Crows Mating Habits: ಶವದ ಜೊತೆ ಕಾಗೆಗಳ ಲೈಂಗಿಕ ಕ್ರಿಯೆ! ಅಚ್ಚರಿಯ ವಿಡಿಯೋ ವೈರಲ್​

Published : Jun 11, 2025, 01:54 PM ISTUpdated : Jun 11, 2025, 02:15 PM IST
Crows Copulate with Corpses

ಸಾರಾಂಶ

ಪಕ್ಷಿ-ಪ್ರಾಣಿ ಪ್ರಪಂಚವೇ ಒಂದು ವಿಸ್ಮಯವಾಗಿದ್ದು, ಸತ್ತ ಕಾಗೆಯ ಜೊತೆ ಜೀವಂತ ಕಾಗೆಗಳು ಶವ ಸಂಭೋಗ ನಡೆಸುವ ಅಧ್ಯಯನದ ವಿಡಿಯೋ ಒಂದು ವೈರಲ್​ ಆಗ್ತಿದೆ. ಇಲ್ಲಿದೆ ನೋಡಿ ಡಿಟೇಲ್ಸ್​...

ಪಕ್ಷಿ-ಪ್ರಾಣಿ ಪ್ರಪಂಚವೇ ಒಂದು ವಿಸ್ಮಯ. ಯಾರ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ದಿನನಿತ್ಯ ಈ ಪ್ರಕೃತಿಯಲ್ಲಿ ಆಗುತ್ತಲೇ ಇರುವಂತೆ ಈ ಪ್ರಾಣಿ-ಪಕ್ಷಿ ಲೋಕದಲ್ಲಿಯೂ ನಡೆಯುತ್ತಲೇ ಇರುತ್ತವೆ. ವಿಜ್ಞಾನಕ್ಕೇ ಸವಾಲೆಸೆಯುವ, ಯಾವ ವಿಜ್ಞಾನಿಗಳಿಂದಲೂ ಕಂಡು ಹಿಡಿಯಲು ಸಾಧ್ಯವಾಗದ ಅದೆಷ್ಟೋ ವಿಚಿತ್ರಗಳಿವೆ. ಮನುಷ್ಯ ತಾನು ಎಷ್ಟೇ ಬುದ್ಧಿವಂತ ಎಂದುಕೊಂಡರೂ, ಯುಗಗಳು ಎಷ್ಟೇ ಬದಲಾದರೂ ಈ ಸೃಷ್ಟಿಯ ಮುಂದೆ ಎಲ್ಲವೂ ಗೌಣವೇ. ಅಧ್ಯಯನ ಮಾಡಿದಷ್ಟೂ, ಅಗೆದು ಬಗೆದಷ್ಟೂ ಈ ಪ್ರಪಂಚದ ಬಗ್ಗೆ ತಿಳಿವಳಿಕೆ ಕಡಿಮೆಯೇ ಎನ್ನಿಸುತ್ತದೆ. ಅಂಥದ್ದೇ ಒಂದು ಅದ್ಭುತ ಕಾಗೆಗಳ ಲೋಕದ್ದು. ಅಷ್ಟಕ್ಕೂ ಕಾಗೆಗಳು ಒಗ್ಗಟ್ಟಿಗೆ ಹೆಸರಾಗಿದೆ. ಏನೇ ಆಹಾರ ಇತ್ತರೂ, ಉಳಿದ ಕಾಗೆಗಳನ್ನು ಕೂಗಿ ಕರೆದು ಒಟ್ಟಿಗೇ ತಿನ್ನುವುದು ಕಾಗೆಗಳ ರೂಢಿ. ಆದರೆ ಇದೀಗ ಅದಕ್ಕಿಂತಲೂ ವಿಚಿತ್ರ ಎನ್ನಿಸುವ ಕಾಗೆಗಳ ಶವ ಸಂಭೋಗದ ವಿಡಿಯೋ ವೈರಲ್​ ಆಗಿದೆ. ಅಧ್ಯಯನದ ವರದಿಯಲ್ಲಿ ಈ ವಿಚಿತ್ರ ತೆರೆದಿಡಲಾಗಿದೆ.

ಸಾಮಾನ್ಯವಾಗಿ ಮನುಷ್ಯರಂತೆಯೇ ಕೆಲವು ಜಾತಿಯ ಪಕ್ಷಿಗಳು ತಮ್ಮ ಜಾತಿಯ ಪಕ್ಷಿ ಸಾವನ್ನಪ್ಪಿದರೆ ಅಂತಿಮ ಸಂಸ್ಕಾರ ನಡೆಸುತ್ತವೆ. ಕಾಗೆಗಳು ಕೂಡ ಹೀಗೆಯೇ ಮಾಡುವುದು ಇದೆ. ಇದರ ಬಗ್ಗೆ ಇದಾಗಲೇ ಸಂಶೋಧನೆ ಕೂಡ ನಡೆದಿದೆ. ಆದರೆ ಇಲ್ಲಿ ಹೇಳಹೊರಟಿರುವುದು ಸಂಶೋಧಕರ ಊಹೆಗೂ ನಿಲುಕದ ಒಂದು ಅಧ್ಯಯನ. ಅದು ಬದುಕಿರುವ ಕಾಗೆಗಳು ಸತ್ತ ಕಾಗೆಯ ಜೊತೆ ಸಂಭೋಗ ನಡೆಸುವುದು! ಕಾಗೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಅಮೆರಿಕದ ಕೇಲಿ ಸ್ವಿಫ್ಟ್ ಎಂಬ ಸಂಶೋಧಕ ಕೆಲ ವರ್ಷಗಳ ಹಿಂದೆ ಕಾಗೆಗಳ ಈ ವಿಚಿತ್ರ ನಡವಳಿಕೆಯ ಅಧ್ಯಯನ ನಡೆಸಿದ್ದು, ಅದರ ವಿಡಿಯೋ ಪುನಃ ವೈರಲ್​ ಆಗುತ್ತಿದೆ.

ಕೇಲಿ ಸ್ವಿಫ್ಟ್ ಮರದ ಕೆಳಗೆ ಸತ್ತ ಕಾಗೆಯ ಕಳೆಬರಹವನ್ನು ಇಟ್ಟರು ಮತ್ತು ಕಾಗೆಗಳು ಯಾವ ರೀತಿಯಲ್ಲಿ ವರ್ತಿಸುವುದು ಎಂದು ತಿಳಿಯಲು ಬಯಸಿದರು. ಅವರು ಹೀಗೆ ಮಾಡಲು ಕಾರಣವಿತ್ತು. ಅದೇನೆಂದರೆ, ಕಾಗೆಗಳು ಸತ್ತ ಕಾಗೆ ಅಂತ್ಯಕ್ರಿಯೆ ನಡೆಸುತ್ತವೆ ಎಂಬುದು. ಈ ಬಗ್ಗೆ ಸ್ಟಡಿ ಮಾಡಿದ್ದ ಅವರು, ಮತ್ತೇನು ವಿಷಯ ಸಿಗಬಹುದು ಎಂದು ನೋಡುವ ತವಕದಲ್ಲಿ ಇದ್ದಾಗಲೇ ಸಿಕ್ಕಿದ್ದು ಈ ಲೈಂಗಿಕ ಕ್ರಿಯೆ! ಸತ್ತ ಕಾಗೆಯ ಬಳಿ ಬಂದ ಕಾಗೆಯೊಂದು ಮಾಮೂಲಿನಂತೆ ತನ್ನ ಬಳಗವನ್ನೆಲ್ಲಾ ಕರೆದಿದೆ. ಬಳಿ ಸತ್ತ ಕಾಗೆಯೊಂದಿಗೆ ಶವಸಂಭೋಗ ನಡೆಸಿದೆ!

ಈ ಅಸಾಮಾನ್ಯ ವರ್ತನೆಯನ್ನು ತಜ್ಞರು ಕೂಡ ನೋಡಿದ್ದಾರೆ. ಆರಂಭದಲ್ಲಿ ಕಾಗೆಯ ಶವ ನೋಡಿದ ಇನ್ನೊಂದು ಕಾಗೆಯು ಕೂಗಲಿಲ್ಲ ಮತ್ತು ಕಳೆಗೆ ಹಾರಿ ಬಂದು ಶವದ ಮೇಲೆ ಕುಳಿತುಕೊಂಡಿತು. ಇದರ ಬಳಿಕ ಸಾಮಾನ್ಯವಾಗಿ ಕಾಗೆಗಳು ಲೈಂಗಿಕ ಕ್ರಿಯೆ ಮಾಡುವಂತೆ ತನ್ನ ರೆಕ್ಕೆಗಳನ್ನು ಇಳಿಸಿ, ಬಾಲವನ್ನು ನಿಲ್ಲಿಸಿತು. ಇದು ಕಾಗೆಗಳು ಸಾಮಾನ್ಯವಾಗಿ ಮಾಡುವ ಲೈಂಗಿಕ ಕ್ರಿಯೆಯಂತಿತ್ತು. ಬಳಿಕ ಸ್ವಿಫ್ಟ್​ ಅವರು ಕಾಗೆಗಳ ನಡವಳಿಕೆ ಬಗ್ಗೆ ಪೂರ್ಣ ವರದಿ ರೆಡಿ ಮಾಡಿದರು. ಇನ್ನಷ್ಟು ಅಧ್ಯಯನದ ಬಳಿಕ ಅವರು, ತಮ್ಮ ಅಧ್ಯಯನದಲ್ಲಿ ಶೇ.24ರಷ್ಟು ಸಂದರ್ಭಗಳಲ್ಲಿ ಪಕ್ಷಿಗಳು ಸತ್ತಿರುವಂತಹ ಪಕ್ಷಿಯನ್ನು ಸ್ಪರ್ಶಿಸಿದೆ, ಎಳೆದಿದೆ ಹಾಗೂ ಶೇ.4ರಷ್ಟು ಸಂದರ್ಭಗಳಲ್ಲಿ ಲೈಂಗಿಕ ಕ್ರಿಯೆಗಳು ನಡೆಸಿವೆ ಎಂದಿದ್ದಾರೆ. ಇದು ಯಾಕೆ ಎನ್ನುವುದು ಇದುವರೆಗೂ ತಿಳಿದಿಲ್ಲ. ಅಧ್ಯಯನ ಮುಂದುವರೆದಿದೆ. ಅದರ ವಿಡಿಯೋ ಇಲ್ಲಿದೆ...

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಪವಾಡ : ನಾಪತ್ತೆ ಆಗಿದ್ದ 1 ಉಪಗ್ರಹ ಕಕ್ಷೆಗೆ!
ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?