ಕಲ್ಪನಾ ಚಾವ್ಲಾ ರೀತಿಯಲ್ಲೇ ಸುನೀತಾ ವಿಲಿಯಮ್ಸ್‌ ಸಾವಾಗುತ್ತಿತ್ತು: ಶಾಕಿಂಗ್‌ ಸತ್ಯ ಒಪ್ಪಿಕೊಂಡ NASA

Published : Feb 20, 2026, 06:59 PM IST
Sunita Williams Narrowly Escapes Type A Disaster

ಸಾರಾಂಶ

ಸುನೀತಾ ವಿಲಿಯಮ್ಸ್ ಅವರ ಬೋಯಿಂಗ್ ಬಾಹ್ಯಾಕಾಶ ಯಾನ ವಿಫಲವಾಗಿದ್ದು, ನಾಸಾ ಇದನ್ನು 'ಟೈಪ್ ಎ' ದುರಂತ ಎಂದು ಘೋಷಿಸಿದೆ. ಕೊಲಂಬಿಯಾ ದುರಂತದಂತೆಯೇ ಎಂಜಿನಿಯರಿಂಗ್ ಮತ್ತು ನಾಯಕತ್ವದ ವೈಫಲ್ಯಗಳೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.

ನವದೆಹಲಿ (ಫೆ.20): 10 ದಿನಗಳ ಕಾರ್ಯಾಚರಣೆಯ ನಂತರ ಒಂದು ವರ್ಷ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್ ಅವರು ಟೈಪ್ ಎ ದುರಂತಕ್ಕೆ ಒಳಗಾಗಿದ್ದರು ಎಂದು ನಾಸಾ ಹೇಳಿದೆ. ಬೋಯಿಂಗ್‌ ಬಾಹ್ಯಾಕಾಶ ನೌಕೆಯಲ್ಲಿ ಹೋಗಿದ್ದ ಈ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ ಎಂದು ನಾಸಾದ ಅಂತಿಮ ವರದಿ ಒಪ್ಪಿಕೊಂಡಿದೆ. ಪ್ರಮುಖ ಎಂಜಿನಿಯರಿಂಗ್ ಮತ್ತು ನಾಯಕತ್ವ ವೈಫಲ್ಯಗಳು ಇದ್ದವು ಎಂದು ವರದಿಯು ಬಹಿರಂಗಪಡಿಸಿದೆ. ಇದನ್ನು 2003 ರಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ದುರಂತದಂತೆಯೇ ನಾಸಾ ಕರೆದಿದೆ. ಕೊಲಂಬಿಯಾ ಬಾಹ್ಯಾಕಾಶ ನೌಕೆಯ ದುರಂತದಲ್ಲಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಸಾವು ಕಂಡಿದ್ದರು. ಎರಡು ಮಾನವ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದ್ದ ಸಂಪೂರ್ಣ ಜವಾಬ್ದಾರಿಯನ್ನು ನಾಸಾ ವಹಿಸಿಕೊಂಡಿದೆ ಎಂದು ಒಪ್ಪಿಕೊಂಡಿದೆ.

311 ಪುಟಗಳ ವರದಿಯಲ್ಲಿ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ಬೋಯಿಂಗ್ ಮತ್ತು ಏಜೆನ್ಸಿಯು ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಸಲುವಾಗಿ ನಿರ್ಣಾಯಕ ಅಲರ್ಟ್‌ಗಳನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದ್ದಾರೆ. ಜೂನ್ 2024 ರಲ್ಲಿ ಯೋಜನೆಯ ಉಡಾವಣೆಯ ಸಮಯದಲ್ಲಿ ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿತ್ತು. ಈ ಪ್ರೊಪಲ್ಷನ್ ವ್ಯವಸ್ಥೆಯು ರಾಕೆಟ್ ಉಡಾವಣೆಗೆ ಅಗತ್ಯವಾದ ಒತ್ತಡವನ್ನು ಒದಗಿಸಬೇಕಿತ್ತು.

ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವೇಶಿಸಿದಾಗ ಮಾತ್ರವೇ ತಿಳಿದಿತ್ತು ಸತ್ಯ

ಸುನೀತಾ ಮತ್ತು ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದಾಗ ಬಳಿಕವೇ ಥ್ರಸ್ಟರ್‌ಗಳು ನಿಷ್ಕ್ರಿಯವಾಗಿದ್ದು ಮತ್ತು ಹೀಲಿಯಂ ಸೋರಿಕೆಯಾಗುತ್ತಿರುವುದು ಗೊತ್ತಾಗಿದೆ. ಬಾಹ್ಯಾಕಾಶ ನೌಕೆ ಡಾಕ್ ಮಾಡಲು ಸಾಧ್ಯವಾದರೂ, ತಾಂತ್ರಿಕ ಸಮಸ್ಯೆಗಳು ನಿರೀಕ್ಷೆಗಳನ್ನು ಮೀರಿದ್ದವು. ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಒತ್ತಡದ ನಡುವೆಯೂ ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಟೈಪ್‌-ಎ ದುರಂತ ಎಂದರೇನು?

ಟೈಪ್ ಎ ಲಿಸ್ಟಿಂಗ್‌ ಎನ್ನುವುದು ಇದು ತುಂಬಾ ಗಂಭೀರ ಅಪಘಾತ ಎಂದರ್ಥ. ಚಾಲೆಂಜರ್ ಮತ್ತು ಕೊಲಂಬಿಯಾ ನೌಕೆಯ ರೀತಿಯ ಘಟನೆ. ಇದು ಮತ್ತೊಂದು ಬಾಹ್ಯಾಕಾಶ ವಿಪತ್ತೂ ಕೂಡ ಆಗಿರಬಹುದು.. ಸುನೀತಾ ಮತ್ತು ವಿಲ್ಮೋರ್ ಮತ್ತೊಂದು ಬಾಹ್ಯಾಕಾಶ ನೌಕೆಯಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದರೂ, ವರದಿಯು ಭಾರಿ ಆರ್ಥಿಕ ನಷ್ಟವನ್ನುಂಟುಮಾಡಿದೆ ಎಂದು ತೋರಿಸುತ್ತದೆ. ನಿಯಮಗಳ ಪ್ರಕಾರ, ಬಾಹ್ಯಾಕಾಶ ನೌಕೆ ಸಂಪೂರ್ಣವಾಗಿ ಸರಿಪಡಿಸಲಾಗದಂತೆ ಕಳೆದುಹೋದರೆ ಅಥವಾ ನಷ್ಟವು ಎರಡು ಮಿಲಿಯನ್ ಡಾಲರ್‌ಗಳನ್ನು ಮೀರಿದರೆ ಟೈಪ್ ಎ ಕೆಟಗರಿಯನ್ನು ನಿಯೋಜಿಸಬಹುದು. ಆದರೂ, ಸ್ಟಾರ್‌ಲೈನರ್ ಮಿಷನ್ $200 ಮಿಲಿಯನ್ ನಷ್ಟವನ್ನು ಅನುಭವಿಸಿದೆ ಎಂದು ಐಸಾಕ್‌ಮನ್ ಬಹಿರಂಗಪಡಿಸಿದ್ದಾರೆ. ಎರಡು ಮಾನವ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವ ಸಂಪೂರ್ಣ ಜವಾಬ್ದಾರಿಯನ್ನು ನಾಸಾ ತೆಗೆದುಕೊಂಡಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಸ್ಟಾರ್‌ಲೈನರ್ ಕೊಲಂಬಿಯಾ ಮಿಷನ್‌ಗೆ ಹೋಲಿಕೆಯೇ?

2003 ರಲ್ಲಿ, ಕಲ್ಪನಾ ಚಾವ್ಲಾ ಮತ್ತು ಆರು ಗಗನಯಾತ್ರಿಗಳನ್ನು ಹೊತ್ತ ಕೊಲಂಬಿಯಾ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಿದ್ದಂತೆ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ಆಗಲೂ, ಬಾಹ್ಯಾಕಾಶ ವಿಜ್ಞಾನಿಗಳು ಬಾಹ್ಯಾಕಾಶ ನೌಕೆಯಲ್ಲಿ ಫೋಮ್ ಸೋರಿಕೆಯಾಗುತ್ತಿದೆ ಎಂದು ಎಚ್ಚರಿಸಿದ್ದರು, ಆದರೆ ಆಡಳಿತ ಮಂಡಳಿ ಅದನ್ನು ನಿರ್ಲಕ್ಷಿಸಿತು. ಫಲಿತಾಂಶ ಎನ್ನುವಂತೆ ನೌಕೆ ಆಗಸದಲ್ಲಿಯೇ ಉರಿದು ಬೂದಿಯಾಗಿತ್ತು. ಸ್ಟಾರ್‌‌ಲೈನರ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಸಂಭವಿಸಿದೆ ಎಂದು ತಿಳಿದಿದ್ದರೂ ನಾಸಾ ಈ ಯೋಜನೆಯನ್ನು ಮುಂದುವರಿಸಿತ್ತು ಎಂದು ವರದಿ ಆರೋಪಿಸಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಎಐ ಜಾಗತಿಕ ಶೃಂಗದಲ್ಲಿ ಗಿನ್ನೆಸ್ ದಾಖಲೆ! ಜವಾಬ್ದಾರಿಯುತ AI ಬಳಸುವುದಾಗಿ 2.50 ಲಕ್ಷ ವಿದ್ಯಾರ್ಥಿಗಳ ಶಪಥ
ಮಕ್ಕಳಿಗೆ ಮೊಬೈಲ್ ಕೊಟ್ರೆ ಮಾತು ನಿಲ್ಲುತ್ತಾ? ಮೊಬೈಲ್ ರೇಡಿಯೇಷನ್‌ ಎಷ್ಟು ಡೇಂಜರ್ ಗೊತ್ತಾ? ಈ ತಪ್ಪು ಮಾಡ್ಬೇಡಿ