಹುದು.

click me!