ಸೌರಮಂಡಲದ ಉಗಮದ ಬಗ್ಗೆ ಅಧ್ಯಯನ ನಡೆಸಲಿರುವ NASAದ ಬಾಹ್ಯಾಕಾಶ ನೌಕೆ Lusy

By Manjunath Nayak  |  First Published Oct 16, 2021, 5:32 PM IST
  • ಸೌರಮಂಡಲದ ಉಗಮದ ಬಗ್ಗೆ ತಿಳಿಯಲು  ನಾಸಾದ ಹೊಸ ಯೋಜನೆ
  • 12 ವರ್ಷಗಳ ಕಾಲ  ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಲಿರುವ ಲೂಸಿ
  • ಅಕ್ಟೋಬರ್‌ 16 ರಂದು  ಮಧ್ಯಾಹ್ನ ಸುಮಾರು 3.00 ಕ್ಕೆ ಉಡಾವಣೆ
     

ಫ್ಲೋರಿಡಾ (ಅ. 16) ಬಾಹ್ಯಾಕಾಶ ವಿಜ್ಞಾನದ (Space Science) ಬಗ್ಗೆ ಸಂಶೋಧನೆ ನಡೆಸಿದಾಗ ಪ್ರತಿ ಬಾರಿ ಕುತೂಹಲಕಾರಿ ಸಂಗತಿಗಳು ಅನಾವರಣಗೊಳ್ಳುತ್ತವೆ. ಮಾನವ ಬಾಹ್ಯಾಕಾಶವನ್ನು ಅರಿತಿಕೊಳ್ಳಲು ಪ್ರಯತ್ನಿಸಿದಷ್ಟು ಅದರ ವಿಸ್ತಾರ ಹೆಚ್ಚುತ್ತಾ ಹೋಗುತ್ತದೆ. ಬಗೆದಷ್ಟು ಹೊಸ ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಈಗ ನಾಸಾ ಸಂಸ್ಥೆಯೂ ಹೊಸದೊಂದು ಯೋಜನೆಗೆ ಕೈ ಹಾಕಿದೆ.

ಈ ಬಾರಿ ಸೌರಮಂಡಲದ ಉಗಮದ ಬಗ್ಗೆ ಅಧ್ಯಯನ ನಡೆಸಲಿರುವ ಲೂಸಿ (Lusy) ಎಂಬ ಬಾಹ್ಯಾಕಾಶ್ಯ ನೌಕೆಯನ್ನು ಉಡಾಯಿಸಿದೆ. ಸೌರಮಂಡಲದ ಹೊರ ಭಾಗದಲ್ಲಿ ಈವರೆಗೂ ಯಾರು ತಲುಪದ ಕತ್ತಲೆಯಿಂದಲೇ ಕೂಡಿರುವ ಜಾಗಕ್ಕೆ ನಾಸಾ ನೌಕೆ ಕಳುಹಿಸುವ ಸಾಹಸಕ್ಕೆ ಕೈ ಹಾಕಿದೆ. ನಾಸಾ ಈ ಯೋಜನೆಗೆ ಸುಮಾರು  7,351 ಕೋಟಿ ($981 million) ರೂಪಾಯಿಗಳನ್ನು ಖರ್ಚು ಮಾಡಿದೆ. ಗುರು ಗ್ರಹದ (Jupiter) ಹತ್ತಿರ ಸೂರ್ಯನನ್ನು (Sun) ಸುತ್ತುತ್ತಿರುವ ಕ್ಷುದ್ರಗ್ರಹಗಳು (Asteroids) ಬಗ್ಗೆ ಅಧ್ಯಯನ ನಡೆಸಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದು ಸಹಾಯ ಮಾಡಲಿದೆ.

Tap to resize

Latest Videos

undefined

20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ!

ಲೂಸಿ ಬಾಹ್ಯಾಕಾಶ್ಯ ನೌಕೆಯ ವಿಶೇಷತೆ:

ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ (Instagram)  ಪೋಸ್ಟ್‌ ಮಾಡಿರುವ ನಾಸಾ ಸಂಸ್ಥೆ, ಬಾಹ್ಯಾಕಾಶ ನೌಕೆಯನ್ನು ತನ್ನ ಗುರಿಯತ್ತ ಹೊತ್ತೊಯ್ಯುವ ಅಟ್ಲಾಸ್‌ 5 ರಾಕೆಟ್‌ನ (Atlas 5 Rocket) ಲಾಂಚ್‌ ಪ್ಯಾಡ್‌ ಬಳಿಯ ಚಿತ್ರವನ್ನು ಹಂಚಿಕೊಂಡಿದೆ. ಈ ರಾಕೆಟ್‌ನ್ನು ನಾಸಾ ಇಂದು (ಅಕ್ಟೋಬರ್‌ 16) ಮಧ್ಯಾಹ್ನ ಸುಮಾರು 3:00 ಕ್ಕೆ ಉಡಾವಣೆ ಮಾಡಿದ್ದೂ ತನ್ನ ವೆಬಸೈಟ್‌ ಮತ್ತು ಯುಟ್ಯೂಬ್‌ (YouTube) ಚಾನೆಲ್‌ಗಳಲ್ಲಿ ಇದರ ಕ್ಷಣ ಕ್ಷಣದ ನೇರಪ್ರಸಾರವನ್ನು ಕೂಡ ಮಾಡುತ್ತಿದೆ. ಫ್ಲೋರಿಡಾದ ಬಾಹ್ಯಾಕಾಶ ಉಡಾವಣೆ ನಿಲ್ದಾಣದಿಂದ (Cape Canaveral Space Force Station) ಈ ರಾಕೆಟ್ ಉಡಾವಣೆ ಮಾಡಲಾಗಿದೆ.

'ಲೂಸಿ' ಹೆಸರಿನ ಹಿಂದಿನ ರಹಸ್ಯ:

1974 ರಲ್ಲಿ ಮಾನವನ ಉಗಮದ ಬಗೆಗಿನ ರಹಸ್ಯಗಳನ್ನು ಭೇದಿಸಲು ಸಹಾಯ ಮಾಡಿದ, ಈಥಿಯೋಪಿಯಾದಲ್ಲಿ(Ethiopia) ಭೂಗರ್ಭದಿಂದ ಹೊರ ತೆಗೆದ 3.3 ಮಿಲಿಯನ್‌ ವರ್ಷ ಹಳೆಯ ಪಳೆಯುಳಿಕೆ ಹೆಸರನ್ನು ಈ ನೌಕೆಗೆ ಬಳಸಲಾಗಿದೆ. ಈಗ ಈ ಯೋಜನೆಯ ಮೂಲಕ ಸೌರಮಂಡಲದ ಉಗಮದ ಬಗೆಗಿನ ರಹಸ್ಯಗಳನ್ನು ಭೇದಿಸಲು ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಲೂಸಿ ನೌಕೆಯೂ ಗುರು ಗ್ರಹದ ಸುತ್ತ 12 ವರ್ಷಗಳ ಕಾಲ ಪ್ರದಕ್ಷಿಣೆ ಹಾಕಲಿದ್ದು ಕನಿಷ್ಟ 6 ಕ್ಷುದ್ರ ಗ್ರಹಗಳ ಚಿತ್ರಣಗಳನ್ನು ಪಡೆದು ಅವುಗಳ ಸಂಯೋಜನೆ (Compositions) ಬಗ್ಗೆ ಅಧ್ಯಯನ ನಡೆಸಲಿದೆ. ಈ ಯೋಜನೆಯ ಮೂಲಕ ಸೌರಮಂಡಲದ ಬಗೆಗಿನ ನಮ್ಮ ತಿಳಿವಳಿಕೆ ಇನ್ನಷು ಹೆಚ್ಚಲಿದೆ ಎಂದು ನಾಸಾ ತಿಳಿಸಿದೆ. 

 

 
 
 
 
 
 
 
 
 
 
 
 
 
 
 

A post shared by NASA (@nasa)

 

12 ವರ್ಷ ಬಾಹ್ಯಾಕಾಶದಲ್ಲಿ ಇರಲಿರುವ ಲೂಸಿ:

ʼನಮ್ಮ ತಂಡವು ಅತ್ಯದ್ಭುತ ನೌಕೆಯೊಂದನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ' ಎಂದು ಲೂಸಿ ಪ್ರಾಜೆಕ್ಟ ಮ್ಯಾನೇಜರ್  Donya Douglas-BradShaw ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. 1991ರಲ್ಲಿ  ಗೆಲಿಲಿಯೋ (Galileo) ಬಾಹ್ಯಾಕಾಶ ನೌಕೆಯನ್ನು  ಮೊದಲ ಬಾರಿಗೆ ಗುರು ಗ್ರಹದ ಬಳಿ ಕಳುಹಿಸಲಾಗಿತ್ತು. ಅದಾದ ನಂತರ ಈ ಭಾಗಕ್ಕೆ ನೌಕೆಗಳನ್ನು ಕಳುಹಿಸುವ ಹಲವಾರು ಯೋಜನೆಗಳು ಕಾರ್ಯ ರೂಪಕ್ಕೆ ಬಂದಿವೆ. ಆದರೆ ಗುರು ಗ್ರಹದ ಟ್ರೋಜಾನ್ಸ್‌(Trojans) ಬಳಿ ಇವರೆಗೂ ಯಾವುದೇ ನೌಕೆ ಹೋಗಿಲ್ಲ. ಈಗ ಕಳುಹಿಸುತ್ತಿರುವ ಲೂಸಿ ನೌಕೆಯು ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಲಿದೆ ಎಂದು ನಾಸಾ ತಿಳಿಸಿದೆ.‌ ನಾಸಾದ ಈ ಬಾಹ್ಯಾಕಾಶ ನೌಕೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದು ಸೌರಮಂಡಲದ ಉಗಮದ ಬಗೆ ರಹಸ್ಯಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾಲವೇ ತಿಳಿಸಲಿದೆ. 

21ನೇ ಶತಮಾನದಲ್ಲಿ ವಿಶ್ವವನ್ನು ಒಗ್ಗೂಡಿಸುವಲ್ಲಿ ಸ್ಪೇಸ್‌ ಪಾತ್ರ ಬಹಳ ಮಹತ್ವದ್ದು!

click me!