
ನವದೆಹಲಿ (ಫೆ.18) ಕಂಕಣ ಸೂರ್ಯಗ್ರಹಣ ಘಟಿಸಿದೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಿದೆ. ಇದು 2026ರ ಮೊದಲ ಸೂರ್ಯಗ್ರಹಣ. ಕಂಕಣ ಸೂರ್ಯಗ್ರಹಣ ವೇಳೆ ಚಿನ್ನದ ಉಂಗುರ ರೀತಿ ಗೋಚರಿಸುತ್ತದೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸುವಾಗ ಸೂರ್ಯನ ಬೆಳಕಿನಲ್ಲಿದ್ದ ಭೂಮಿ ದಿಢೀರ್ ಕತ್ತಲಾದ ವಿಶೇಷ ದೃಶ್ಯ ಸ್ಯಾಟಲೈಟ್ ಸೆರೆ ಹಿಡಿದಿದೆ. ಈ ಬಾರಿಯ ಕಂಕಣ ಸೂರ್ಯಗ್ರಹಣ ಭಾರತ ಸೇರಿದಂತೆ ಏಷ್ಯಾದಲ್ಲಿ ಗೋಚರ ಇರಲಿಲ್ಲ. ಅಂಟಾರ್ಕ್ಟಿಕಾ ಸೇರಿದಂತೆ ಕೆಲ ದೇಶಗಳಲ್ಲಿ ಮಾತ್ರ ಕಂಕಣ ಸೂರ್ಯಗ್ರಹಣ ಗೋಚರವಿತ್ತು. ಈ ವೇಳೆ ಇಡೀ ಅಂಟಾರ್ಕ್ಟಿಕಾ ಮೇಲೆ ಗ್ರಹಣದ ವೇಳೆ ಆವರಿಸಿದ ಕತ್ತಲ ದೃಶ್ಯ ಸೆರೆಯಾಗಿದೆ.
ಸೌತ್ ಕೊರಿಯಾದ GEO-KOMPSAT-2A ಸ್ಯಾಟಲೈಟ್ ಈ ಅದ್ಭುತ ದೃಶ್ಯ ಸೆರೆ ಹಿಡಿದಿದೆ. ಚಂದ್ರ ಸೂರ್ಯನ ಮಧ್ಯಭಾಗಕ್ಕೆ ಬಂದಾಗ ಸೂರ್ಯನ ಕಿರಣಗಳು ಭೂಮಿಗೆ ಬೀಳುವುದನ್ನು ಚಂದ್ರ ತಡೆಯುತ್ತಾನೆ. ಈ ಸೂರ್ಯಗ್ರಹಣದ ಸಂದರ್ಭ ಭೂಮಿಯಲ್ಲಿ ಕತ್ತಲು ಆವರಿಸುತ್ತದೆ. ಈ ವೇಳೆ ಅಂಟಾರ್ಕ್ಟಿಕಾ ಮೇಲೆ ಚಂದ್ರನ ನೆರಳು ಹಾದುಹೋಗುವ ಅದ್ಭುತ ದೃಶ್ಯ ಸೆರೆಯಾಗಿದೆ. ಸೌತ್ ಕೊರಿಯಾ ಈ ವಿಡಿಯೋವನ್ನು ಬಹಿರಂಗಪಡಿಸಿದೆ.
ಹಿಮಗಳಿಂದ ಆವರಿಸಿದ್ದ ಅಂಟಾರ್ಕ್ಟಿಕಾ ಸೂರ್ಯನ ಬೆಳಕಿನಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ಎಲ್ಲೆಡೆ ಬಿಳಿಯ ಹಿಮಗಡ್ಡೆಗಳೇ ಕಾಣುತ್ತದೆ. ಕಂಕಣ ಸೂರ್ಯಗ್ರಹಣ ವೇಳೆ ಬರೋಬ್ಬರಿ 59 ನಿಮಿಷಗಳ ಕಾಲ ಚಂದ್ರನ ನೆರಳು ಭೂಮಿಯ ಮೇಲ ಚಲಿಸಿತ್ತು. ಈ ವೇಳೆ ಅಂಟಾರ್ಕ್ಟಿಕಾದಲ್ಲಿ ಹಗಲಿನ ವೇಳೆ ಕತ್ತಲಾಗಿತ್ತು.
ಕಂಕಣ ಸೂರ್ಯಗ್ರಹಣ ಸಂಪೂರ್ಣವಾಗಿ ಅಂಟಾರ್ಕ್ಟಿಕಾದಲ್ಲಿ ಮಾತ್ರ ಗೋಚರವಿತ್ತು. ಇನ್ನು ದಕ್ಷಿಣ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಭಾಗಶಃ ಗೋಚರಿಸಿತ್ತು. ಸ್ಪಷ್ಟ ಚಿತ್ರಣ ಅಂಟಾರ್ಕ್ಟಿಕಾದಲ್ಲಿ ಲಭ್ಯವಾಗಿದೆ. ಸ್ಯಾಟಲೈಟ್ ಸೆರೆ ಹಿಡಿದ ದೃಶ್ಯದಲ್ಲಿ ಈ ಬದಲಾವಣೆ ಸ್ಪಷ್ಟವಾಗಿದೆ.
ಮೊದಲ ಸೂರ್ಯಗ್ರಹಣ ಸಂಭವಿಸಿದೆ. ಇದೀಗ ಪೂರ್ಣ ಚಂದ್ರಗ್ರಹಣ ಸರದಿ. ಮಾರ್ಚ್ 3ರಂದು ಬ್ಲಡ್ ಮೂನ್ ಘಟಿಸಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.