ಇಸ್ರೋದಿಂದ ಮತ್ತೊಂದು ಸಾಧನೆ: ಭೂ ಪರಿವೀಕ್ಷಣಾ ಉಪಗ್ರಹ EOS8 ಯಶಸ್ವಿ ಉಡಾವಣೆ!

By Chethan Kumar  |  First Published Aug 16, 2024, 9:39 AM IST

ಇಸ್ರೋ ಐತಿಹಾಸಿಕ ಸಾಧನೆ ಮಾಡಿದೆ. ಶ್ರೀಹರಿಕೋಟಾದಿಂದ ಇಸ್ರೋ  ಭೂ ಪರಿವೀಕ್ಷಣಾ ಉಪಗ್ರಹ EOS8 ಯಶಸ್ವಿಯಾಗಿ ಉಡಾಯಿಸಿದೆ. ಸ್ವಾತಂತ್ರ್ಯ ದಿನಾಚರಣೆಗೆ ಈ ಉಪಗ್ರಹ ಉಡ್ಡಯನಕ್ಕೆ ನಿರ್ಧರಿಸಿ ಕೊನೆಯ ಕ್ಷಣದದಲ್ಲಿ ದಿನಾಂಕ ಮುಂದೂಡಲಾಗಿತ್ತು.
 


ಶ್ರೀಹರಿಕೋಟಾ(ಆ.16) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಚಂದ್ರಯಾನ 3 ಬಳಿಕ ಇಸ್ರೋ ಸತತವಾಗಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುತ್ತಿದೆ. ಇದೀಗ ಭೂ ಪರಿವೀಕ್ಷಣಾ ಉಪಗ್ರಹ EOS8 ಯಶಸ್ವಿಯಾಗಿ ಉಡಾವಣೆ ಮಾಡಿದೆ.  ಪಿಎಸ್‌ಎಲ್‌ವಿ-ಸಿ58/ಎಕ್ಸ್‌ಪೋಸಾಟ್‌ ಮತ್ತು ಜುಎಸ್‌ಎಲ್‌ವಿ-ಎಫ್‌14/ಇನ್ಸಾಟ್‌-3ಡಿಎಸ್‌ನ ಬಳಿಕ ಎಸ್‌ಎಸ್‌ಎಲ್‌ವಿ-ಡಿ3 ಸರಣಿಯ ಉಪಗ್ರಹದ ಕೊನೆಯ ಉಡ್ಡಯನ ಇದಾಗಿತ್ತು.

ಇಸ್ರೋ ಉಡ್ಡಯನ ಮಾಡಿರುವ  EOS8 ಉಪಗ್ರಹ, ಮೈಕ್ರೋಸ್ಯಾಟಲೈಟ್‌ನ ವಿನ್ಯಾಸ ಮತ್ತು ಅಭಿವೃದ್ಧಿ, ಮೈಕ್ರೋಸ್ಯಾಟಲೈಟ್ ಬಸ್‌ಗೆ ಹೊಂದಿಕೆಯಾಗುವ ಪೇಲೋಡ್ ರಚನೆ ಮತ್ತು ಭವಿಷ್ಯದ ಕಾರ್ಯಾಚರಣಾ ಉಪಗ್ರಹಗಳಿಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳ ಸಂಯೋಜನೆಗೆ ಸಹಕಾರಿ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ತಿಳಿಸಿದೆ. ಶ್ರೀಹರಿ ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಉಪಗ್ರಹ ಮೂರು ಪೆಲೋಡ್‌ಗಳನ್ನು ಹೊಂದಿದ್ದು, 400 ಜೀಬಿ ಡೇಟಾ ಅಂಗ್ರಹಿಸುವ ಸಾಮರ್ಥ್ಯವೂ ಇದೆ.

Tap to resize

Latest Videos

undefined

ಚಂದ್ರಯಾನದ ರೂವಾರಿ ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಗೌರವ ಡಾಕ್ಟರೇಟ್ ಪ್ರದಾನ

ಯಶಸ್ವಿ ಉಡಾವಣೆ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್, ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ಎಲ್ಲಾ ವಿಭಾಗಕ್ಕೂ ಸೋಮನಾಥ್ ಅಭಿನಂದಿಸಿದ್ದಾರೆ. ಈ ಉಡಾವಣೆಯಿಂದ ಇಸ್ರೋ ಆತ್ಮವಿಶ್ವಾಸ ಹಾಗೂ ಕಾರ್ಯಯೋಜನೆ ಹೆಚ್ಚಾಗಿದೆ ಎಂದಿದ್ದಾರೆ. 

ಆಗಸ್ಟ್ 15 ರಂದು  EOS8 ಉಪಗ್ರಹ ಉಡ್ಡಯನಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಬಳಿಕ 15ರ ಬದಲು ಆಗಸ್ಟ್ 16ರ ಬೆಳಗ್ಗೆ 9.17ಕ್ಕೆ ದಿನಾಂಕ ಹಾಗೂ ಸಮಯ ಮುಂದೂಡಲಾಗಿತ್ತು. ಮುಂದೂಡಿಕೆಗೆ ಇಸ್ರೋ ಯಾವುದೇ ಕಾರಣ ನೀಡಿರಲಿಲ್ಲ.

ಚಂದ್ರಯಾನ 3ರ ಬಳಿಕ ಇಸ್ರೋ ಹಲವು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ಚಂದ್ರಾಯನ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ 2023ರ ಸೆಪ್ಟೆಂಬರ್ 2ರಂದು ಆದಿತ್ಯ ಎಲ್1 ಉಪಗ್ರಹ ಉಡಾವಣೆ ಮಾಡಿತ್ತು. ಕಳೆದ ತಿಂಗಳು ಅದಿತ್ಯ ಎಲ್1 ಉಪಗ್ರಹ ಭೂಮಿಯ ಎಲ್1 ಪಾಯಿಂಟ್ ಸುತ್ತ ಸುತ್ತಿ ತನ್ನ ಮೊದಲ ಹಾಲೋ ಕಕ್ಷೆಯನ್ನು ಪೂರ್ತಿಗೊಳಿಸಿತ್ತು. ಈ ಸುತ್ತು ಹಾಕಲು ಆದಿತ್ಯ ಎಲ್1 ಉಪಗ್ರಹ 178 ದಿನಗಳನ್ನು ತೆಗೆದುಕೊಂಡಿತ್ತು. ಇದೀಗ ಅದಿತ್ಯ ಎಲ್1 ಎರಡನೇ ಕಕ್ಷೆ ಸುತ್ತುಹಾಕಲು ಆರಂಭಿಸಿದೆ. 

ಬಾಹ್ಯಾಕಾಶ ಯಾನಕ್ಕೆ ಇಬ್ಬರ ಹೆಸರು ಖಚಿತ ಪಡಿಸಿದ ಇಸ್ರೋ, ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕದ ಕಂಪೆನಿ
 

click me!